ಗುಳೇಗುಡ್ಡ

ಕೆಲವಡಿ ಅಕ್ಷರ ಜಾತ್ರೆಗೆ ಕ್ಷಣಗಣನೆ

ಕೆಲವಡಿ ಅಕ್ಷರ ಜಾತ್ರೆಗೆ ಕ್ಷಣಗಣನೆ

ಗುಳೇದಗುಡ್ಡ ತಾಲೂಕಿನ 2 ನೇಯ ಕನ್ನಡ ಸಾಹಿತ್ಯ ಸಮ್ಮೇಳನ: ಹಬ್ಬದ ವಾತಾವರಣ

ಗುಳೇದಗುಡ್ಡ,ಮಾ.19 : ತಾಲೂಕು ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನ ಸಮೀಪದ ಕೆಲವಡಿ ಗ್ರಾಮದ ದಿ. ಮುತ್ತನಗೌಡ ಎಸ್. ಪಾಟೀಲ ಸಾ.ತಿಮ್ಮಸಾಗರ ಇವರ ಸ್ಮರಣಾರ್ಥ ಲಕ್ಷ್ಮೀ ರಂಗನಾಥ ಕಲ್ಯಾಣ ಮಂಟಪದಲ್ಲಿ ಶನಿವಾರ ಜರುಗುವುದು. 

ಪ್ರಧಾನ ವೇದಿಕೆಯಾಗಿ ಶ್ರೀಲಕ್ಷ್ಮೀ ರಂಗನಾಥ ಸ್ವಾಮಿ ಕೆಲವಡಿ, ಮಹಾಮಂಟಪ ಲಿಂ. ಕಾಡಸಿದ್ದೇಶ್ವರ ಮಹಾಸ್ವಾಮಿಗಳು ಹಾಗೂ ಕನಕರಾಯಪ್ಪ ಮಹಾದ್ವಾರ ನಿರ್ಮಿಸಲಾಗಿದೆ. ಬೆಳಿಗ್ಗೆ 7 ಗಂಟೆಗೆ ಧ್ವಜಾರೋಹಣ ಜರುಗಲಿದ್ದು ರಾಷ್ಡ್ರ ಧ್ವಜಾರೋಹಣವನ್ನು  ಕೆಲವಡಿ   ಗ್ರಾಪಂ ಅಧ್ಯಕ್ಷ ರಮೇಶ ಗೌಡರ, ನಾಡ ಧ್ವಜಾರೋಹಣವನ್ನು  ಪ್ರೋಬೆಷನರಿ ಎಸಿ  ಕಾರ್ತಿಕ್ ಎಂ., ಪರಿಷತ್ತಿನ ಧ್ವಜಾರೋಹಣವನ್ನು  ಕಸಾಪ ತಾಲೂಕು ಅಧ್ಯಕ್ಷ ಸಿ.ಎಂ.ಜೋಶಿ  ನೆರವೇರಿಸಲಿದ್ದಾರೆ. 

ಮೆರವಣಿಗೆ: ಸಮ್ಮೇಳನಾಧ್ಯಕ್ಷರ ನೇತೃತ್ವದಲ್ಲಿ ತಾಯಿ ಭುವನೇಶ್ವರಿ ದೇವಿ ಭಾವಚಿತ್ರದ ಪೂಜೆ ಹಾಗೂ ಮೆರವಣಿಗೆ ಬೆಳಿಗ್ಗೆ 8 ಗಂಟೆಗೆ ಜರುಗಲಿದೆ. ಕೆಲವಡಿ ಗ್ರಾಪಂ ಉಪಾಧ್ಯಕ್ಷೆ ಜ್ಯೋತಿ ಕನಕಪ್ಪ ಇಮಾಮದಾರ (ಪೂಜಾರ) ಭುವನೇಶ್ವರಿದೇವಿ ಪೂಜೆ, ತಾಪಂ ಅಧ್ಯಕ್ಷೆ ರೇಣುಕಾ ನಿಂಗಪ್ಪ ಗಾಜಿ ಅವರು  ಮೆರವಣಿಗೆ ಉದ್ಗಾಟನೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ  ಕಾಂಗ್ರೇಸ್ ಮುಖಂಡ ಪ್ರಕಾಶ ಮೇಟಿ ಪಾಲ್ಗೊಳ್ಳುವರು.

ಬೆಳಿಗ್ಗೆ 11 ಗಂಟೆಗೆ ಉದ್ಘಾಟನೆ ಜರುಗಲಿದ್ದೂ, ತಿಮ್ಮಸಾಗರ-ಗುಳೇದಗುಡ್ಡದ ಅಭಿನವ  ಕಾಡಸಿದ್ದೇಶ್ವರ ಶ್ರೀಗಳು ಸಾನಿಧ್ಯ ವಹಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ, ಬಾದಾಮಿ ಕ್ಷೇತ್ರ ಶಾಸಕ ಸಿದ್ದರಾಮಯ್ಯನವರು ಅಧ್ಯಕ್ಷತೆವಹಿಸುವರು. ಸಮ್ಮೇಳನದ ಸರ್ವಾಧ್ಯಕ್ಷತೆ  ಡಾ. ಸಂಗಮೇಶ ಕಲ್ಯಾಣಿ ವಹಿಸಲಿದ್ದಾರೆ. ಕಸಾಪ ತಾಲೂಕಾ ಅಧ್ಯಕ್ಷ ಸಿ.ಎಂ.ಜೋಶಿ ಸ್ವಾಗತಿಸಲಿದ್ದಾರೆ. ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಶೈಲ ಕರಿಶಂಕರಿ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಸಂಸದ ಪಿ.ಸಿ.ಗದ್ದಿಗೌಡರ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಧ್ವಜಹಸ್ತಾಂತರ ನಿಕಟಪೂರ್ವ ಅಧ್ಯಕ್ಷ ಡಾ. ಭೀಮನಗೌಡ ಪಾಟೀಲ ಅವರಿಂದ ನಡೆಯುತ್ತದೆ. ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಸ್ಮರಣ ಸಂಚಿಕೆ ಬಿಡುಗಡೆ  ಮಾಡಲಿದ್ದಾರೆ. ಜಿಪಂ ಸದಸ್ಯರ ಆಸಂಗೆಪ್ಪ ನಕ್ಕರಗುಂದಿ ಚಿತ್ರಕಲಾ ಪ್ರದರ್ಶನ ಉಧ್ಘಾಟಿಸಲಿದ್ದಾರೆ.  ಪುಸ್ತಕ ಮಳಿಗೆಗಳನ್ನು ಜಿಪಂ ಸದಸ್ಯೆ  ಸರಸ್ವತಿ ಮೇಟಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎಸ್.ಜಿ.ಜಂಜಯ್ಯನಮಠ, ಬಿ.ಬಿ.ಚಿಮ್ಮನಕಟ್ಟಿ, ರಾಜಶೇಖರ ಶೀಲವಂತ, ಹಣಮಂತ ಮಾವಿನಮರದ, ಎಮ್.ಕೆ.ಪಟ್ಟಣಶೆಟ್ಟಿ, ಶಾಂತಗೌಡಾ ಪಾಟೀಲ, ಕೃಷ್ಣಾ ಓಗೆಣ್ಣವರ, ಕನಕಪ್ಪ ಬಂದಕೇರಿ, ಕೈಲಾಸ ಕುಂಬಾರ, ರೇಣವ್ವ ಬಾಲಪ್ಪ ಮದಕಟ್ಟಿ, ಮಹೇಶ ಹೊಸಗೌಡ್ರ, ಸಂಜಯ ಬರಗುಂಡಿ, ಹೊಳಬಸು ಶೆಟ್ಟರ್, ರಂಗಣ್ಣ ಕುಲಕರ್ಣಿ, ಪ್ರಮೋದ ಕವಡಿಮಟ್ಟಿ, ಸಂಜಯ ಕಾರಕೂನ,  ಬಿ.ಕೆ.ನಂದನೂರ, ಡಾ.ಎಚ್.ಆರ್.ದೇಸಾಯಿ, ರವಿ ಅಂಗಡಿ, ಭಾರತಿ ವಾಸುದೇವ ಕಾಮಣ್ಣವರ, ಯಲ್ಲವ್ವ ರವಿಕುಮಾರ ಗಾಣಿಗೇರ,ರಂಗಪ್ಪ ಮುತ್ತಪ್ಪ ಕೇಸನೂರ, ಆಶಾ ಸುಧಾ ಚಿಂತಾಕಲ್, ಅನೀಲ ಯಂಕಪ್ಪ ಹೊಸಗೌಡ್ರ, ಮುತ್ತವ್ವ ಶಿವಶಂಕರ ವಾಲ್ಮೀಕಿ, ಮಹಾಲಿಂಗವ್ವ ಗದಿಗೆಪ್ಪ ಎಮ್ಮಿ, ಸಂಗವ್ವ ಎಲ್ಲಪ್ಪ ಕುಂದರಗಿ ಹಾಗೂ  ತಾಲೂಕಾ ಅಧಿಕಾರಿಗಳು ವಿಶೇಷ ಆಮಂತ್ರಿತರಾಗಿ ಪಾಲ್ಗೊಳ್ಳಲಿದ್ದಾರೆ.

ತಾಲೂಕಾ ದರ್ಶನ ಗೋಷ್ಟಿ :  ಪ್ರೊ. ರಾಮಣ್ಣ ಸಂದಿಮನಿ ಅಧ್ಯಕ್ಷತೆವಹಿಸಲಿದ್ದೂ, ಗುಳೇದಗುಡ್ಡ ತಾಲೂಕಾ ಕೆರೆಗಳ ಸಂರಕ್ಷಣೆ ಕುರಿತು ಡಾ.ಸಿದ್ದು ಮಡಿವಾಳರ, ಗುಳೇದಗುಡ್ಡ ತಾಲೂಕಾ ಪರಿಸರ ಮತ್ತು ಸಾವಯವ ಕೃಷಿ ಕುರಿತು  ಆನಂದ ಗೌಡರ, ಕೆಲವಡಿ ಸಾಂಸ್ಕೃತಿಕ ವೈಭವ ಕುರಿತು ಡಾ.ಚಂದ್ರಶೇಖರ ಕಾಳನ್ನವರ, ಹಂಗರಗಿ ಹನ್ನೆರಡು ವಿಷಯ ಕುರಿತು ಪ್ರೊ.ಎಸ್.ವಾಯ್. ಗೌಡಪ್ಪನವರ, ಗುಳೇದಗುಡ್ಡ ಪರಿಸರದ ನೇಕಾರಿಕೆ ಮತ್ತು ಜವಳಿಪಾರ್ಕ್ ಕುರಿತು ಪ್ರೊ. ಸುರೇಶ.ಸಿ.ಮೇಟಿ ವಿಷಯ ಮಂಡಿಸುವರು. ಅತಿಥಿಗಳಾಗಿ ಭೀಮಪ್ಪ ತಳವಾರ, ಅಜರುದ್ದೀನ ಖಾಜಿ, ರೇಣುಕಾ ಶಂಕರಗೌಡ ಗೌಡರ, ಯಲ್ಲವ್ವ ಬಸಪ್ಪ ಸಂಗೊಂದಿ, ಶಿವವ್ವ ಬಸಯ್ಯ ಕೆರಕಲಮಟ್ಟಿ, ಸಂತೋಷ ಪಟ್ಟಣಶೆಟ್ಟಿ ಹಾಜರಿರುವರು. 

ಸರ್ವಾಧ್ಯಕ್ಷರ ಬದುಕು-ಬರಹ: ಸರ್ವಾಧ್ಯಕ್ಷರ ಬದುಕು ಕುರಿತು ವಿಮರ್ಶಕ ಪಿ.ಯು.ಪಾಡಾ, ಸರ್ವಾಧ್ಯಕ್ಷರ ಬರಹ ಕುರಿತು ಡಾ. ಎಚ್.ಎಸ್.ಘಂಟಿ ಮಾತನಾಡಲಿದ್ದಾರೆ. ಅಧ್ಯಕ್ಷತೆ ಪ್ರೊ.ಜಿ.ಕೆ.ತಳವಾರ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಾಹಿತಿ ಶಿವಾನಂದ ಶೆಲ್ಲಿಕೇರಿ, ಡಾ. ಜಿ.ಐ.ನಂದಿಕೋಲಮಠ ಸಿ.ವಾಯ್.ಸಂಗಮ, ಬಿ.ಕೆ.ದೊಡಮನಿ, ಅತಿಥಿಗಳಾಗಿ ಗ್ರಾಪಂ ಸದಸ್ಯರಾದ  ನಾಗಪ್ಪ ಸಿದ್ದಪ್ಪ ಮನಗೂಳಿ, ಲಕ್ಷ್ಮೀೀಬಾಯಿ ವಾಲೀಕಾರ, ರತ್ನಾ ಅಶೋಕ ಬಡಿಗೇರ, ಮಲ್ಲಿಕಾರ್ಜುನ ರಂಗಪ್ಪ ಗಂಗಶೆಟ್ಟಿ ಭಾಗವಹಿಸಲಿದ್ದಾರೆ. ಸಂವಾದಕರಾಗಿ ಡಾ.ಚಂದ್ರಶೇಖರ ಕಾಳಣ್ಣವರ, ಬಸವರಾಜ ಯಂಡಿಗೇರಿ, ನೀಲಕಂಠಯ್ಯ ಸಿಂದಗಿಮಠ, ಮಹದೇವ ಜಗತಾಪ, ಡಾ.ಬಸವರಾಜ ಚವಡಿ, ಹುಚ್ಚೇಶ ಯಂಡಿಗೇರಿ,  ದಾದಾಪೀರ ಕಲಬುರ್ಗಿ, ಎಸ್.ಎಂ.ಪಾಟೀಲ, ಅಶೋಕ ಹೆಗಡಿ, ಶಂಕರ ಬಸುಪಟ್ಟದ, ಸುರೇಶ ವಗ್ಗಾ, ಬಿ.ಎಂ.ಸಂಕನೂರ ಪಾಲ್ಗೊಳ್ಳುವರು. 

ಕವಿಗೋಷ್ಠಿ : ಡಾ.ರಾಜಶೇಖರ ಬಸುಪಟ್ಟದ  ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ಜರುಗಲಿದ್ದೂ, ಪ್ರೊ.ಚಂದ್ರಶೇಖರ ಹೆಗಡೆ ಆಶಯ ನುಡಿ ಹೇಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಿ.ಯು.ಪಾಟೀಲ, ಜ್ಯೋತಿ ಗಿರೀಶ್, ಶ್ರೀಮತಿ ಜಿ.ಎಂ.ಕಾಳಗಿ, ಗ್ರಾಪಂ ಸದಸ್ಯರಾದ ಅಯ್ಯಪ್ಪ ರಂಗಪ್ಪ ಸಿಮಿಕೇರಿ, ಶ್ರೀಮತಿ ಸುಮಂಗಲಾ ಹನಮಂತ ಮಾದರ ಪಾಲ್ಗೊಳ್ಳುವರು. ವಿಜಯ ನಿಡಗುಂದಿ, ಅನ್ನಪೂರ್ಣ ಜವಳಿ, ಈರಮ್ಮ ಅಬ್ಬಿಗೇರಿ, ಬಸವರಾಜ ಮಿಣಜಗಿ, ಸಿದ್ದು ರಾವಳ, ಶಿವಕುಮಾರ ಕರನಂದಿ, ಸಂಗಯ್ಯ ಸಿಂದಗಿಮಠ, ಬಿ.ವಾಯ್.ಗೌಡರ್, ಯಲ್ಲಪ್ಪ ಮನ್ನಿಕಟ್ಟಿ. ಕವನವಾಚನ ಮಾಡುವರು.

ಬಹಿರಂಗ ಅಧಿವೇಶನ : ಕಸಾಪ ಅಧ್ಯಕ್ಷ ಸಿ.ಎಂ.ಜೋಶಿ ಬಹಿರಂಗ ಅಧಿವೇಶನದ ಅಧ್ಯಕ್ಷತೆವಹಿಸಲಿದ್ದೂ, ರಾಜಶೇಖರ ಪಾಗಿ ನಿರ್ಣಯ ಮಂಡನೆ  ಮಾಡಲಿದ್ದಾರೆ. ತಾಲೂಕಾ ಕಸಾಪ ಕಾರ್ಯಕಾರಿ ಪದಾಧಿಕಾರಿಗಳು ಉಪಸ್ಥಿತರಿರುವರು. 

ಸಾಧಕರಿಗೆ ಸನ್ಮಾನ ಹಾಗೂ ಸಮಾರೋಪ : ಹಿರಿಯ ಸಾಹಿತಿ ಮಲ್ಲಿಕಾರ್ಜುನ ಬನ್ನಿ ಅಧ್ಯಕ್ಷತೆ ವಹಿಸುವರು. ಅಭಿನಂದನಾಪರ ಮಾತುಗಳನ್ನು ಡಾ.ಸಣ್ಣವೀರಣ್ಣ ದೊಡಮನಿ ಹೇಳಲಿದ್ದಾರೆ. ಸುಭಾಸ ವಡವಡಗಿ, ಹೊನ್ನಪ್ಪಗೌಡ ಗೌಡ್ರ, ಶಂಕರ ಹೂಲಿ, ರಾಮಪ್ಪ ಭೀಮಪ್ಪ ಗೌಡ್ರ, ದ್ಯಾಮವ್ವ ಭೀಮಪ್ಪ ಮದಕಟ್ಟಿ, ಸೀತವ್ವ ಕನಕಪ್ಪ ಮಾದರ, ರುದ್ರಮ್ಮ   ಬಸಯ್ಯ ಕಟಗೇರಿ, ಅರವಿಂದ ಕುಲಕರ್ಣಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದೂ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಜರುಗಲಿದೆ.

ಸುದ್ದಿ ಓದಿ