ಏಳು ದಿನಗಳ ಕಾಲ ಸೌಂದರ್ಯವರ್ಧಕ ತರಬೇತಿ ಕಾರ್ಯಾಗಾರ
ರಾಣಿಬೆನ್ನೂರು 15: ವಿದ್ಯಾರ್ಥಿನಿಯರು ತರಬೇತಿಯನ್ನು ಪಡೆಯುವುದು ಮುಖ್ಯವಲ್ಲ. ಈ ತರಬೇತಿಯನ್ನು ಜೀವನದಲ್ಲಿ ಅಳವಡಿಸಿಕೊಂಡು ಆರ್ಥಿಕವಾಗಿ ಸದೃಢವಾಗಿ ಸ್ವಾವಲಂಬಿ ಜೀವನ ನಡೆಸಬೇಕು ಎಂದು ಬ್ಯಾಂಕ್ ಆಫ್ ಬರೋಡಾ ಮತ್ತು ಗ್ರಾಮೀಣ ಸ್ವ ಉದ್ಯೋಗ ತರಬೇತಿ ನಿರ್ದೇಶಕ ಅಬ್ದಲ್ ರಫೀಕ್ ಹೇಳಿದರು.
ಇಲ್ಲಿನ ಕೆಎಲ್ಇ ಸಂಸ್ಥೆಯ ರಾಜ-ರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿಮಂಗಳವಾರ ಹಾವೇರಿ ಬ್ಯಾಂಕ್ ಆಫ್ ಬರೋಡಾ ಮತ್ತು ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಆಶ್ರಯದಲ್ಲಿ ಏಳು ದಿನಗಳ ಕಾಲ ಏರಿ್ಡಸಿದ ಸೌಂದರ್ಯವರ್ಧಕ ತರಬೇತಿ ಕಾರ್ಯಾಗಾರದ ಮುಕ್ತಾಯ ಸಮಾರಂಭದಲ್ಲಿ ಅವರು ಮಾತನಾಡಿದರು.
ಪ್ರಾಚಾರ್ಯ ಪ್ರೊ. ನಾರಾಯಣ ನಾಯಕ ಎ. ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಅನುರಾಧ ಎಸ್, ಪ್ರೊ ಎಂ. ಎನ್ .ಸೂರಣಿಗಿ, ಪ್ರೊ. ಸಾಯಿಲತಾ ಮಡಿವಾಳರ, ಪ್ರೇಮಾ ನಾಯಕ, ಸಂಗೀತಾ ಕಾಯಕದ, ಕಾವ್ಯ ಲಮಾಣಿ, ಅರ್ಚನಾ ಹರಿಹರ ಭಾಗವಹಿಸಿದ್ದರು.