ಅಥಣಿ

ಕೋರೊನಾ ಎರಡನೇ ಅಲೆ: ತಾಲೂಕಿನಲ್ಲಿ ಐವರಿಗೆ ಸೋಂಕು

ಕೋರೊನಾ ಎರಡನೇ ಅಲೆ: ತಾಲೂಕಿನಲ್ಲಿ ಐವರಿಗೆ ಸೋಂಕು

ಅಥಣಿ 17: ತಾಲೂಕಿನಲ್ಲಿ ಜಾಗತಿಕ ಮಹಾಮಾರಿ ಕೋರೊನಾ ವೈರಸ್ ಕಾಣಿಸಿಕೊಂಡು ಶಿವಯೋಗಿಗಳ ನಾಡಿನ ಜನರಲ್ಲಿ ಆತಂಕಕ್ಕೆ ಕಾರಣವಾಗಿದ್ದು ತಾಲೂಕಿನ ವಿವಿಧ ಗ್ರಾಮಗಳಾದ ಗುಂಡೆವಾಡಿ, ತಾಂವಸಿ, ದರೂರ, ಕೋತನಟ್ಟಿ ಹಾಗೂ ಅಥಣಿ ಪಟ್ಟಣದ ತಲಾ ಒಂದರಂತೆ ಒಟ್ಟು ಈ ವಾರದಲ್ಲಿ ಐದು ಪ್ರಕರಣಗಳು ದಾಖಲಾಗಿವೆ.

ನಾಲ್ಕು ಜನರಿಗೆ ಮನೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ, ಒಬ್ಬರನ್ನು ಸ್ಥಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಥಣಿ ವೈದ್ಯಾಧಿಕಾರಿ ಬಸನಗೌಡ ಕಾಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಕಳೆದ ಜನವರಿ ತಿಂಗಳಿಂದ ಯಾವುದೇ ಕೊರೊನಾ ಪ್ರಕರಣಗಳು ಬೆಳಕಿಗೆ ಬಂದಿರಲಿಲ್ಲ, ಮಹಾರಾಷ್ಟ್ರದಲ್ಲಿ ಎರಡನೇ ಅಲೆ ಕಾಣಿಸಿಕೊಂಡ ಬೆನ್ನಲ್ಲೇ ಗಡಿ ಹೊಂದಿರುವ ಅಥಣಿಯಲ್ಲೂ ಎರಡನೇ ಅಲೆಯಾಗಿ ಕೊರೊನಾ ವೈರಸ್ ಕಾಣಿಸಿಕೊಂಡು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಅಥಣಿ ಮಹಾರಾಷ್ಟ್ರ ಗಡಿ ಹೊಂದಿದ್ದು ಮಹಾರಾಷ್ಟ್ರ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಎರಡು ರಸ್ತೆಗಳಾದ ಬಳ್ಳಿಗೇರಿ, ಕೋಟ್ಟಲಗಿ ಚೇಕ ಪೋಸ್ಟ್ ನಿರ್ಮಿಸಲಾಗಿದೆ. ಮಹಾರಾಷ್ಟ್ರದಿಂದ ಬರುವ ಜನರನ್ನು ರಾಜ್ಯದಲ್ಲಿ ನೆಗೆಟಿವ್ ರಿಪೋರ್ಟ್ ಇದ್ದವರಿಗೆ ಮಾತ್ರ ತಾಲೂಕು ಆಡಳಿತ ಅವಕಾಶ ನೀಡುತ್ತಿದೆ. ಇದರ ಮದ್ಯ ಕಳ್ಳ ಮಾರ್ಗದಿಂದ ಮಹಾರಾಷ್ಟ್ರದ ಗಡಿ ಹೊಂದಿರುವ ಗ್ರಾಮದ ಜನರು ಅಥಣಿ ಪಟ್ಟಣಕ್ಕೆ ಆಗಮಿಸುತ್ತಾರೆ ಇದರಿಂದಾಗಿ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಪೋಲಿಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಸಾರ್ವಜನಿಕರ ಆಗ್ರಹವಾಗಿದೆ.

ಸುದ್ದಿ ಓದಿ