ಗೋಕಾಕ್

ಕೊರೊನಾ ಭೀತಿ: ಜನಜಾಗೃತಿ ಜಾಥಾ

ಕೊರೊನಾ ಭೀತಿ: ಜನಜಾಗೃತಿ ಜಾಥಾ
ಮಲ್ಲಾಪೂರ ಪಿ.ಜಿ ಪ. ಪಂ. ವತಿಯಿಂದ ರಾಜ್ಯದಲ್ಲಿ ಕೊರೋನಾ 2 ನೇ ಅಲೆಯ ಹಿನ್ನಲೆಯಲ್ಲಿ ಕೊರೋನಾ ನಿಯಂತ್ರಕ್ಕೆ ಪಟ್ಟಣದ ಪ್

ಘಟಪ್ರಭಾ26: ರಾಜ್ಯದಲ್ಲಿ ಕೊರೋನಾ 2ನೇ ಅಲೆಯ ಲಕ್ಷಣಗಳು ಕಾಣಿಸುತ್ತಿದ್ದು ಈ ಹಿನ್ನೆಲೆಯಲ್ಲಿ ಕೊರೋನಾ ನಿಯಂತ್ರಕ್ಕೆ ಮುಂದಾಗಿರುವ ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿಯಿಂದ ಜನರಲ್ಲಿ ಜಾಗೃತಿ ಮೂಡಿಸುವ ಜಾಥಾ ಕಾರ್ಯಕ್ರಮ ಮಾ.26ರಂದು ಹಮ್ಮಿಕೊಳ್ಳಲಾಗಿತ್ತು.

ಮುತ್ಯುಂಜಯ ವೃತ್ತದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದಕೊಂಡು ಸ್ಯಾನಿಟೈಸರ್ ಬಳಕೆ ಮಾಡಬೇಕು. ಕೊರೋನಾ ರೂಪಾಂತರಿ ಎರಡನೇ ಅಲೆ ಹರಡದಂತೆ ತಡೆಗಟ್ಟಬೇಕು ಎಂಬ ಸಂದೇಶವನ್ನು ರವಾನಿಸಿದರು. 

ಜಾಥಾದಲ್ಲಿ ಘಟಪ್ರಭಾ ಠಾಣೆಯ ಪೊಲೀಸ್ ಇನೆಸ್ಪೆಕ್ಟರ್ ಶ್ರೀಶೈಲ ಬ್ಯಾಕೂಡ, ಪ.ಪಂ ಮುಖ್ಯಾಧಿಕಾರಿ ಕೆ.ಭಿ.ಪಾಟೀಲ, ಪ.ಪಂ ಸದಸ್ಯರಾದ ಸಲೀಮ ಕಬ್ಬೂರ, ಮಾರುತಿ ಹುಕ್ಕೇರಿ, ಹಿರಿಯರಾದ ಕೆಂಪಣ್ಣ ಚೌಕಶಿ, ಮಲ್ಲಿಕಾರ್ಜುನ ತುಕ್ಕಾನಟ್ಟಿ, ಪ.ಪಂ ಸಿಬ್ಬಂದಿ ರಾಜು ಸದಲಗಿ, ಸಿಬ್ಬಂದಿ ವರ್ಗದವರು, ಆರೋಗ್ಯ ಇಲಾಖೆ ಅಧಿಕಾರಿಗಳು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು ಇದ್ದರು.

ಸುದ್ದಿ ಓದಿ