ಧಾರವಾಡ - ಹುಬ್ಬಳ್ಳಿ

ಕಾರ್ನಿಯಾ ಅಂಧತ್ವ ಮುಕ್ತ ಭಾರತ ಅಭಿಯಾನ

ಕಾರ್ನಿಯಾ ಅಂಧತ್ವ ಮುಕ್ತ ಭಾರತ ಅಭಿಯಾನ

ಹುಬ್ಬಳ್ಳಿ 04:  ಕಾರ್ನಿಯಾ ಅಂಧತ್ವ ಮುಕ್ತ ಭಾರತ ಅಭಿಯಾನವನ್ನು ಸಕ್ಷಮ ಉತ್ತರ ಪ್ರಾಂತ ದ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದು ಸಕ್ಷಮ ಜೊತೆಗೆ ಕೆಎಂಸಿಆರ್‌ಐ, ಹುಬ್ಬಳ್ಳಿ, ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ, ಲಯನ್ಸ್‌ ಕ್ಲಬ್ ಹುಬ್ಬಳ್ಳಿ, ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯ ಹುಬ್ಬಳ್ಳಿ, ಐಎಂಎ ಹುಬ್ಬಳ್ಳಿ ಮತ್ತು ಯೂತ್ ಫಾರ್ ಸೇವಾ ಹುಬ್ಬಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ದಿ. 03ರ ಮುಂಜಾನೆ 8ಕ್ಕೆ ಕಾರ್ನಿಯಾ ಅಂಧತ್ವ ಮುಕ್ತ ಭಾರತ ಅಭಿಯಾನದ ಪ್ರಯುಕ್ತ ಹುಬ್ಬಳ್ಳಿಯ ಬಿ.ವ್ಹಿ.ಬಿ ಮಹಾವಿದ್ಯಾಲಯದ ಆವರಣದಿಂದ ಕಿಮ್ಸ್‌ ಆವರಣದವರೆಗೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಜಾಗೃತಿ ನಡಿಗೆಯನ್ನು ಮಾಡಲಾಯಿತು.  

ಈ ಜಾಗೃತಿ ನಡಿಗೆಯನ್ನು ಉದ್ಘಾಟಿಸಿದ ಡಾ. ಬಸವರಾಜ ಅನಾಮಿ ಮಾತನಾಡುತ್ತ ಕಾರ್ನಿಯ ಅಂಧತ್ವ ಮುಕ್ತ ಭಾರತದ ಪಣ ತೊಟ್ಟ ಸಕ್ಷಮನ ಈ ನಡಿಗೆ ಜಾಥಾ ಮೂಲಕ ಸಮಾಜದ ಎಲ್ಲರಲ್ಲಿ ನೇತ್ರದಾನ ಮಹಾದಾನ ಎಂಬ ಅರಿವು ಮೂಡಿಸುವ ನಿಟ್ಟಿನಲ್ಲಿ ಪ್ರಯತ್ನ ಎಲ್ಲರಿಗೂ ಮಾದರಿ ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಮಾತನಾಡಿದ ಕೆ.ಎಂ.ಸಿ.ಆರ್‌.ಐ. ನ ನಿರ್ದೇಶಕ ಡಾ.ಎಸ್‌.ಎಫ್‌.ಕಮ್ಮಾರ ಮಾತನಾಡುತ್ತ ನಾವು ನಮ್ಮ ಮರಣಾನಂತರ ನೇತ್ರದಾನ ಮಾಡಿ ದೃಷ್ಟಿ ಚೇತನರ ಬಾಳಿಗೆ ಬೆಳಕಾಗಿ ನೀವು ನೇತ್ರದಾನ ಮಾಡಿ ತನ್ಮೂಲಕ ಮತ್ತೊಬ್ಬರ ದೃಷ್ಟಿಗೆ ಸಹಾಯ ಮಾಡಿ ಪುನೀತರಾಗಿ, ಜೊತೆಗೆ ಸಕ್ಷಮನ ಎಲ್ಲ ಕಾರ್ಯಕ್ರಮಗಳಿಗೆ  ಕೆ.ಎಂ.ಸಿ.ಆರ್‌.ಐ. ನ ಸಹಕಾರ ಸದಾ ಇರುತ್ತದೆ ಎಂದರು.  

ಸಕ್ಷಮ ಉತ್ತರ ಕರ್ನಾಟಕ ಪ್ರಾಂತ ಅಧ್ಯಕ್ಷರಾದ ಡಾ.ಸುನೀಲ ಗೋಖಲೆ ಮಾತನಾಡುತ್ತ ಕಾರ್ಯಕ್ರಮ ಯಶಸ್ವಿಯಾಗಲು ಸಹಕಾರ ನೀಡಿದ ಸರ್ವರಿಗೂ ಧನ್ಯವಾದಗಳು ಮತ್ತು ಜಾಗೃತಿ ನಡಿಗೆಯಲ್ಲಿ ಭಾಗವಹಿಸುವುದು ಎಷ್ಟು ಮುಖ್ಯವೋ ಪ್ರತಿಯೊಬ್ಬರು ಸ್ವ ಇಚ್ಚೆಯಿಂದ ನೇತ್ರದಾನ ಮಾಡಿದಾಗ ಮಾತ್ರ ಕಾರ್ಯಕ್ರಮ ಅರ್ಥಪೂರ್ಣವಾಗುತ್ತದೆ ಎಂದರು. ಕಾರ್ಯದರ್ಶಿ, ಡಾ. ಸುಭಾಷ ಬಬ್ರುವಾಡ, ಸಕ್ಷಮನ ಮಾಜಿ ಅಧ್ಯಕ್ಷ ಎಸ್ ಬಿ ಶೆಟ್ಟಿ, ಲಯನ್ಸ್‌ ಕ್ಲಬ್,ರೋಟರಿ ಕ್ಲಬ್, ಇನ್ನರವ್ಹೀಲ್ ಕ್ಲಬ್ ನ ಎಲ್ಲ ಪದಾಧಿಕಾರಿಗಳು, ಅಂಧರ ಶಾಲೆಯ ವಿದ್ಯಾರ್ಥಿಗಳು, ಕಿಮ್ಸ್‌ ನರ್ಸಿಂಗ್, ಕನಕದಾಸ ಕಾಲೇಜ್ ನ ವಿದ್ಯಾರ್ಥಿಗಳು ಭಾಗಹಿಸಿದ್ದರು. ಕಿಮ್ಸ್‌ ಆವರಣದಲ್ಲಿ ನೇತ್ರದಾನ ಮಹಾದಾನ ಕುರಿತು ಜಾಗೃತಿ ನಾಟಕವನ್ನು ಕಿಮ್ಸ್‌ ವಿದ್ಯಾರ್ಥಿಗಳು ಪ್ರದರ್ಶನ ಎಲ್ಲರ ಗಮನ ಸೆಳೆಯಿತು. 

 ಡಾ.ಅಭಿಷೇಕ ಎಂ.ಪಾಟೀಲ, ಅಶ್ರಫ್ ಅಲಿ ಬಶೀರ್ ಅಹಮದ್,ಡಾ. ಸಂಜಯ ಕೊಟಬಾಗಿ, ಡಾ.ಈಶ್ವರ ಹೊಸಮನಿ, ಡಾ. ಈಶ್ವರ ಹಸಬಿ, ರಮೇಶ್ ಕಳಸದ, ಡಾ.ಉದಯ ಮುಳಗುಂದ, ಡಾ.ಶೋಭಾ ಗೌಡರ, ಡಾ.ವೆಂಕಟೇಶ ಮೂಲಿಮನಿ, ವಿಠ್ಠಲ ಖಟಾವಕರ ಸಲಹಾ ಮಂಡಳಿ ಸದಸ್ಯರು, ಶ್ರೀಕಾಂತ ಜೋಶಿ, ಬಾಪುಗೌಡ ಬಿರಾದಾರ, ಸಕ್ಷಮ ಉತ್ತರ ಕರ್ನಾಟಕ ಪ್ರಾಂತ ಪದಾಧಿಕಾರಿಗಳು, ಹುಬ್ಬಳ್ಳಿಯ ಎಲ್ಲ ಅಂಧರ ಶಾಲೆಯ ವಿದ್ಯಾರ್ಥಿಗಳು, ಹಲವಾರು ಸಂಘ ಸಂಸ್ಥೆಗಳ ಸದಸ್ಯರು, ವಿವಿಧ ನರ್ಸಿಂಗ್, ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ವಾಕಥಾನ್ ನಲ್ಲಿ 500ಕ್ಕೂ ಅಧಿಕ ಜನ ಭಾಗವಹಿಸಿದ್ದರು. ಸಕ್ಷಮ ಉತ್ತರ ಕರ್ನಾಟಕ ಪ್ರಾಂತ ಸಹ ಕಾರ್ಯದರ್ಶಿ ಡಾ.ನಾಗಲಿಂಗ ಮುರಗಿ ಸರ್ವರನ್ನೂ ಸ್ವಾಗತಿಸಿ ವಂದಿಸಿದರು ಕುಷ್ಮಾ ನರ್ಸಿಂಗ್ ಕಾಲೇಜಿನ ಪ್ರಾಚಾರ್ಯ ವೀರೇಶ ತೋಪಲಕಟ್ಟಿ ಸರ್ವರನ್ನೂ ಸ್ವಾಗತಿಸಿದರು. 


ಸುದ್ದಿ ಓದಿ