ತಾಲೂಕಿನಲ್ಲಿ ಸಹಕಾರಿ ರಂಗ ತನ್ನ ಛಾಪು ಮೂಡಿಸಿದೆ: ಪಾಟೀಲ
ಕಾಗವಾಡ 07: ಭಾರತ ದೇಶದಲ್ಲಿ ಸಹಕಾರಿ ರಂಗ ಗುಜರಾತ್, ಮಹಾರಾಷ್ಟ್ರ, ಮುತ್ತು ಕರ್ನಾಟಕ ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿದ್ದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ, ಅಥಣಿ ತಾಲೂಕಿನಲ್ಲಿ ಸಹಕಾರಿ ರಂಗ ತನ್ನ ಛಾಪು ಮೂಡಿಸಿದೆ ಎಂದು ಕಾಗವಾಡ ಕ್ಷೇತ್ರ ಶಾಸಕ ಶ್ರೀಮಂತ ಪಾಟೀಲ ಹೇಳಿದರು.
ಗುರುವಾರ ದಿ. 7ರಂದು ಉಗಾರದಲ್ಲಿ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ಛತ್ರಪತಿ ಶಿವಾಜಿ ಕ್ರೆಡಿಟ್ ಸಹಕಾರಿ ಸಂಸ್ಥೆಯ ಎರಡನೇ ಶಾಖೆ ಉದ್ಘಾಟಿಸಿ ಅವರು ಮಾತನಾಡಿದರು.
ಸಹಕಾರಿ ತತ್ವಗಳ ಮೇಲೆ ಆಧರಿಸುವ ಸಂಸ್ಥೆಗಳು ಒಬ್ಬರು, ಇನ್ನೊಬ್ಬರ ಸಹಕಾರದಿಂದ ಸಂಸ್ಥೆಗಳು ಬೆಳೆಯುತ್ತಿವೆ ಸಾಲ ತೆಗೆದುಕೊಂಡು ಸದಸ್ಯರು ಸಕಾಲದಲ್ಲಿ ಮರುಪಾವತಿ ಮಾಡಬೇಕೆಂದು ಹೇಳಿದರು.
ಮಾಜಿ ಶಾಸಕ ಕಲ್ಲಪ್ಪಣ್ಣಾ ಮಗೆಣ್ಣವರ ಅಧ್ಯಕ್ಷ ಸ್ಥಾನ ವಹಿಸಿದರು. ಸಂಸ್ಥೆ ಅಧ್ಯಕ್ಷ ರಾಮಚಂದ್ರ ಬೋಸಲೆ ಸ್ವಾಗತಿಸಿ ಸಂಸ್ಥೆಯ ನಡೆದು ಬಂದ ದಾರಿ ಬಗ್ಗೆ ಮಾಹಿತಿ ನೀಡಿದರು.
ಸಮಾರಂಭದಲ್ಲಿ ಸಂಸ್ಥೆಯ ಸಂಸ್ಥಾಪಕ ಅಣ್ಣಾಸಾಹೇಬ ಯಾದವ್, ಅಶೋಕ ಕಾಳೀಬೀರೆ, ಮೋಹನ್ ಲೋಕುರೆ , ಪರಶುರಾಮ ಥೊರುಶೆ, ರಾಜೀವ್ ಪಾಟೀಲ್, ಸಂಜೆಯ ಶಿಂದೆ, ಪ್ರಥಮೇಶ್ ಶಿಂದೆ, ಉಜ್ವಲಾ ಶಟ್ಟಿ, ಸೇರಿದಂತೆ ಎಲ್ಲ ಶಾಖೆಯ ಸಂಚಾಲಕರು ಪಾಲ್ಗೊಂಡಿದ್ದರು.