ಶ್ರೀಮಂತ ಇಂಡಿಗೆ ಸಹಕಾರ ರತ್ನ ಪ್ರಶಸ್ತಿ ಪ್ರದಾನ
ಇಂಡಿ21: ರಾಜ್ಯದ ಸಹಕಾರ ಮಹಾಮಂಡಳ ವತಿಯಿಂದ ಬೆಂಗಳೂರಿನಲ್ಲಿ ಭಾನುವಾರ ಆಯೋಜಿಸಿದ ಸಹಕಾರ ರತ್ನ ಪ್ರಶಸ್ತಿ ಪ್ರದಾನ ಬೃಹತ್ ಸಮಾರಂಭದಲ್ಲಿ ಪಟ್ಟಣದ ಶಾಂತೇಶ್ವರ ಮಲ್ಟಿ ಕೋ ಆಫ್ ಬ್ಯಾಂಕಿನ ಅಧ್ಯಕ್ಷ ಶ್ರೀಮಂತ ಇಂಡಿ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಹಕಾರ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಿದರು.
ಪ್ರಶಸ್ತಿಯು 15 ಗ್ರಾಂ ಚಿನ್ನದ ಪದಕ ಹಾಗೂ ಪ್ರಶಸ್ತಿ ಫಲಕಗಳನ್ನೊಳಗೊಂಡಿದ್ದು ರಾಜ್ಯ 60 ಗಣ್ಯ ಸಹಕಾರಿ ಧುರೀಣರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ರೈತರ ಮಗನಾಗಿ ಸಹಕಾರ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಬಂದಿದ್ದ ಶ್ರೀಮಂತ ಇಂಡಿ ಅವರು ಹೋರ್ತಿ ಗ್ರಾಮದ ಶಾಂತೇಶ್ವರ ಮಲ್ಟಿ ಕೋ ಆಫ್ ಸಂಸ್ಥಾಪಕ ಅಧ್ಯಕ್ಷರಾಗಿ ಸುಮಾರು 22 ವರ್ಷಗಳಿಂದ ಸೇವೆ ಸಲ್ಲಿಸುತ್ತ ಬಂದಿದ್ದಾರೆ. ಮೈಸೂರು ಹೊರತು ಪಡಿಸಿ ಪ್ರತಿ ಜಿಲ್ಲೆಯಲ್ಲಿಯೂ ಇವರ ಬ್ಯಾಂಕುಗಳಿವೆ. ಮೂರು ಸೂಪರ ಮಾರ್ಕೆಟ ಗಳಿದ್ದು ಜಿಲ್ಲಾ ಒಕ್ಕೂಟದ ಪ್ರತಿನಿಧಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಇವರ ಸಹಕಾರ ಸೇವೆ ಗುರುತಿಸಿ ರಾಜ್ಯ ಸಹಕಾರ ಕ್ಷೇತ್ರದಲ್ಲಿ ಕೊಡಮಾಡಿದ ಅತ್ಯುನ್ನತ ಪ್ರಶಸ್ತಿಯಾದ ಸಹಕಾರ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.
ಸಮಾರಂಭದಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ, ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ, ಬಸವರಾಜ ಭೈರತಿ, ರಾಜ್ಯ ಸಹಕಾರಿ ಮಹಾಮಂಡಳದ ಅಧ್ಯಕ್ಷ ಜಿ.ಟಿ.ದೇವೆಗೌಡ ಮತ್ತಿತರಿದ್ದರು.