ಕಾಯಿಲೆಗಳ ನಿಯಂತ್ರಣ ಸಾರ್ವಜನಿಕರ ಕೈಯಲ್ಲಿದೆ: ಹಿರೇಮಠ
ಶಿಗ್ಗಾವಿ 19: ಜಿಲ್ಲೆಗಳಲ್ಲಿ ಇತ್ತೀಚೆಗೆ ಡೆಂಗ್ಯೂ ಮತ್ತು ಚಿಕ್ಕನಜ್ವರ ಹರಡುತ್ತಿದೆ. ಈ ರೋಗವು ಈಡೀಸ ಸೊಳ್ಳೆಯಿಂದ ಹರಡುತ್ತಿದೆ. ಈ ಕಾಯಿಲೆಗಳ ನಿಯಂತ್ರಣ ಸಾರ್ವಜನಿಕರಕೈಯಲ್ಲಿದೆ ಆದ್ದರಿಂದ ಸಾರ್ವಜನಿಕರು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳುವ ಮೂಲಕ ಡೆಂಗ್ಯೂತಡೆಗಟ್ಟಲು ಸಾದ್ಯವಾಗಲಿದೆ ಎಂದು ತಹಶಿಲ್ದಾರರ ಸಂತೋಷ ಹಿರೇಮಠ ಹೇಳಿದರು.
ಪಟ್ಟಣದ ತಹಶಿಲ್ದಾರರ ಕಚೇರಿಯಲ್ಲಿ ಡೆಂಗ್ಯೂಟಾಸ್ಕ್ ಫೋರ್ಸ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ತಾಲೂಕಿನ ಪ್ರತಿಯೊಂದು ಗ್ರಾಮ ಪಂಚಾಯತಿ ಮತ್ತು ಶಿಕ್ಷಣ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಗ್ರಾಮಗಳಲ್ಲಿ ಡೆಂಗ್ಯೂ ಕುರಿತು ಜಾಥಾ ಮತ್ತು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದ್ದು ಗ್ರಾಮಸ್ಥರು ನೀರು ನಿಲ್ಲದ ಹಾಗೆ ನೋಡಿಕೊಂಡು ಸ್ವಚ್ಚತೆ ಕಾಪಾಡಿಕೊಳ್ಳುವ ಮೂಲಕ ರೋಗತಡೆಗಟ್ಟಲು ಸಾಧ್ಯವಾಗಲಿದೆ ಎಂದರು.
ಈ ಸಂದರ್ಭದಲ್ಲಿ ತಾಲೂಕ ಆರೋಗ್ಯಾಧಿಕಾರಿ ಡಾ.ಸತೀಶ.ಎ.ಆರ್ ಮಾತನಾಡಿ ಈಡಿಸ ಸೊಳ್ಳೆ ಉತ್ಪತ್ತಿಯಾಗುವ ಮನೆ ಒಳಗಿನ ಪ್ರೀಜ್, ಎರ್ಕೂಲರ್, ಅಲಂಕೃತ ಗೀಡಗಳ ಕಾಂಡಗಳನ್ನು ವಾರಕ್ಕೊಮ್ಮೆ ಸ್ವಚ್ಚ ಗೋಳಿಸಿ ಡೆಂಗ್ಯೂ ಹರಡದಂತೆ ಎಚ್ಚರವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ಇಓ ವಿಶ್ವನಾಥ.ಪಿ, ಸಹಾಯಕ ನಿರ್ದೇಶಕಿ ಸರಸ್ವತಿ ಗಜಕೋಶ, ಕೃಷಿ ಇಲಾಖೆ ನಿರ್ದೇಶಕ ಸುರೇಶ ದಿಕ್ಷೀತ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ.ಅಂಬಿಗೇರ, ಪುರಸಭೆ ಮುಖ್ಯಾಧಿಕಾರಿ ಮಲ್ಲೇಶ.ಆರ್, ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಡಾ.ಸುರೇಶ ಪೂಜಾರ, ಡಾ.ಗೈಬು ನಾಯಕರ, ಡಾ.ಸರಳಾ ನಾಲವಾಡ, ಡಾ.ನೇಮಾವತಿ, ಅಶೋಕ ಅಮಾತ್ಯಣ್ಣವರ, ಶಂಕರ ಕೋರಿಶೆಟ್ಟರ, ರಾಮನಗೌಡ ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.