ಇಂಡಿ

ಗಣಿತಶಾಸ್ತ್ರಕ್ಕೆ ಭಾರತೀಯರ ಕೊಡುಗೆ ಅಪಾರ: ಹಡಪದ

ಗಣಿತಶಾಸ್ತ್ರಕ್ಕೆ ಭಾರತೀಯರ ಕೊಡುಗೆ ಅಪಾರ: ಹಡಪದ
ಇಂಡಿ ಪಟ್ಟಣದ ಜಿ.ಆರ್.ಜಿ ಮಹಾವಿದ್ಯಾಲಯದ ಗಣಿತ ದಿನಾಚರಣೆಯನ್ನು ಪ್ರಾಧ್ಯಾಪಕರು ಉದ್ಘಾಟಿಸಿದರು

ಇಂಡಿ: ಗಣಿತಶಾಸ್ತ್ರಕ್ಕೆ ಭಾರತೀಯರ ಕೊಡುಗೆ ಅಪಾರವಾಗಿದೆ. ಅದರಲ್ಲೂ ಆರ್ಯಭಟ್, ಭಾಸ್ಕರಚಾರ್ಯ, ರಾಮಾನುಜನ್ ನಂತರ ಶ್ರೇಷ್ಠ ಗಣಿತತಜ್ಞರು ಭಾರತದ ಕೀರ್ತಿ  ಜಗತ್ತಿನಾದ್ಯಂತ ಪಸರಿಸಿದರು ಎಂದು ಪ್ರಾಧ್ಯಾಪಕ ದತ್ತಾತ್ರೆಯ ಹಡಪದ ಹೇಳಿದರು. 

ಗುರುವಾರ ಪಟ್ಟಣದ  ಜಿ.ಆರ್. ಗಾಂಧಿ ಕಲಾ,  ವಾಯ್.ಎ. ಪಾಟೀಲ ವಾಣಿಜ್ಯ ಹಾಗೂ  ಎಮ್.ಎಫ್. ದೋಶಿ ವಿಜ್ಞಾನ ಪದವಿ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಗಣಿತ ದಿನಾಚರಣೆ ಕಾರ್ಯಕ್ರಮದಲ್ಲ್ಯಿವರು ಮಾತನಾಡಿದರು. 

ತಮಿಳುನಾಡಿನ ಕುಂಬಕೋಣಮ್ ಎಂಬ ಸಣ್ಣ ಊರಿನಿಂದ ತಮ್ಮ ಸಾಮಾಜಿಕ ಕಟ್ಟು ಪಾಡುಗಳನ್ನು ಮೆಟ್ಟಿನಿಂತು ಇಂಗ್ಲೆಂಡಿಗೆ ಹೋಗಿ ತನ್ನ ಬದುಕಿನ ಮೂವತ್ತೆರಡನೇ ವಯಸ್ಸಿನಲ್ಲಿ ಜಗತ್ತೇ ಭಾರತದತ್ತ ನಿಬ್ಬೆರಗಾಗಿ ನೋಡುವಂತೆ ಮಾಡಿದ ಗಣಿತಲೋಕದ ಅದ್ಭುತ ಮಾಂತ್ರಿಕ ಶ್ರೀನಿವಾಸ ರಾಮಾನುಜನ್ ಅಯ್ಯಂಗಾರವರು. ರಾಮಾನುಜರ ಗಣಿತ ಸೂತ್ರಗಳು ಪಾಲಿಮರ್ ಕೆಮೆಸ್ಟ್ರೀ, ಸಾಫ್ಟವೇರ್ ಡೆವಲಪಮೆಂಟ್ ಮತ್ತು ಕ್ಯಾನ್ಸರ್ನಂತಹ ಭೀಕರ ಕಾಯಿಲೆಗಳ ಚಿಕಿತ್ಸೆಯಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಿವೆ ಎಂದರು.

ಪ್ರಾಂಶುಪಾಲ ಎಸ್.ಬಿ. ಜಾಧವ,  ಗಣಿತ ವಿಭಾಗದ ಅತಿಥಿ ಉಪನ್ಯಾಸಕಿ  ಭಾಗ್ಯಶ್ರೀ ಮೋರೆ ಮಾತನಾಡಿರು.

ಶ್ರೀನಿವಾಸ ರಾಮಾನುಜನವರು ಭಾರತ ದೇಶಕ್ಕೆ ಅಪಾರವಾದ ಕೊಡುಗೆಯನ್ನು ನೀಡುವುದು ಅಷ್ಟೇ ಅಲ್ಲದೆ ಕೆಲವು ಗಣಿತದ ಬಿಡಿಸಲಾಗದ ಸಮಸ್ಯೆಗಳನ್ನು ಬಿಡಿಸಿದರು. ಮತ್ತು 3900 ಸಮೀಕರಣಗಳನ್ನು ಹೊಂದಿರುವ ಪುಸ್ತಕವನ್ನು ಬರೆದಿದ್ದಾರೆ  ಎಂದರು.

ವೇದಿಕೆಯಲ್ಲಿ ಡಾ.ಪಿ.ಕೆ. ರಾಠೋಡ, ಡಾ. ಜಯಪ್ರಸಾದ ಡಿ ಮತ್ತಿತರಿದ್ದರು. 

ಡಾ.ಆನಂದ ನಡವಿನಮನಿ, ಡಾ. ವಿಶ್ವಾಸ ಕೊರವಾರ, ಡಾ .ಸುರೇಂದ್ರ ಕೆ,.ಶ್ರೀಶೈಲ, ಡಾ.ಸಿ.ಎಸ್. ಬಿರಾದಾರ, ಮಲ್ಲಕಾರ್ಜುನ ಕೋಣದೆ, ಆರ್.ಪಿ. ಇಂಗನಾಳ, ಶೃತಿ ಪಾಟೀಲ,  ಭಾರತಿ ಕನ್ನೊಳ್ಳಿ,  ಶ್ವೇತಾ ಕಾಂತ, ಎಸ್ಎಸ್ ಹೂಗಾರ, ಬಲರಾಮ ವಡ್ಡರ, ನವೀನಕುಮಾರ ಬಿರಾದಾರ ಸೇರಿದಂತೆ ಬೋಧಕ ಸಿಬ್ಬಂದಿ ಮತ್ತಿತರಿದ್ದರು. 



ಸುದ್ದಿ ಓದಿ