ರಾಣೆಬೆನ್ನೂರ

ನಿರಂತರ ನೀರು ಯೋಜನೆ ನಗರದಲ್ಲಿ ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ: ಆರೋಪ

ನಿರಂತರ ನೀರು ಯೋಜನೆ ನಗರದಲ್ಲಿ ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ: ಆರೋಪ

ಲೋಕದರ್ಶನ ವರದಿ 

ರಾಣಿಬೆನ್ನೂರ 21: ಅಂದಾಜು 116 ಕೋಟಿ ರೂ ವೆಚ್ಚದಲ್ಲಿ ಕೈಗೊಂಡಿರುವ 24*7 ನಿರಂತರ ನೀರು ಯೋಜನೆ ನಗರದಲ್ಲಿ ಸಮರ​‍್ಕವಾಗಿ ಪೂರೈಕೆಯಾಗುತ್ತಿಲ್ಲ. ನಗರದ ಹಲವು ವಾರ್ಡುಗಳಲ್ಲಿ ನೀರು ಸರಬರಾಜು ಇವರೆಗೂ ಆಗುತ್ತಿಲ್ಲ. ಅಧಿಕಾರಿಗಳು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಅಲ್ಲಲ್ಲಿ ನಳ ಸಂಪರ್ಕ ಜೋಡಣೆ ಮಾಡಿಲ್ಲ. ಸೋರುವಿಕೆ ಬಂದ್‌ಗೊಳಿಸಿಲ್ಲ. 5 ವಾರ್ಡುಗಳಲ್ಲಿ ಇನ್ನೂ ನೀರು ಪೂರೈಕೆ ಮಾಡಿಲ್ಲ. ಹೀಗಾದರೆ ನಗರದ ನಾಗರೀಕರಿಗೆ ನಾವು ಏನು ಉತ್ತರಿಸಬೇಕು ? ನೀರು ಕೊಡಲಾಗದಿದ್ದರೆ ಹೊರಟು ಹೋಗಿ ಎಂದು ನಗರಸಭಾ ಸದಸ್ಯರುಗಳು ಪಕ್ಷಬೇಧ ಮರೆತು 24*7 ಯೋಜನೆಯ ನೀರು ಪೂರೈಕೆಯ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರು.  

ಮಂಗಳವಾರ, ಇಲ್ಲಿನ ನಗರಸಭೆಯಲ್ಲಿ ಏರಿ​‍್ಡಸಿದ್ದ ವಿಶೇಷ ಸಾಮಾನ್ಯ ಸಭೆಯಲ್ಲಿ ನೀರು ಯೋಜನೆಯ ಅಧಿಕಾರಿಗಳನ್ನು ಸದಸ್ಯರುಗಳು ತೀವ್ರವಾಗಿ ತರಾಟೆಗೆ ತಗೆದುಕೊಂಡರು. ಅಧಿಕಾರಿಗಳಿಗೆ ರಾಣೇಬೆನ್ನೂರಿನ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ವಾರ್ಡುಗಳ ಸದಸ್ಯರು ಯಾರೆಂಬುದು ತಿಳಿದಿಲ್ಲ. ಸಿಬ್ಬಂದಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಇನ್ನೂ ಕೆಲವು ವಾರ್ಡುಗಳಲ್ಲಿ ನಳ ಸಂಪರ್ಕ ಜೋಡಣೆಯಾಗಿಲ್ಲ, ರಿಪೇರಿ ಮಾಡುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ವಿಚಾರಿಸಿದರೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ನಿರಂರತ ನೀರಿನ ಬಗ್ಗೆ ಅಧಿಕಾರಿಗಳು ಸ್ಪಷ್ಟವಾದ ಮಾಹಿತಿಯನ್ನು ನಾಗರೀಕರಿಗೆ ತಿಳಿಸಬೇಕೆಂದು ಸದಸ್ಯರುಗಳು ಆಗ್ರಹಿಸಿದರು.  

ಈ ಯೋಜನೆಯಿಂದ ನಗರದ ಬಹುತೇಕ ರಸ್ತೆ,  ಗಟಾರಗಳು ಹಾಳು ಮಾಡಿದ್ದು, ಈವರೆಗೂ ಸರಿಯಾಗಿ ರಿಪೇರಿ ಮಾಡಿಲ್ಲ. 35 ವಾರ್ಡುಗಳಿಗೆ ನಿರಂತರವಾಗಿ ದಿನದ 24 ಗಂಟೆಗಳ ಕಾಲ ನೀರು ಪೂರೈಕೆ ಮಾಡುವವರೆಗೂ ಯಾವುದೇ ರೀತಿಯ ನೀರಿನ ಬಿಲ್ ಗ್ರಾಹಕರಿಗೆ ಕೊಡಬಾರದು ಎಂದು ಸದಸ್ಯರುಗಳು ಸೂಚಿಸಿದರು. ಈಗಾಗಲೇ ಈ ನೀರು ಯೋಜನೆಯ ಕಾಮಗಾರಿ 300 ಕಿಮೀಗೂ ತಲುಪಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದು ಆದರೆ, ಒಳ ಚರಂಡಿ 167 ಕಿಮೀ ಮುಗಿದಿದ್ದು, ನೀರಿನ ಕಾಮಗಾರಿಯ ಕಿಮೀ ನಲ್ಲಿ ಬಹಳಷ್ಟು ವ್ಯತ್ಯಾಸವಾಗಿದೆ ಎಂದು ಸದಸ್ಯರುಗಳು ಆರೋಪಿಸಿದರು.  

ಕ್ರಿಯಾ ಯೋಜನೆಯಂತೆ ಹೆಚ್ಚುವರಿ ಹಾಗೂ ಉಳಿದ 4  ಕೋಟಿ ರೂಗಳನ್ನು ನಗರಸಭೆಯವರು ಪಾವತಿಸಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದ್ದು, ಈ ಬಗ್ಗೆ ನೀರು ಸರಬರಾಜು ಅಧಿಕಾರಿಗಳು ನಗರಸಭೆಯ ಆಡಳಿತ ಮಂಡಳಿಯವರ ಮಂಜೂರಾತಿ ಪಡೆದಿಲ್ಲ. ಹೀಗಾಗಿ 4 ಕೋಟಿ ರೂ ಪಾವತಿಸುವುದಿಲ್ಲ. ಈ ರೀತಿಯ ನಿರ್ಲಕ್ಷ್ಯಕ್ಕೆ ನಗರದ ಸದಸ್ಯರುಗಳನ್ನು ಹಾಗೂ ನಾಗರೀಕರನ್ನು ಅಧಿಕಾರಿಗಳು ದೂಷಿಸಬಾರದು ಎಂದು ಸದಸ್ಯರುಗಳು ತಿಳಿಸಿದರು.  

ಡಿಪಿಆರ್ ನಲ್ಲಿ ಸೂಚಿಸಿದಂತೆ ಮೊದಲು ನಳ ಸಂಪರ್ಕ ಜೋಡಣೆ ಮಾಡಬೇಕು. ಈಗಾಗಲೇ 22 ಸಾವಿರ ನಳ ಸಂಪರ್ಕ ಜೋಡಣೆ ಮಾಡಿದ್ದು, ಉಳಿದವುಗಳ ಜೋಡಣೆಗೆ ಹೊಸ ಡಿಪಿಆರ್ ಮಾಡಬೇಕು. 32, 33, 34, 35 ಹಾಗೂ 27 ನೇ ವಾರ್ಡಿನಲ್ಲಿ ತುರ್ತಾಗಿ ನೀರು ಸರಬರಾಜು ಮಾಡಬೇಕು. ಈ ಹಿಂದಿನ 35 ಜನ ನೀರು ಸರಬರಾಜು ಸಿಬ್ಬಂದಿಗಳನ್ನು ನೀರು ನಿರ್ವಹಣೆಗಾಗಿ ಬಳಸಿಕೊಳ್ಳಬೇಕು. ಶೀಘ್ರವೇ ಸಂಭಂದಿಸಿದ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಂಡು ನಿರಂತರ ನೀರು ಸರಬರಾಜು ಮಾಡದಿದ್ದರೇ ನಗರಸಭೆಯ ವತಿಯಿಂದಲೇ ನೀರು ಪೂರೈಕೆ ಮಾಡಬೇಕೆಂದು ಸದಸ್ಯರು ಗಳು ಆಗ್ರಹಿಸಿದರು. 

ನಗರದಲ್ಲಿ ಇರುವ ವಿದ್ಯುತ್ ದೀಪ ನಿರ್ವಹಣೆ ಮಾಡಲು ಪ್ರತಿ ತಿಂಗಳು 4 ಲಕ್ಷ ರೂ ಪಾವತಿಸುತ್ತಿದ್ದು, ಪರಿಸ್ಕರಣೆ ಮಾಡಿದರೆ ತಿಂಗಳಿಗೆ 10 ಲಕ್ಷ ರೂ ಪಾವತಿಸಬೇಕಾಗುತ್ತದೆ. ಗುತ್ತಿಗೆದಾರರು ವಿದ್ಯುತ್ ದೀಪ ಸಮರ​‍್ಕವಾಗಿ ನಿರ್ವಹಣೆ ಮಾಡುತ್ತಿಲ್ಲ. ರಿಪೇರಿ ಮಾಡುತ್ತಿಲ್ಲ. ಹೊಸ ದೀಪಗಳನ್ನು ಅಳವಡಿಸುತ್ತಿಲ್ಲ. ಗುತ್ತಿಗೆದಾರರನ್ನು ಬದಲಾಯಿಸಿ ನಗರಸಭೆ ವತಿಯಿಂದಲೇ ನಿರ್ವಹಣೆ ಮಾಡಬೇಕೆಂದು ಸದಸ್ಯರುಗಳು ಒತ್ತಾಯಿಸಿದರು.  

6.26 ಕೋಟಿ ರೂ ವೆಚ್ಚದ 92 ಕಾಮಗಾರಿಗಳಿಗೆ ಸಭೆಯು ಸರ್ವಾನುಮತದಿಂದ ಮಂಜೂರಾತಿ ನೀಡಿತು. ನಗರಸಭೆ ಸದಸ್ಯರುಗಳಾದ ಪ್ರಕಾಶ ಬುರಡಿಕಟ್ಟಿ, ಪುಟ್ಟಪ್ಪ ಮರಿಯಮ್ಮನವರ, ಮಲ್ಲಿಕಾರ್ಜುನ ಅಂಗಡಿ, ನಿಂಗರಾಜ ಕೋಡಿಹಳ್ಳಿ, ಪ್ರಕಾಶ ಪೂಜಾರ, ಸಿದ್ದಪ್ಪ ಬಾಗಲವರ, ನಾಗರಾಜ ಪವಾರ, ಹುಚ್ಚಪ್ಪ ಮೇಡ್ಲೇರಿ ಸೇರಿದಂತೆ ಮತ್ತಿತರರು ಸಭೆಯಲ್ಲಿ ಚರ್ಚಿಸಿ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರು. ನಗರಸಭೆ ಅಧ್ಯಕ್ಷೆ ರೂಪಾ ಚಿನ್ನಿಕಟ್ಟಿ, ಉಪಾಧ್ಯಕ್ಷೆ ಪ್ರಭಾವತಿ ತಿಳವಳ್ಳಿ, ಪೌರಾಯುಕ್ತ ಉದಯಕುಮಾರ ಬಿ.ಟಿ ಸೇರಿದಂತೆ ಅಧಿಕಾರಿಗಳು, ಸದಸ್ಯರುಗಳು ಸಿಬ್ಬಂದಿಗಳು ಇದ್ದರು. 


ಸುದ್ದಿ ಓದಿ