ಕಾಗವಾಡ

ಕೊರೊನಾ ವಾರಿಯರ್ಸ್‍ಗಳಿಗೆ ನಿರಂತರ ಭೋೀಜನ ಸೌಕರ್ಯ

ಕೊರೊನಾ ವಾರಿಯರ್ಸ್‍ಗಳಿಗೆ ನಿರಂತರ ಭೋೀಜನ ಸೌಕರ್ಯ

ಕಾಗವಾಡ 19:  ಕಾಗವಾಡ ತಾಲೂಕಿನ ಜುಗೂಳ ಗ್ರಾಮದ ಸುಪುತ್ರರು, ರಾಜಸ್ಥಾನ ರಾಜ್ಯದ ತಿಜಾರಾ ಜೈನ ಮಠದ ಧರ್ಮಗುರುಗಳಾದ ಸೌರಭಸೇನ ಮುನಿ ಮಹಾರಾಜರು ಮಹಾಮಾರಿ ಕೊರೊನಾದಲ್ಲಿ ವಾರಿಯರ್ಸ್‍ರಾಗಿ ನಿರಂತರವಾಗಿ ಸೇವೆ ನೀಡುತ್ತಿರುವ ಪೊಲೀಸ್ ಇಲಾಖೆ, ಮತ್ತು ಇತರ ಸೇವಾರ್ಥಿಗಳಿಗೆ ನಿರಂತರವಾಗಿ ಭೋಜನ ಮತ್ತು ಎಲ್ಲ ಸಹಾಯ, ಸೌಕರ್ಯವನ್ನು ನೀಡುತ್ತಿದ್ದಾರೆ.ಸೌರಭಸೇನ ಭಟ್ಟಾರಕ ಮಹಾರಾಜರು ಸಾಮಾನ್ಯ ಬಡಕುಟುಂಬಗಳ ಕೊರೊನಾ ಸಾಂಕ್ರಮಿಕರಿಗೆ ಮತ್ತು ವಾರಿಯರ್ಸ್‍ರಿಗೆ ಎಲ್ಲ ರೀತಿ ಸಹಕಾರ ನೀಡಲು ಅವರ ಸದ್ಭಕ್ತರೊಂದಿಗೆ ಸಹಾಯಹಸ್ತ ನೀಡಿದ್ದಾರೆ. ಇದನ್ನು ಗಮನಿಸಿ ಶ್ರೀ ಶ್ಯಾಮ ಪದಯಾತ್ರಾ ಸೇವಾ ಸಮೀತಿಯ ಸಚಿವರಾದ ಕಮಲ ಮಾಧವ ಶರ್ಮಾ ಇವರು ಮಹಾರಾಜರ ಸೇವೆ ಶ್ಲಾಘೀಸಿದ್ದಾರೆ.

ಕೊರೊನಾ ಮಹಾಮಾರಿ ದೇಶದಿಂದ ನಷ್ಟಾಗುವರೆಗೆ ಪ್ರತಿಯೊಬ್ಬರು ಇನ್ನೊಬ್ಬರ ಕಷ್ಟ-ಸುಖಗಳಲ್ಲಿ ಭಾಗಿಯಾಗಿ ಸಹಾಯಹಸ್ತ ನೀಡಲು ಎಲ್ಲರು ದೇಶದ ಪ್ರಧಾನಿ ನರೇಂದ್ರ ಮೋದಿಜಿ ಇವರ ಕೈಗೆ ಕೈಜೋಡಿಸಿರಿ ಎಂದು ಸೌರಭಸೇನ ಭಟ್ಟಾರಕ ಮಹಾರಾಜರು ಕರೆ ನೀಡಿದ್ದಾರೆ.ತಿಜಾರಾ ಪೊಲೀಸ್ ಠಾಣೆಯ ಮುಖ್ಯಾಧಿಕಾರಿಗಳಾದ ಜಿತೇಂದ್ರ ನಾವರಿಯಾ ಇವರು ಸ್ವಾಮೀಜಿಗಳಿಂದ ಸನ್ಮಾನ ಪಡೆದುಕೊಂಡರು. ಈ ವೇಳೆ ಕೃಷ್ಣ ಭಾರದ್ವಾಜ, ಭರತಲಾಲ ನರೇಶ, ಜಾಂಗಿಡ್ ಉತ್ತಮ, ರಾಕೇಶ ಜೈನ, ಚಿರಾಗ ಪದ್ಮ, ಸೇರಿದಂತೆ ಇನ್ನಿತರರು ಇದ್ದರು.ಕಾಗವಾಡ ತಾಲ್ಲೂಕಿನ ಜುಗೂಳ ಗ್ರಾಮದ ಸುಪುತ್ರರು ಹಾಗೂ ಭಟ್ಟಾರಕ ಮಹಾರಾಜರಾದ ಸೌರಭಸೇನ ಮಹಾರಾಜರು ರಾಜಸ್ಥಾನ ರಾಜ್ಯದಲ್ಲಿ ಕೋವಿಡ್ ವಾರಿಯರ್ಸ್‍ರೊಂದಿಗೆ ಸೇವೆ ನೀಡುತ್ತಿದ್ದಾರೆ. ಇದನ್ನು ಕಂಡು ಇಲ್ಲಿಯ ಸದ್ಭಕ್ತರು ನಾವು ಕೊರೊನಾ ಸೋಂಕಿತರಿಗೆ ಸಹಾಯಹಸ್ತ ನೀಡೋಣ ಎಂದು ಪ್ರತಿಜ್ಞೆ ಮಾಡುತ್ತಿದ್ದಾರೆ. 19 ಕಾಗವಾಡ 4 ಜುಗೂಳ ಗ್ರಾಮದ ಸುಪುತ್ರರು, ಸೌರಭಸೇನ ಭಟ್ಟಾರಕ ಮಹಾರಾಜರು ರಾಜಸ್ಥಾನ ರಾಜ್ಯದ ತಿಜಾರಾ ಜೈನ ಮಠದಲ್ಲಿ ಪೊಲೀಸ್ ಅಧಿಕಾರಿ ಜಿತೇಂದ್ರ ನಾವರಿಯಾ ಇವರನ್ನು ಸನ್ಮಾನಿಸುತ್ತಿರುವಾಗ.

ಸುದ್ದಿ ಓದಿ