ರಾಣೆಬೆನ್ನೂರ

ನಿರಂತರ ಸೇವೆ ಸ್ವಚ್ಚ ಸಮಾಜ ನಿರ್ಮಾಣ ರೋಟರಿ ಸಂಸ್ಥೆಯ ಮುಖ್ಯ ಗುರಿ: ಜಾಗೀರದಾರ

ನಿರಂತರ ಸೇವೆ ಸ್ವಚ್ಚ ಸಮಾಜ ನಿರ್ಮಾಣ  ರೋಟರಿ ಸಂಸ್ಥೆಯ ಮುಖ್ಯ ಗುರಿ: ಜಾಗೀರದಾರ

ರಾಣಿಬೆನ್ನೂರ 17: ಮಾನವ ಆಧುನಿಕ ಜಗದ ಜಂಜಡದಲ್ಲಿ ಬಿದ್ದು ಸಮಾಜ ಸೇವೆಯನ್ನು ಮರೆಯುತ್ತಿದ್ದಾನೆ. ಸಮಾಜ ಸೇವೆ ನೆಮ್ಮದಿ, ಸಹ ಬಾಳ್ವೆಯನ್ನು ಕಲಿಸುತ್ತದೆ. ಜನರಿಗಾಗಿ ನಿರಂತರ ಸೇವೆ, ಸ್ವಚ್ಚ ಸಮಾಜ ನಿರ್ಮಾಣ ಮಾಡುವುದು ರೋಟರಿ ಸಂಸ್ಥೆಯ ಮುಖ್ಯ ಗುರಿ ಎಂದು  ವಿಜಯಪುರದ ಪಿಡಿಜಿ ಪ್ರಾಣೇಶ ಜಾಗೀರದಾರ ಹೇಳಿದರು. 

ಇಲ್ಲಿನ ಸ್ಟೇಶನ್ ರಸ್ತೆಯ ವರ್ತಕರ ಸಮುದಾಯ ಭವನದಲ್ಲಿ ಶನಿವಾರ ಸಂಜೆ ರೋಟರಿ ಸಂಸ್ಥೆ ಹಾಗೂ ಇನ್ನರ್‌ವ್ಹೀಲ್ ಸಂಸ್ಥೆಯ ಪ್ರಸಕ್ತ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆರೋಗ್ಯ, ಶಿಕ್ಷಣ, ಪರಿಸರ ಹೀಗೆ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸಮಾಜಮುಖಿಯಾಗಿ ಕಾರ್ಯನಿರ್ವಹಿಸಿದೆ. ಸಂಸ್ಥೆ ಸಮಾಜಮುಖಿ ಕಾರ್ಯವನ್ನು ಮುನ್ನಡೆಸಿಕೊಂಡು ಹೋಗುವ ಜವಾಬ್ದಾರಿ ನೂತನ ಪದಾಧಿಕಾರಿಗಳ ಮೇಲಿದ್ದು, ಅದನ್ನು ಅವರು ಯಶಸ್ವಿಯಾಗಿ ನಿಭಾಯಿಸಲಿ ಎಂದು ಶುಭಹಾರೈಸಿದರು.  ನೂತನ ಅಧ್ಯಕ್ಷ ವಿರೇಶ ಮೋಟಗಿ ಮಾತನಾಡಿ, ರೋಟರಿ ಸಂಸ್ಥೆಯ ಎಲ್ಲ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನೆರವೇರಿಸುವ ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ರೋಟರಿ ಅಧ್ಯಕ್ಷ ವಿರೇಶ ಮೋಟಗಿ, ಕಾರ್ಯದರ್ಶಿ ಪ್ರಕಾಶ ಮಾಳಗಿ ಅವರು ವಿಜಯಪುರದ ಪಿಡಿಜಿ ಪ್ರಾಣೇಶ ಜಾಗೀರದಾರ ಅವರಿಂದ ಮತ್ತು ಇನ್ನರ್‌ವ್ಹೀಲ್ ಅಧ್ಯಕ್ಷೆ ಸಂಜನಾ ಕುರುವತ್ತಿ ಹಾಗೂ ಕಾರ್ಯದರ್ಶಿ ಪ್ರಮೀಳಾ ಜಂಬಿಗಿ ಅವರಿಗೆ ಹಾವೇರಿ ಇನ್ನರ್‌ವ್ಹೀಲ್ ಜಿಲ್ಲಾ ಕಾರ್ಯದರ್ಶಿ ವಿರಾಜ್ ಕೋಟಕ್ ಅವರು ಪದಗ್ರಹಣ ಮಾಡಿಸಿದರು.   ವಿಧಾನ ಸಭೆ ಮಾಜಿ ಅಧ್ಯಕ್ಷ ಕೆ.ಬಿ.ಕೋಳಿವಾಡ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸೇವೆಗೆ ಮೊತ್ತೊಂದು ಹೆಸರು ರೋಟರಿ. ಸೇವಾ ಕ್ಷೇತ್ರದಲ್ಲಿ ರೋಟರಿ ಸಂಸ್ಥೆ ಸಾಕಷ್ಟು ಕೆಲಸ ಮಾಡಿದ್ದು, ನಾನೊಬ್ಬ ರೋಟರಿಯನ್ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ ಎಂದರು.    ಮಂಜುನಾಥ ಉಪ್ಪಾರ, ಡಾ.ಬಿ.ಎಸ್‌. ಕೇಲಗಾರ, ವೀರನಗೌಡ ಪೊಲೀಸಗೌಡ್ರ, ಸುಧೀರ ಕುರುವತ್ತಿ, ಜಿ.ಜಿ. ಹೊಟ್ಟಿಗೌಡರ, ಜಗದೀಶ ಕಲ್ಯಾಣಿ, ಅರವಿಂದ ಮೆಹರವಾಡೆ, ಬಿ.ಜೆ. ಹಿರೇಮಠ, ಜಯಾ ಶ್ರೀನಿವಾಸ, ಇಂದಿರಾ ಹಿರೇಮಠ, ಶೋಭಾ ಜಂಬಿಗಿ, ರಾಜೇಶ್ವರಿ ಹನಗೋಡಿಮಠ, ಜಯಣ್ಣ ಜಂಬಿಗಿ, ಶೋಭಾ ಜಂಬಿಗಿ, ಕವಿತಾ ಬದಾಮಿ, ಭಾರತಿ ಜಂಬಿಗಿ, ಸುಮಾ ಹೊಟ್ಟಿಗೌಡ್ರ, ಜಿ.ಎಸ್‌. ರಾಮಚಂದ್ರ, ವಿನೋದ ಜಂಬಿಗಿ ಹಾಗೂ ರೋಟರಿ ಹಾಗೂ ಇನ್ನರ್‌ವ್ಹೀಲ್ ಸಂಸ್ಥೆಯ ಸದಸ್ಯರು ಉಪಸ್ಥಿತ ಇದ್ದರು. 


ಸುದ್ದಿ ಓದಿ