ಕಾಗವಾಡ

ಮುಂದುವರೆದ ವಕೀಲರ ಮುಷ್ಕರ; ಕಿತ್ತೂರ ಕರ್ನಾಟಕ ಸೇನೆಯಿಂದ ಬೆಂಬಲ..

ಮುಂದುವರೆದ ವಕೀಲರ ಮುಷ್ಕರ; ಕಿತ್ತೂರ ಕರ್ನಾಟಕ ಸೇನೆಯಿಂದ ಬೆಂಬಲ..

ಕಾಗವಾಡ 14: ಪಟ್ಟಣದಲ್ಲಿ ನ್ಯಾಯಾಲಯ ಕಟ್ಟಡಕ್ಕೆ ಸ್ಥಳ ನೀಡುವ ಕುರಿತು, ವಕೀಲರ ಸಂಘ ನಡೆಸುತ್ತಿರುವ ಮುಷ್ಕರ ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಕಿತ್ತೂರ ಕರ್ನಾಟಕ ಸೇನೆ ಸೇರಿದಂತೆ ಅನೇಕ ಸಂಘ-ಸಂಸ್ಥೆಗಳು ವಕೀಲರಿಗೆ ಬೆಂಬಲ ವ್ಯಕ್ತಪಡಿಸಿವೆ. 

ನಿನ್ನೆ ದಿ. 13 ರಂದು ಸಂಜೆ ವಕೀಲರು ನಡೆಸುತ್ತಿರುವ ಮುಷ್ಕರದ ಸ್ಥಳಕ್ಕೆ ಕಿತ್ತೂರ ಕರ್ನಾಟಕ ಸೇನೆಯ ರಾಜಾಧ್ಯಕ್ಷ ಮಹಾದೇವ ತಳವಾರ ಭೇಟ್ಟಿ ನೀಡಿ, ವಕೀಲರ ಹೋರಾಟ ನ್ಯಾಯಯುತವಾಗಿದ್ದು, ಗಡಿ ತಾಲೂಕಾಗಿರುವ ಕಾಗವಾಡ ಪಟ್ಟಣದಲ್ಲಿ ನ್ಯಾಯಾಲಯ ಸೇರಿದಂತೆ ವಿವಿಧ ಇಲಾಖೆಗಳಿಗೆ ಕಟ್ಡಡ ಇಲ್ಲದಿರುವುದು ನೋವಿನ ಸಂಗತಿಯಾಗಿದೆ. ಆದ್ದರಿಂದ ಸರ್ಕಾರ ಕೂಡಲೇ ನ್ಯಾಯಾಲಯ ಕಟ್ಟಡಕ್ಕೆ ಸ್ಥಳ ನೀಡಬೇಕೆಂದು ಒತ್ತಾಯಿಸಿದರು. 

ಇನ್ನೂ ಮುಷ್ಕರ ಇಂದು ದಿ. 14 ರಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಮಾಜಿ ಶಾಸಕ ಮೋಹನ ಶಹಾ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಬೆಂಬಲ ವ್ಯಕ್ತಪಡಿಸುತ್ತಿವೆ. ಈ ಸಮಯದಲ್ಲಿ ಕಿತ್ತೂರ ಕರ್ನಾಟಕ ಸೇನೆಯ ಜಿಲ್ಲಾಧ್ಯಕ್ಷ ಶಿವಾನಂದ ಕೋಳಕಾರ, ಕೇಂದ್ರ ಸಮಿತಿಯ ಸದಸ್ಯರಾದ ರಾಜು ಗುಳನ್ನವರ, ದೇವೆಂದ್ರ ತಳವಾರ ಮತ್ತು ರಮೇಶ ತಳವಾರ, ನಾಗೇಶ ಮಾಳಿ, ಶಿವಾನಂದ ನವಿನಾಳೆ, ರಾಹುಲ ತಾರದಾಳೆ, ಸುನೀಲ ಗುಂಡವಾಡೆ, ಉಮೇಶ ತಳವಾರ, ರಾಹುಲ ಕುನ್ನೆ, ಅಜಯ ಪಾಟೀಲ ಸೇರಿದಂತೆ ಕಿತ್ತೂರ ಕರ್ನಾಟಕ ಸೇನೆಯ ಎಲ್ಲ ಪದಾಧೀಕಾರಿಗಳು, ಮುಖಂಡರು, ವಕೀಲರು ಉಪಸ್ಥಿತರಿದ್ದರು. 


ಸುದ್ದಿ ಓದಿ