ಕಾಗವಾಡ

ಬೇಕಾಬಿಟ್ಟಿ ವಿದ್ಯುತ ಬಿಲ್ ನೀಡಿಕೆ ವಿರೋಧಿಸಿ ಗ್ರಾಹಕರ ಪ್ರತಿಭಟನೆ

ಬೇಕಾಬಿಟ್ಟಿ ವಿದ್ಯುತ ಬಿಲ್ ನೀಡಿಕೆ ವಿರೋಧಿಸಿ ಗ್ರಾಹಕರ ಪ್ರತಿಭಟನೆ

ಲೋಕದರ್ಶನ ವರದಿ 


ಕಾಗವಾಡ 10: ತಾಲೂಕಿನ ಉಗಾರ್ ಬುದ್ರುಕ್ ಗ್ರಾಮದ ಹೆಸ್ಕಾಂ ಇಲಾಖೆಯ ಕೆಲ ಗ್ರಾಹಕರು ಇಲಾಖೆಯ ಕಾರ್ಮಿಕನ ತಪ್ಪು ನಿರ್ಣಯದಿಂದ ವಿದ್ಯುತ್ ಬಳಸಿದಕ್ಕಿಂತ ಅಧಿಕ ಬಿಲ್ಲು ಆಕರಣೆ ನೀಡಿದ್ದರಿಂದ ರೊಚ್ಚಿಗೆದ್ದ ಗ್ರಾಹಕರು ಹೆಸ್ಕಾಂ ಇಲಾಖೆ ಕಚೇರಿ ಎದುರು ಪ್ರತಿಭಟನೆ ಕೈಗೊಂಡು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ಘಟನೆ ಸಂಭವಿಸಿದೆ. 

ಗುರುವಾರ ಮಧ್ಯಾಹ್ನ ಉಗಾರ ಬುದ್ರುಕ ಗ್ರಾಮದ ನೂರಾರು ಮನೆಗಳ ವಿದ್ಯುತ್ ಗ್ರಾಹಕರು ಪ್ರತಿಭಟನೆ ಕೈಗೊಂಡರು. ಹೆಸ್ಕಾಂ ಇಲಾಖೆ ಬಿಲ್ ಸಂಗ್ರಹಣೆ ಮಾಡುವ ಕಾರ್ಮಿಕ ಪ್ರತಿ ಒಂದು ಮನೆಯ ಮೀಟರದಲ್ಲಿ ಬಳಸಿದ ವಿದ್ಯುತ್ ಬಲ್ ನೀಡದೆ ಡೋರ್ ಲಾಕ್ ಅಂತ ಕಡಿಮೆ ಬಿಲ್ ಕೆಲ ತಿಂಗಳು ನೀಡಿದ್ದು, ನಂತರ ಏಕಕಾಲಕ್ಕೆ 10 ಸಾವಿರ, 15 ಸಾವಿರ, 40 ಸಾವಿರವರೆಗೆ ಬಿಲ್ ನೀಡಿದ್ದಾನೆ. ಇದರಿಂದ ವಿದ್ಯುತ್ ಗ್ರಾಹಕರು ಮೇಲಾಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿ ನ್ಯಾಯ ನೀಡಲು ಕೇಳಿದರೂ ಯಾವುದೇ ಪ್ರಯೋಜನವಾಗಿಲ್ಲ. 

ನಮಗೆ ಹೆಸ್ಕಾಂ ಇಲಾಖೆಯಿಂದ ಅನ್ಯಾಯವಾಗಿದೆ ಎಂದು ಹೇಳಿ ಎಲ್ಲ ಗ್ರಾಹಕರು ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ಕೈಗೊಂಡು ತಮ್ಮ ಆಕ್ರೋಶ ಹೊರಹಾಕಿದರು. 

ಪ್ರತಿಭಟನೆಯಲ್ಲಿ ಪಾಲ್ಗೊಂಡ ಗ್ರಾಹಕರಾದ ಬಾಬುಲಾಲ್ ಮುಲ್ಲಾ 30 ಸಾವಿರ, ಅಸ್ಲಾಂ ಮಾಂಜರೆ 31 ಸಾವಿರ, ಸುಭಾಷ್ ಕಾಂಬಳೆ ಮತ್ತು ರಾಮು ಕಾಂಬಳೆ ತಲಾ 26 ಸಾವಿರ, ಮಹಾವೀರ ಮಿರಜೆ 21 ಸಾವಿರ ಹೀಗೆ ಸುಮಾರು 80 ಗ್ರಾಹಕರಿಗೆ ಹೆಸ್ಕಾಂ ಇಲಾಖೆ ಬಿಲ್ ನೀಡಿದ್ದರಿಂದ ರೊಚ್ಚಿಗೆದ್ದ ಗ್ರಾಹಕರು ಪ್ರತಿಭಟನೆ ಕೈಗೊಂಡು ಅಧಿಕಾರಿಗಳಿಗೆ ಮಾಹಿತಿ ನೀಡಿದರು. 

ಹೆಸ್ಕಾಂ ಇಲಾಖೆ ಅಧಿಕಾರಿ ಅಶೋಕ ಅರಳಿಕಟ್ಟಿ ಅವರಿಗೆ ಮನವಿ ಅರ​‍್ಿಸಿದರು. ಮನವಿ ಸ್ವೀಕರಿಸಿ ನಾನು ಮೇಲಾಧಿಕಾರಿಗಳ ಗಮನಕ್ಕೆ ಈ ವಿಷಯ ತಂದು ನ್ಯಾಯ ನೀಡುವುದಾಗಿ ಹೇಳಿದರು. 

ಬಿಜೆಪಿ ಪಕ್ಷದ ಮುಖಂಡರಾದ ಮುದ್ದು ಮುಲಾ, ಜಿತೇಂದ್ರ ಶಿಂಧೆ, ಸಾಗರ್ ಪೂಜಾರಿ, ದಾದಾ ಚೌಧರಿ, ರಮೇಶ್ ಕಾಂಬಳೆ, ಪೊಪಟ ವಿರೋಜೆ, ನಜೀರ್ ಪಠಾಣ, ಸೇರಿದಂತೆ ಅನೇಕ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 


ಸುದ್ದಿ ಓದಿ