ವಡೆರಾಯನಹಳ್ಳಿ ರೈಲ್ವೆ ಗೇಟ್ ಬಳಿ ಎಲೆಕ್ಟ್ರಾನಿಕ್ ಪೂಲ್ಸ್ ನಿರ್ಮಾಣ ಅವೈಜ್ಞಾನಿಕ, ರೈತರ ಪ್ರತಿಭಟನೆ
ರಾಣೆಬೆನ್ನೂರು 28: ತಾಲೂಕಿನ ಐರಣಿ ರಸ್ತೆಯ ವಡೆರಾಯನಹಳ್ಳಿ ರೈಲ್ವೆ ಗೇಟ್ ನಂಬರ್ 211ರಲ್ಲಿ ಇಲಾಖೆ, ಎಲೆಕ್ಟ್ರಾನಿಕ್ ಫೋಲ್ಸ್ ನಿರ್ಮಿಸಲು ಹೊರಟಿರುವುದು ಅವೈಜ್ಞಾನಿಕವಾಗಿದ್ದು ಕೂಡಲೇ ಸರಿಪಡಿಸಲು ಮುಂದಾಗಬೇಕೆಂದು ಆಗ್ರಹಿಸಿದ ರಾಜ್ಯ ರೈತ ಸಂಘದ ಮುಖಂಡರು, ಗೇಟ್ ಬಳಿ ಪ್ರತಿಭಟಿಸಿ ಧರಣಿ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ರವೀಂದ್ರ ಗೌಡ ಪಾಟೀಲ್ ಅವರು ಈ ಭಾಗದಲ್ಲಿ ರೈತರು ಕೃಷಿ ಅವಲಂಬಿಸಿದ್ದಾರೆ. ಕಬ್ಬು ಮತ್ತು ಭತ್ತ ಅಧಿಕ ಪ್ರಮಾಣದಲ್ಲಿ ಬೆಳೆಯುತ್ತಾರೆ.
ಇಲ್ಲಿಂದಲೇ ಕಾರ್ಖಾನೆಗಳಿಗೆ ಸಂಚರಿಸಬೇಕು. ರೈಲ್ವೆ ಇಲಾಖೆ ಅಳವಡಿಸಿರುವ ಎಲೆಕ್ಟ್ರಿಕಲ್ ಫೋಲ್ಸ್ ಮತ್ತು ಹೈಟ್ ಗೇಜ್ನಿಂದ ವಾಹನ ಸಂಚಾರಕ್ಕೆ ತೊಂದರೆ ಉಂಟಾಗುತ್ತದೆ. ಇಲಾಖೆ ಇದನ್ನು ತೆರವುಗೊಳಿಸಿ 15 ರಿಂದ 25 ಅಡಿ ಎತ್ತರಕ್ಕೆ ಏರಿಸಬೇಕು ಎಂದು ಒತ್ತಾಯಿಸಿದರು. ಇಲಾಖೆ ತಕ್ಷಣವೇ ರೈತರ ಮನವಿ ಪುರಸ್ಕರಿಸದೆ ಹೋದರೆ, ಮುಂದಿನ ದಿನಮಾನಗಳಲ್ಲಿ ಸಾವಿರಾರು ರೈತರೊಂದಿಗೆ, ಸ್ಥಳದಲ್ಲೇ ಧರಣಿ ನಡೆಸಿ, ಶಾಸಕರು ಸಂಸದರು ಸಚಿವರು ಮತ್ತು ರೈಲ್ವೆ ಇಲಾಖೆ ಅಧಿಕಾರಿಗಳು ಬರುವವರೆಗೂ ಅನಿರ್ದಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಪಾಟೀಲ್ ಎಚ್ಚರಿಸಿದರು. ಸ್ಥಳಕ್ಕೆ ಧಾವಿಸಿದ, ರೈಲ್ವೆ ಅಭಿಯಂತರ ಹರೀವೀರ್ ಸಿಂಗ್ ಅವರಿಗೆ ಪ್ರತಿಭಟನಾ ನಿರತರು ಮನವಿ ಸಲ್ಲಿಸಿ, ನಿರ್ಮಾಣ ಕಾರ್ಯ ಸ್ಥಗಿತಗೊಳಿಸುವಂತೆ ಆಗ್ರಹಿಸಿದರು. ರೈಲ್ವೆ ಪಿಎಸ್ಐ ಕೆ.ಟಿ.ಅಣ್ಣಯ್ಯ, ಇಲಾಖೆಯ ಷಣ್ಮುಖಪ್ಪ, ಹಾಲೇಶ್ ನಾಯಕ್, ರಾಮಯ್ಯ , ಪಿಎಸ್ಐ ಸಂತೋಷ್ ಬಾಗೂಜಿ ಮತ್ತು ರೈತ ಮುಖಂಡರಾದ, ಚಂದ್ರಣ್ಣ ಬೇಡರ್, ಗ್ರಾ.ಪಂ. ಸದಸ್ಯರಾದ, ಚಂದ್ರ್ಪ ಹಕ್ಕಿ, ನಿಂಗಪ್ಪ ಕಳ್ಳಿಮನಿ, ಚಂದ್ರ್ಪ ಬಣಕಾರ್, ದೇವೇಂದ್ರ್ಪ ಕಟಗಿ, ದಿನೇಶ್ ಪಾಟೀಲ್, ಮರಡೆಪ್ಪ ಚಳಗೇರಿ, ಮಾರುತಿ ಕುರುಬರ, ಜಗದೀಶ್ ಕೋಟಿಗೌಡ್ರ, ಬಸನಗೌಡ ಚನ್ನಗೌಡ್ರ, ಕೊಟ್ರೇಶಪ್ಪ ಚಳಗೇರಿ, ಜಮಾಲ್ ಸಾಬ್ ಸೇತಸನದಿ, ಮಹಮ್ಮದ್ ಅಲಿ ಸಾಬ್ ದೊಡ್ಮನಿ, ತಿರಕಪ್ಪ ಅಣ್ಣೇರ, ರಾಮಪ್ಪ ಬೆನ್ನೂರು ಸೇರಿದಂತೆ ನೂರಾರು ರೈತರು, ಗ್ರಾಮಸ್ಥರು ಪಾಲ್ಗೊಂಡಿದ್ದರು.