ಧಾರವಾಡ - ಹುಬ್ಬಳ್ಳಿ

ಸಂವಿಧಾನ ದಿನ ಆಚರಣೆ

ಸಂವಿಧಾನ ದಿನ ಆಚರಣೆ


ಧಾರವಾಡ  26: ಸಂವಿಧಾನದ ರಚನೆಯಲ್ಲಿ ಭಾರತದ ಅನೇಕ ಗಣ್ಯರು ಶ್ರಮಿಸಿ ಸುಮಾರು ವಿಶ್ವದ ಅರವತ್ತು ಸಂವಿಧಾನವನ್ನು ಅಧ್ಯಯನ ಮಾಡಿ, ಎರಡು ವರ್ಷ ಹನ್ನೊಂದು ತಿಂಗಳು ಹದಿನೆಂಟು ದಿನ ಚರ್ಚಿಸಿ, ವಿಮರ್ಶಿಸಿ ನವಂಬರ್ 26 1949 ರಂದು ಅಂಗೀಕರಿಸಲಾಯಿತು. ಎಂದು ಸಂಸ್ಥೆಯ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹೇಳಿದರು. 

  ಜೆ.ಎಸ್‌.ಎಸ್  ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ಮಾನವ ಹಕ್ಕುಗಳ ಸಂಘ ಮತ್ತು ಎನ್‌.ಎಸ್‌.ಎಸ್‌. ಘಟಕದ ವತಿಯಿಂದ ಹಮ್ಮಿಕೊಂಡ ಸಂವಿಧಾನ ದಿನ ಆಚರಣೆ ಕಾರ್ಯಕ್ರಮ  ಉದ್ಘಾಟಿಸಿ ಅವರು ಮಾತನಾಡಿದರು. 

ವಿಶ್ವದಲ್ಲಿ ಅತೀ ದೊಡ್ಡ ಲಿಖಿತ ಸಂವಿಧಾನ ಭಾರತದ್ದಾಗಿದೆ. ಈ ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳು, ಕರ್ತವ್ಯಗಳು ಮುಂತಾದ ವಿಷಯಗಳನ್ನು ಮಂಡಿಸಲಾಗಿವೆ. ಆರ್ಟಿಕಲ್ 32 ಸಂವಿಧಾನದ ಹೃದಯ ಎಂದು ಕರೆಯಲಾಗಿದೆ. ಇದು ಮೂಲಭೂತ ಹಕ್ಕುಗಳ ರಕ್ಷಣೆಗೆ ಕವಚವಾಗಿದೆ. ಸಂವಿಧಾನವನ್ನು ಗೌರವಿಸುವುದು, ಪಾಲಿಸುವುದು ಪ್ರತಿ ಪ್ರಜೆಯ ಕರ್ತವ್ಯವಾಗಬೇಕು ಎಂದರು. 

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹುಬ್ಬಳ್ಳಿ ಸಕ್ರಿ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ರೂಪಾ ಇಂಗಳಹಳ್ಳಿ  ಅವರು ಸಂವಿಧಾನ ರಚನೆಯ ಹಿನ್ನಲೆಯನ್ನು ವಿದ್ಯಾರ್ಥಿಗಳಿಗೆ ವಿಸ್ತಾರವಾಗಿ ಹೇಳಿದರು. ಸಂವಿಧಾನ ರಚನಾ ಸಮಿತಿ ಹದಿನೆಂಟು ಸಮಿತಿಗಳಾಗಿ ಪ್ರತಿಯೊಂದು ವಿಷಯವನ್ನು ಆಳವಾಗಿ ಅಧ್ಯಯನ ಮಾಡಿ ಸಂವಿಧಾನ ರಚಿಸಲಾಯಿತು. ಮೊದಲು ಕರಡು ಪ್ರತಿಯನ್ನು ಬಿ.ಎನ್‌. ರಾವ್ ಮಂಡಿಸಿದರು. ನಂತರ ಅದರ ಮೇಲೆ ಪ್ರತಿಯೊಂದು ಶಬ್ಧ ಮತ್ತು ಕಲಂಗಳನ್ನು ಕುಲಂಕುಷವಾಗಿ ಅಧ್ಯಯನ ಮಾಡಿ ಕೆಲವು ತಿದ್ದುಪಡಿಯಾಗಿ ಡಾ. ಬಿ.ಆರ್‌. ಅಂಬೇಡ್ಕರ ಅವರು ನವಂಬರ್ 26 1949 ರಂದು ರಚನಾ ಸಮಿತಿಗೆ ಒಪ್ಪಿಸಿದರು. ವಿದ್ಯಾರ್ಥಿಗಳು ಸಂವಿಧಾನದ ಬಗ್ಗೆ ಆಳವಾಗಿ ಅಧ್ಯಯನ ಮಾಡಬೇಕು. ಮತ್ತು ಅದರ ಬಗ್ಗೆ ಪ್ರತಿಯೊಂದು ಅಂಶವನ್ನು ತಿಳಿದುಕೊಳ್ಳಬೇಕೆಂದರು. ಸಂವಿಧಾನಕ್ಕೆ ನಾವೆಲ್ಲರೂ ಬದ್ಧರಾಗಿರಬೇಕು ಎಂದರು. 

  ಡಾ. ಅಜಿತ ಪ್ರಸಾದ ಸಂವಿಧಾನ ಪೀಠಿಕೆಯನ್ನು ಬೋಧಿಸಿ ಸಂವಿಧಾನಕ್ಕೆ ಬದ್ಧರಾಗಿರುತ್ತೇವೆಂದು ವಿದ್ಯಾರ್ಥಿಗಳು ಪ್ರತಿಜ್ಞೆ ಕೈಗೊಂಡರು. 

ವಚನ ಕಮ್ಮಟ ಪರೀಕ್ಷೆಯಲ್ಲಿ ರಾಜ್ಯಕ್ಕೆ ತೃತೀಯ ರಾ​‍್ಯಂಕ್ ಪಡೆದ ಕಾಲೇಜಿನ ವಿದ್ಯಾರ್ಥಿ ಕು. ನಾಗಶ್ರೀ ಭಟ್ ಅವರಿಗೆ ಸನ್ಮಾನಿಸಲಾಯಿತು. ವಚನ ಕಮ್ಮಟ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ವಚನ ಕಮ್ಮಟ ಪರೀಕ್ಷೆಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ ಪ್ರಾಧ್ಯಾಪಕರಾದ ಪ್ರೊ. ಮಹಾಂತ ಎಂ. ದೇಸಾಯಿ ಮತ್ತು ಪ್ರೊ.ಲೀಲಾವತಿ ಪಾಟೀಲ ಅವರಿಗೆ ಅಭಿನಂದಿಸಲಾಯಿತು. 

ಸಂಸ್ಥೆಯ ಕಾರ್ಯಾಧ್ಯಕ್ಷರಾದ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ 78 ನೇ ಜನ್ಮದಿನದ ಅಂಗವಾಗಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಪ್ರಮಾಣ ಪತ್ರ ನೀಡಲಾಯಿತು. 

ಡಾ. ಸೂರಜ ಜೈನ್, ಮಹಾವೀರ ಉಪಾಧ್ಯೆ, ಪ್ರೊ. ಬಲಭೀಮ ಹಾವನೂರ, ಡಾ. ಆರ್‌.ವಿ.ಚಿಟಗುಪ್ಪಿ, ಪ್ರೊ. ಅರ್ಚನಾ ಪಾಟೀಲ, ಪ್ರೊ. ಶ್ರೀರಕ್ಷಾ ಉಪಸ್ಥಿತರಿದ್ದರು.  ಲಕ್ಷ್ಮೀ ಲಮಾಣಿ ಸ್ವಾಗತಿಸಿದರು. ಕು. ಎಲ್ವಿಸಾ ಫನಾಂರ್ಡಿಸ್ ಅತಿಥಿಗಳನ್ನು ಪರಿಚಯಿಸಿದರು.   ಚಾರುಲತಾ ನಿರೂಪಿಸಿದರು. ಕು. ಸೋನಿಯಾ ವಂದಿಸಿದರು. 


ಸುದ್ದಿ ಓದಿ