ರಾಣೆಬೆನ್ನೂರ

ಮುದೇನೂರಿನಲ್ಲಿ ಸಂವಿಧಾನ ಜಾಗೃತಿ ಜಾಥಾ ರಥಯಾತ್ರೆ

ಮುದೇನೂರಿನಲ್ಲಿ ಸಂವಿಧಾನ ಜಾಗೃತಿ ಜಾಥಾ ರಥಯಾತ್ರೆ

ರಾಣೇಬೆನ್ನೂರು : ಫೆ 20ಸರ್ವ ಜನರಲ್ಲಿ ಸಮಾನತೆ ದೇಶದ ಪ್ರತಿಯೊಬ್ಬ ಪ್ರಜೆಗೂ ಒಂದೇ ಕಾನೂನು ಎಂಬ ಸಂವಿಧಾನ ರಚಿಸಿ ಮಹಾ ಮಾನವತಾವಾದಿ ಬಾಬಾ ಸಾಹೇಬ್ ಅಂಬೇಡ್ಕರ್ ಇಂದಿಗೂ ದೇಶದ ಪ್ರತಿಯೊಬ್ಬ ಜನರ ಮನದಲ್ಲಿ ಅಡಗಿದ್ದಾರೆ. ಅವರ ಆದರ್ಶ ಗುಣಗಳನ್ನು ಪೋಷಕರು ಮಕ್ಕಳಿಗೆ ತಿಳಿಸುವ ಮೂಲಕ ಪ್ರಜಾಪ್ರಭುತ್ವದ ಭದ್ರಬುನಾದಿಯನ್ನು ಬಿಗಿಗೊಳಿಸಲು ಸಹಾಯಕವಾಗುತ್ತದೆ ಎಂದು ತಾಲೂಕ ಬಿಸಿಎಂ ಅಧಿಕಾರಿ ವಿ. ಎಸ್ ಹಿರೇಮಠ ಹೇಳಿದರು.

ಅವರು ತಾಲೂಕಿನ ಮುದೇನೂರ ಗ್ರಾಮದಲ್ಲಿ ಬುಧವಾರ ಮುದೇನೂರು ಗ್ರಾಮ ಪಂಚಾಯಿತಿ ಕಾರ್ಯಾಲಯ, ತಾಲೂಕ  ಸಮಾಜ ಕಲ್ಯಾಣ ಇಲಾಖೆ,  ಬಿಸಿಎಂ ಇಲಾಖೆ,ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ್ದ    ಸಂವಿಧಾನ ಜಾಗೃತಿ ಜಾಥಾ ಮೆರವಣಿಗೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ಗ್ರಾಮದ ಪ್ರಥಮ ಪ್ರಜೆ ಗ್ರಾ.ಪಂ ಅಧ್ಯಕ್ಷೆ ರೇಖಾ ಮಂ.ಪುಟ್ಟಕ್ಕನವರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಸಭೆಯಲ್ಲಿ ಸದಸ್ಯರಾದ ಇಂದಿರಾ ಗೋವಿಂದಗೌಡ್ರ,ನಾಗರಾಜ ಬಿಳಸನೂರಮಠ, ಮಂಜುಳಾ ಪಾಟೀಲ,ಶಿಕ್ಷಣ ಇಲಾಖೆಯ ಎಮ್ ಸಿ ಬಲ್ಲೂರ,ಸಮಾಜ ಕಲ್ಯಾಣ ಇಲಾಖೆಯ ದೇವಲ ನಾಯಕ, ಗೀರೀಶ್ ಮುದಿಯಮ್ಮನವರ, ಮುದೇನೂರು ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಪ್ರಕಾಶ ಹೊಸಳ್ಳಿ ಪಿ. ಡಿ. ಓ. ಪ್ರಕಾಶ ಎಂ.ಕೆ, ಕಾರ್ಯದರ್ಶಿ ಹನುಮಂತಪ್ಪ ಹರಿಹರ ಕರ್ನಾಟಕ ಗ್ರಾಮೀಣ ತಾಲೂಕು ನಗರ ಪುನರ್ ವಸತಿ ಕಾರ್ಯಕರ್ತರ ರಾಜ್ಯ ಸಮಿತಿ ನಿರ್ದೇಶಕ ಗಣೇಶ್ ನಂದಿಗಾವಿ ವಿಜಯ್ ಕೆಳಗಿನಮನಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳು ಅಂಗನವಾಡಿ ಕಾರ್ಯಕರ್ತೆಯರು ಆರೋಗ್ಯ ಇಲಾಖೆಯವರು ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು ಕಾರ್ಯಕ್ರಮದಲ್ಲಿ ಶಿಗ್ಗಾವಿ ಜೋಡಿ ಬಸವೇಶ್ವರ ಜನಪದ ಕಲಾ ಸಂಸ್ಥೆ ಕಲಾವಿದರು   ಅಂಬೇಡ್ಕರ್ ಕುರಿತು ಜನಪದ ಗೀತೆಗಳು  ಹಾಡಿ ಮನರಂಜಿಸಿದರು. 


ಸುದ್ದಿ ಓದಿ