ಸರ್ಕಾರಿ ಕೆಲಸ ದೇವರ ಸೇವೆ ಎಂದು ಪರಿಗಣಿಸಿ ಸೇವೆ ಸಲ್ಲಿಸಿ: ಮಂಜುನಾಥ ಹೊರಕೇರಿ
ರಾಣಿಬೆನ್ನೂರ:24 ಸರಕಾರಿ ಸೇವೆ ದೇವರ ಕೆಲಸ ಎಂದರಿತು ಪ್ರಾಮಾಣಿಕವಾಗಿ ಹಾಗೂ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿದರೆ ಉತ್ತಮ ಹಾಗೂ ಆರೋಗ್ಯಯುತ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ದಾವಣಗೇರಿ ನಿವೃತ್ತ ಜಿಲ್ಲಾ ಆರೋಗ್ಯ ಮೇಲ್ವಿಚಾರಣಾ ಅಧಿಕಾರಿ ಮಂಜುನಾಥ ಹೊರಕೇರಿ ಹೇಳಿದರು.
ತಾಲೂಕಿನ ಮಾಕನೂರ ಗ್ರಾಮದ ಶ್ರೀ ಮಾರ್ಕಂಡೇಶ್ವರ ಸರ್ಕಾರಿ ಪ್ರೌಢಶಾಲೆಯಲ್ಲಿ ಅಭಿಮಾನಿಗಳು ಹಾಗೂ ಗ್ರಾಮಸ್ಥರು ಮತ್ತು ಪಾಲಕರು ನಿವೃತ್ತಿಯ ನಿಮಿತ್ತ ಏರಿ್ಡಸಿದ್ದ ಕಾರ‌್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸ್ಪರ್ಧಾತ್ಮಕ ಹಾಗೂ ವೈಜ್ಞಾನಿಕ ಯುಗದಲ್ಲಿ ಇಂದು ಸರ್ಕಾರಿ ಉದ್ಯೋಗ ಹೊಂದುವುದು ಬಹಳಷ್ಟು ಕಷ್ಟಕರ ಕೆಲಸವಾಗಿದೆ. ಸರ್ಕಾರಿ ಕೆಲಸ ದೇವರ ಸೇವೆ ಎಂದು ಪರಿಗಣಿಸಿ ಸೇವೆ ಸಲ್ಲಿಸಿದರೆ ಮಾತ್ರ ಸಂತೃಪ್ತಿ ಸಭಿಸುವುದು ಎಂದರು.
ಅಕಸ್ಮಾತ್ ಸರಕಾರಿ ಕೆಲಸ ದೊರೆತರೂ ಸಹ ಅದನ್ನು ಪ್ರಾಮಾಣಿಕವಾಗಿ ನಿಭಾಯಿಸಲು ಬಹಳಷ್ಟು ಸವಾಲುಗಳನ್ನು ಎದುರಿಸಿ ಕೆಲಸ ಮಾಡುವ ಪರಿಸ್ಥಿತಿ ಬರುತ್ತದೆ. ನಿರಂತರ 38 ವರ್ಷ 6 ತಿಂಗಳ ಕಾಲ ಆರೋಗ್ಯ ಇಲಾಖೆಯಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ಪ್ರಾಮಾಣಿಕ ಸೇವೆ ಮಾಡಿದ ತೃಪ್ತಿ ನನಗಿದೆ. ಹಾಗೂ ಸೇವೆಯಲ್ಲಿ ಅನೇಕ ಸಿಹಿ ಕಹಿ ಘಟನೆಗಳನ್ನು ಅನುಭವಿಸಿರುವುದಾಗಿ ಹೇಳಿದರು.
ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳ ಬಗ್ಗೆ ಪಾಲಕರು ಕಾಳಜಿ ವಹಿಸಬೇಕು. ಮಕ್ಕಳು ಶಾಲೆಯಿಂದ ಮನೆಗೆ ಬಂದಾಗ ಪಾಲಕರಾದವರು ದೂರದರ್ಶನದಿಂದ ದೂರ ಇದ್ದರೆ ಒಳ್ಳೆಯದು. ಮಕ್ಕಳಿಗೆ ಸ್ಮಾರ್ಟ ಪೋನ ಎಂದೂ ಕೊಡಬಾರದು. ಒಂದು ವೇಳೆ ಕೊಟ್ಟರೆ ಅವರು ಮೋಬಲ್ ಗೀಳಿಗಿಳಿದು ಶೈಕ್ಷಣಿಕ ಪ್ರಗತಿ ಕುಂಠಿತವಾಗುತ್ತದೆ. ಅವರರಿಗೆ ಅಂದಿನ ಅಭ್ಯಾಸವನ್ನು ಅಂದೇ ಮಾಡಲು ತಿಳಿಹೇಳಬೇಕು. ಇದನ್ನು ನೀವು ಪಾಲಿಸಿದರೆ ನಾನು ನಿಮ್ಮ ಮಕ್ಕಳು ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗೆ 5 ಸಾವಿರ, ದ್ವಿತೀಯ 3 ಸಾವಿರ, ತೃತೀಯ 2 ಸಾವಿರ ಸೇರಿ 10 ಸಾವಿರ ರೂ.ಗಳ ನಗದು ಬಹುಮಾನ ನೀಡಲಾಗುವುದು ಎಂದು ಪಾಲಕರಿಗೆ ಭರವಸೆ ನೀಡಿದರು.
ತಾಪಂ ಮಾಜಿ ಅಧ್ಯಕ್ಷ ನೀಲಕಂಠಪ್ಪ ಕುಸಗೂರ ಮಾತನಾಡಿ, ಮಾಕನೂರ ಗ್ರಾಮದ ನಿವಾಸಿಯಾದ ಮಂಜುನಾಥ ಹೊರಕೇರಿ 38 ವರ್ಷಗಳ ಕಾಲ ಆರೋಗ್ಯ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿ ಪ್ರಸ್ತುತ ನಿವೃತ್ತಿ ಹೊಂದಿದ ನಂತರ ಅವರು ಸಮಾಜಿಕ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯವಾಗಿದೆ. ತನಗೆ ಜನ್ಮನೀಡಿದ ಗ್ರಾಮದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪ್ರೊತ್ಸಾಹ ಧನ ನೀಡಲು ಮುಂದಾಗಿರುವುದು ಅವರ ಸಮಾಜಿಕ ಕಳಕಳಿಗೆ ಸಾಕ್ಷಿಯಾಗಿದೆ ಎಂದರು.
ಗ್ರಾಮದ ಮುಖಂಡರಾದ ದೇವೇಂದ್ರ್ಪ ಯಲಜಿ, ಶಿವನಗೌಡ ನಂದಿಗಾವಿ, ಹನುಮಂತಪ್ಪ ಆರೇರ, ರಾಜಪ್ಪ ಬಾರ್ಕಿ, ಬಸನಗೌಡ ಭರಮಗೌಡ್ರ, ಮಲ್ಲೇಶಪ್ಪ ಹಲಗೇರಿ, ಭೀಮೇಶ ಚಿನ್ನಣ್ಣನವರ, ವಿರುಪಾಕ್ಷಪ್ಪ ಕಾನಳ್ಳಿ, ಪತ್ರಕರ್ತ ಮಂಜುನಾಥ ಕುಂಬಳೂರ, ಪ್ರಭಾರಿ ಮುಖ್ಯೋಪಧ್ಯಾಯ ನಾಗರಾಜ ಮತ್ತೂರ, ಸಹಶಿಕ್ಷಕರಾದ ಟಿ.ಮಂಜುನಾಥ, ಸಂಜೀವಕುಮಾರ ಚೌಹಾಣ, ತಿಮ್ಮಕ್ಕ ಓಲೇಕಾರ, ರೂಪಾ ಪಾಟೀಲ, ಸುರೇಶ, ಎಸ್.ಬಿ. ಮರಿಗೌಡರ, ಶಿವಪ್ಪ ಕುರಿಯವರ ಮತ್ತು ಪಾಲಕರು ಇದ್ದರು.