ಶಕ್ತಿ ನೀಡಿದ ಕ್ಷೇತ್ರದ ಮತದಾರರಿಗೆ ಕಾಂಗ್ರೆಸ್ ಅಭ್ಯರ್ಥಿ ಮನಗೂಳಿ ಅಭಿನಂದನೆ
ಸಿಂದಗಿ03: ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ 62680 ಮತಗಳನ್ನು ನೀಡುವ ಮೂಲಕ ಪಕ್ಷಕ್ಕೆ ಮತ್ತು ನನಗೆ ಶಕ್ತಿ ನೀಡಿದ ಕ್ಷೇತ್ರದ ಮತದಾರರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಹೇಳಿದರು.
ಬುಧವಾರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಭ್ಯರ್ಥಿಯಾದ ನನ್ನನ್ನು ಗೆಲ್ಲಿಸಲು ಚುನಾವಣೆಯ 20 ದಿನಗಳಲ್ಲಿ ನಿರಂತರವಾಗಿ ಪಕ್ಷದ ವಿರೋಧಪಕ್ಷದ ನಾಯಕ ಸಿದ್ರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ದ್ರುವನಾರಾಯಣ, ಯು.ಟಿ. ಖಾದರ, ಜಮೀರ ಅಹ್ಮದ ಸೇರಿದಂತೆ ಜಿಲ್ಲೆಯ ನಾಯಕರಾದ ಡಾ.ಎಂ.ಬಿ. ಪಾಟೀಲ, ಶಿವಾನಂದ ಪಾಟೀಲ, ಯಶವಂತ್ರಾಯಗೌಡ ಪಾಟೀಲ, ಅಪ್ಪಾಜಿ ನಾಡಗೌಡ ಸೇರಿದಂತೆ ಪಕ್ಷದ ನಾಯಕರು, ಕಾರ್ಯಕರ್ತರು ಹಗಲಿರುಳು ಶ್ರಮಿಸಿದ್ದಾರೆ. ಉಪಚುನಾವಣೆ ಫಲಿತಾಂಶದಿಂದ ಜನತೆಯ ತೀರ್ಿಗೆ ತೆಲೆಬಾಗಲೇಬೇಕಾಗತ್ತದೆ ಎಂದು ಹೇಳಿದರು.
ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಅವರ ಗೆಲುವು ದುಡ್ಡಿನ ಮೇಲೆ ಆಗಿದೆ. ಸೋಲು ಗೆಲುವಿನ ಸೋಪಾನವಿದ್ದಂತೆ. ಆದರೂ ಕ್ಷೇತ್ರದ ನೂತನ ಶಾಸಕ ರಮೇಶ ಭೂಸನೂರ ಅವರಿಗೆ ಅಭಿನಂದನೆಗಳು. ಕ್ಷೇತ್ರದಲ್ಲಿ ಕಳೆದ ಎರಡುವರೆ ವರ್ಷದಲ್ಲಿ ನನ್ನ ತಂದೆ ಶಾಸಕ ದಿ.ಎಂ.ಸಿ. ಮನಗೂಳಿ ಅವರು ಮಂಜೂರು ಮಾಡಿಸಿ ನೆನೆಗುದಿಗೆ ಬಿದ್ದ ಕಾರ್ಯಗಳನ್ನು ತಮ್ಮ 18 ತಿಂಗಳ ಅಧಿಕಾರದ ಅವಧಿಯಲ್ಲಿ ಮಾಡಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದರು.
ಆಲಮೇಲ ತಾಲೂಕಾ ಕೇಂದ್ರವಾಗಿದ್ದು ಅಲ್ಲಿ ಎಲ್ಲ ಸರಕಾರಿ ಕಚೇರಿಗಳು ಪ್ರಾರಂಭಿಸಬೇಕು, ಆಲಮೇಲದಲ್ಲಿ ಮಂಜೂರು ಮಾಡಿಸಿದ 92 ಕೋಟ ರೂ. ಅನುದಾನದವನ್ನು ತರುವ ಮೂಲಕ ಕಾಲೇಜು ಪ್ರಾರಂಭಿಸಬೇಕು. ಕಡಣಿ ಬ್ರೀಜ್ ಕಾಮಗಾರಿ ಶಿಘ್ರದಲ್ಲಿ ಪ್ರಾರಂಭಿಸಬೇಕು. ಪಟ್ಟಣದ ಮಿನಿವಿಧಾನಸವಧ ಕಟ್ಟಡ ಪ್ರಾರಂಭಿಸಬೇಕು. ಪುರಸಭೆಗೆ ಯೋಜನಾ ಪ್ರಾಧಿಕಾರ ಮಂಜೂರು ಮಾಡಿಸಬೇಕು. ಹೆಚ್ಚು ವಾಹನ ತೆರಿಗೆ ತುಂಬುವ ಮತ್ತು ನೋಂದಣಿ ಮಾಡುವ ಸಿಂದಗಿ ತಾಲೂಕಿಗೆ ಆರ್ಟಿಓ ಕಚೇರಿ ಪ್ರಾರಂಭಿಸಬೇಕು. ಈ ಎಲ್ಲ ಕಾರ್ಯಗಳಿಗೆ ವಿರೋಧ ಪಕ್ಷದಲ್ಲಿರುವ ನಾವು ಬೆಂಬಲಿಸುತ್ತೇವೆ ಎಂದು ಹೇಳಿದರು.
ಚುನಾವಣಾ ಪ್ರಚಾರದ ಸಂದರ್ಭದಲ್ಲಿ ತಳವಾರ ಸಮುದಾಯಕ್ಕೆ ನ. 8 ರಂದು ಎಸ್ಟಿ ಪ್ರಮಾಣ ಪತ್ರ ನೀಡುತ್ತಿರಿ ಎಂದು ಬಿಜೆಪಿ ನಾಯಕರು ಮಾತು ನೀಡಿದ್ದಿರಿ. ಅದರಂತೆ ತಳವಾರ ಸಮುದಾಯಕ್ಕೆ ಎಸ್.ಟಿ. ಪ್ರಮಾಣ ಪತ್ರ ನೀಡಬೇಕು. ಇಲ್ಲದಿದ್ದಲ್ಲಿ ಹೋರಾಟ ಕೈಕೊಳ್ಳ ಬೇಕಾಗುತ್ತದೆ ಎಂದು ಸರಕಾರಕ್ಕೆ ಎಚ್ಚರಿಸಿದರು.
ರಾಜಶೇಖರ ಕೂಚಬಳ, ವಾಯ್.ಸಿ. ಮಯೂರ, ಸಂತೋಷ ಹರನಾಳ ಸೇರಿದಂತೆ ಪಕ್ಷದ ಕಾರ್ಯಕರ್ತರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.