ವಿವಿಧ ರೀತಿಯ ಹರಕೆ ತಿರಿಸಿದ ಕಾಂಗ್ರೆಸ್ ಕಾರ್ಯಕರ್ತರು
ಇಂಡಿ 20: ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶಾಸಕ ಯಶವಂತರಾಯಗೌಡ ಪಾಟೀಲ ಅತ್ಯಧಿಕ ಮತಗಳ ಆಂತರದಿಂದ ಗೆಲುವು ಸಾಧಿಸಿ ಶಾಸಕರಾಗಿ ಆಯ್ಕೆಯಾದ ನಂತರ ಅವರ ಅಭಿಮಾನಿಗಳು, ಮುಖಂಡರು ಮತ್ತು ಕಾರ್ಯಕರ್ತರು ತಾವು ಹೊತ್ತಿದ್ದ ವಿವಿಧ ರೀತಿಯ ಹರಕೆಗಳನ್ನು ತೀರಿಸಲು ಪ್ರಾರಂಭಿಸಿದ್ದಾರೆ.
ಕ್ಷೇತ್ರದಲ್ಲಿ ತಮ್ಮ ರಾಜಕೀಯ ನಾಯಕರ ಗೆಲುವಿಗಾಗಿ ಅಭಿಮಾನಿಗಳು ದೇವಾನು ದೇವತೆಗಳಿಗೆ ವಿವಿಧ ರೀತಿಯ ಹರಕೆ ಮಾಡಿ???ಂಡಿದ್ದು, ಚುನಾವಣೆಗೂ ಮೊದಲು ಶಾಸಕರ ಬೆಂಬಲಿಗರು ಅರಕೇರಿಯ ಮುಮ್ಮೆಟ್ಟಗುಡ್ಡದ ಅಮೋಘಸಿದ್ಧ ದೇವಸ್ಥಾನದವರೆಗೆ ಪಾದಯಾತ್ರೆ ಮಾಡುವದಾಗಿ ಹರಕೆ ಹೊತ್ತಿದ್ದರು.
ಇಂಡಿಯ ಶಾಸಕರಾಗಿ ಯಶವಂತರಾಯಗೌಡ ಪಾಟೀಲ್ ಅವರು ಆಯ್ಕೆಯಾದರೆ ತಾಲ್ಲೂಕಿನ ಬರಗುಡಿ ಗ್ರಾಮದಿಂದ ತಿಕೋಟಾ ತಾಲ್ಲೂಕಿನ ಅರಕೇರಿಯ ಮುಮ್ಮೆಟ್ಟಗುಡ್ಡದ ಅಮೋಘಸಿದ್ಧ ದೇವಸ್ಥಾನದವರೆಗೆ ಪಾದಯಾತ್ರೆ ಮಾಡುವದಾಗಿ ಹರಕೆ ಹೊತ್ತಿದ್ದ ಬರಗುಡಿ ಗ್ರಾಮದ ಶಾಸಕರ ಅಭಿಮಾನಿಗಳಾದ ಮಲಕಾರಿಗೌಡ ಬಿರಾದಾರ. ಅಣ್ಣಾರಾಯಗೌಡ ಪಾಟೀಲ್. ಪ್ರವೀಣಗೌಡ ಪಾಟೀಲ್. ಕೇಶವಗೌಡ ಪಾಟೀಲ್, ಸೋಮಲಿಂಗ ಬಿರಾದಾರ ಅವರು ಬರಗುಡಿ ಗ್ರಾಮದಿಂದ ಅರಕೇರಿ ಮುಮ್ಮೆಟ್ಟಗುಡ್ಡದ ಶ್ರೀ ಅಮೋಘಸಿದ್ಧ ದೇವಸ್ಥಾನದವರೆಗೆ 74 ಕಿ.ಮೀ.ಪಾದಯಾತ್ರೆ ನಡೆಸಿ ಹರಕೆ ತೀರಿಸಿದರು.
ಈ ಸಂದರ್ಭದಲ್ಲಿ ಶಾಸಕರ ಸಹೋದರ ಬಸವಂತರಾಯಗೌಡ ಪಾಟೀಲ, ಬಳ್ಳೊಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲ್ಲನಗೌಡ ಬಿರಾದಾರ, ಸೋಮಲಿಂಗಗೌಡ ಪಾಟೀಲ, ಪಡನೂರ ಪ್ರಾ.ಕೃ.ಪ.ಸ.ಸಂಘದ ನಿರ್ದೇಶಕ ಸಂಜೀವ ಶೆಂಡಗಿ, ಗೋಪಾಲ ಅಂಕಲಗೀಕರ, ಸಿದ್ದು ದೇಸಾಯಿ, ಸದಾಗೌಡ ಬಿರಾದಾರ ಸೇರಿದಂತೆ ಅಪಾರ ಅಭಿಮಾನಿಗಳು ಉಪಸ್ಥಿತರಿದ್ದರು.
ಇಂಡಿ: ಬರಗುಡಿ ಗ್ರಾಮದ ಶಾಸಕರ ಅಭಿಮಾನಿಗಳಾದ ಮಲಕಾರಿಗೌಡ ಬಿರಾದಾರ, ಅಣ್ಣಾರಾಯಗೌಡ ಪಾಟೀಲ, ಪ್ರವೀಣಗೌಡ ಪಾಟೀಲ್, ಕೇಶವಗೌಡ ಪಾಟೀಲ್, ಸೋಮಲಿಂಗ ಬಿರಾದಾರ ಬರಗುಡಿ ಗ್ರಾಮದಿಂದ ಅರಕೇರಿ ಮುಮ್ಮೆಟ್ಟಗುಡ್ಡದ ಅಮೋಘಸಿದ್ಧ ದೇವಸ್ಥಾನದವರೆಗೆ 74 ಕಿ.ಮೀ. ಪಾದಯಾತ್ರೆ ನಡೆಸಿ ಹರಕೆ ತೀರಿಸಿದರು.