ಕಾಗವಾಡ

ಕೈ ವಶವಾದ ಐನಾಪುರ ಪಟ್ಟಣ ಪಂಚಾಯತಿ

ಕೈ ವಶವಾದ ಐನಾಪುರ ಪಟ್ಟಣ ಪಂಚಾಯತಿ

19 ಸ್ಥಾನಗಳಲ್ಲಿ ಕಾಂಗ್ರೆಸ್‌ನ 13 ಸದಸ್ಯರುಗಳು ಜಯಭೇರಿ: ಚುನಾವಣಾಧಿಕಾರಿಗಳಿಂದ ಪ್ರಮಾಣ ಪತ್ರ ವಿತರಣೆ 

ಕಾಗವಾಡ 31: ತಾಲೂಕಿನ ಶಕ್ತಿ ಕೇಂದ್ರವಾಗಿರುವ ಐನಾಪುರ ಪಟ್ಟಣ ಪಂಚಾಯತಿಯ ಚುನಾವಣೆಯಲ್ಲಿ 19 ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷದ  13 ಜನ ಸದಸ್ಯರುಗಳು ಜಯಭೇರಿ ಸಾಧಿಸಿದ್ದು, ಅವರಿಗೆ ಪ್ರಮಾಣ ಪತ್ರ ವಿತರಿಸಿದರು. 

ಶುಕ್ರವಾರ ದಿ.31 ರಂದು ಐನಾಪುರ ಪಟ್ಟಣ ಪಂಚಾಯತ್ ಕಾರ್ಯಾಲಯದಲ್ಲಿ ಚುನಾವಣಾಧಿಕಾರಿಗಳಾದ ಕೆ.ರವಿ, ಪ್ರವೀಣ ಹುಣಸಿಕಟ್ಟಿಯವರು ಪ್ರಮಾಣ ಪತ್ರ ವಿತರಿಸಿದರು. 

ನೂತನವಾಗಿ ಆಯ್ಕೆಗೊಂಡ ಸದಸ್ಯರು ಪ್ರಮಾಣ ಪತ್ರ ಸ್ವೀಕರಿಸಿದ ಬಳಿಕ ನೂತನ ಸದಸ್ಯ ಹಾಗೂ ನ್ಯಾಯವಾದಿ ಸಂಜಯ ಕುಚನೂರೆ ಮಾತನಾಡಿ ಐನಾಪುರ ಪಟ್ಟಣದ ಸರ್ವತೋಮುಖ ಅಭಿವೃದ್ಧಿಗಾಗಿ ಮತದಾರರು ನಮ್ಮನ್ನು ಆಯ್ಕೆ ಮಾಡಿದ್ದು, ಅವರ ವಿಶವಾಸಕ್ಕೆ ತ್ಯೂತಿ ತರದೆ ಪಕ್ಷ ಬೇಧ ಮರೆದು ಎಲ್ಲ ಸದಸ್ಯರು ಪ್ರವೀಣ ಗಾಣಿಗೇಋ, ಹಾಗೂ ಅರುಣ ಗಾಣಿಗೇರ ಅವರ ನೇತೃತ್ವದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು. 

ಚುನಾವಣಾ ಅಧಿಕಾರಿ ಪ್ರವೀಣ ಹುಣಸಿಕಟ್ಟಿ ಮಾತನಾಡಿ ಚುನಾವಣೆ ಪ್ರಕ್ರಿಯೆ ಪ್ರಾರಂಭಗೊಂಡು ಹಿಡಿದು ಪ್ರಮಾಣ ಪತ್ರ ವಿತರಣೆಯವರೆಗೂ ಎಲ್ಲ  ಅಭ್ಯರ್ಥಿಗಳು, ಮತದಾರ ಬಾಂಧವರು ಸಹಕಾರ ನೀಡಿರುವದರಿಂದ ಚುನಾವಣೆ ಯಶಸ್ವಿಗೊಂಡಿದೆ. ಎಲ್ಲರಿಗೆ ನಾವು ಧನ್ಯವಾದ ಸಲ್ಲಿಸುತ್ತೇವೆ ಎಂದರು. 

ಕಾಂಗ್ರೆಸ್ ಪಕ್ಷದ ಯುವ ನಾಯಕ ಪ್ರವೀಣ ಗಾಣಿಗೇರ ಮತ್ತು ಅರುಣ ಗಾಣೀಗೇರ ಇಬ್ಬರು ಸಹೋದರರು ಸದಸ್ಯರುಗಳಿಗೆ  ಸಿಹಿ ಹಂಚಿ ಸಂಭಮಿಸಿದರು. ನಂತರ ಸಹೋದರರಿಬ್ಬರುೊಬ್ಬರಿಗೊಬ್ಬರು ಸಿಹಿ ತಿಂದು ದಿವಂಗತ ಸಹೋದರ ರವೀಂದ್ರ ಗಾಣಿಗೇರ ಅವರನ್ನು ನೆನೆದು ಭಾವುಕರಾದರು. 

ನೂತನ ಕಾಂಗ್ರೆಸ್ ಸದಸ್ಯರಾದ ಪ್ರವೀಣ ಗಾಣಿಗೇರ, ಅರುಣ ಗಾಣಿಗೇರ, ಸರೋಜನಿ ಸುರೇಶ ಗಾಣಿಗೇರ, ಸಂಜಯ ಕುಚನೂರೆ, ಸಂಜಯ ಭಿರಡಿ, ಕಸ್ತೂರಿ ಮಡಿವಾಳರ, ಲಕ್ಷ್ಮವ್ವ ಅಡಿಸೇರಿ, ಕುಮಾರ ಜಯಕರ ರಾಜು ಹರರಳೆ,ಧರೆಪ್ಪ ಹರಳೆ,  ಜಯಶ್ರೀ ಹರಳೆ, ಪ್ರಕಾಶ ನಡೋಣಿ, ರತ್ನವ್ವ ಮಾದರ ಪ್ರಮಾಣ ಪತ್ರ ಪಡೆದರು. 

ಮುಖಂಡರಾದ ಕುಮಾರ ಅಪರಾಜ, ಗುರುರಾಜ ಮಡಿವಾಳರ, ಸುರೇಶ ಅಡಿಸೇರಿ, ಪ್ರಕಾಶ ಗಾಣಿಗೇರ, ಸುರೇಶ ಗಾಣಿಗೇರ, ದಾದಾ ಜಂತೆನ್ನವರ, ವಿಜಯ ಹರಳೆ, ಆದಿಣಾಥ ದಾನೊಳ್ಳಿ, ಗೀರೀಶ ಮಡಿವಾಳರ, ಅನೀಲ ಸತ್ತಿ, ಶಿದ್ದು ಅಡಿಸೇರಿ,ಹಣಮಂತ ಗುರವ, ಅರವಿಂದ ಕಾರ್ಚಿ, ಸಂದೀಪ ಮಾನಗಾಂವೆ, ಗೋಪಾಲ ಮಾನಗಾಂವೆ, ದೋಂಡಿ ಹರಳೆ, ಸಂಜಯ ಕುಸನಾಳೆ, ಬಾಹುಬಲಿ ಕುಸನಾಳೆ, ಸಿಕಂದರ ನದಾಫ, ಸೇರಿದಂತೆ ಅನೇಕ ಮುಖಂಡರು ಇದ್ದರು. 

ಸನ್ಮಾನ;- ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರಸ ಪಕ್ಷದಿಂದ ಸ್ಪರ್ದಿಸಿರುವ ಎಲ್ಲ 19 ಅಭ್ಯರ್ಥಿಗಳಿಗೆ ಐನಾಪುರದ ವಿಠ್ಠಲ ರುಕ್ಮೀಣಿ ಮಂದಿರಲ್ಲಿ ಹೊಸವರ್ಷದಂದು ಸಂಜೆಗೆ ಸನ್ಮಾನ ಸಮಾರಂಭ ಹಮ್ಮಿಕೊಂಡಿದ್ದಾರೆ. 

ಸಮಾರಂಭದ ದಿವ್ಯ ಸಾನಿದ್ಯ ಐನಾಪುರ ಗುರುದೇವಾಶ್ರಮದ ಬಸವೇಶ್ವರ ಮಹಾಸ್ವಾಮಿಜಿ, ಚಿಕ್ಕುಂಬಿ ಮಠದ ಅಭಿನವ ನಾಗಲಿಂಗ ಸ್ವಾಮಿಜಿಗಳು, ಅಥಣಿಯ ಡಾ.ಕಾಡಸಿದ್ದೇಶ್ವರ ಸ್ವಾಮಿಜಿಗಳು ದಿವ್ಯ ಸಾನಿದ್ಯವಹಿಸಲಿದ್ದಾರೆ. 

ಅತಿಥಿಗಳಾಗಿ ಕಾಗವಾಡ ಕ್ಷೇತ್ರದ ಮಾಜಿ ಶಾಸಕ ರಾಜು ಕಾಗೆ,ಪಟ್ಟಣದ ಮುಖಂಡರು ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಶೇಖರ ಗಾಣಿಗೇರ, ಮುಖಂಡರಾದ ಸುಭಾಷ ಪಾಟೀಲ, ಭರತೇಶ ಲೋಂಡೆ, ಸೇರಿದಂತೆ ಅನೇಕರು ಪಾಲ್ಗೊಳ್ಳಲಿದ್ದಾರೆ ಎಂದು ಗುರುರಾಜ ಮಡಿವಾಳರ ತಿಳಿಸಿದರು. 

ಸಿಹಿ ಹಂಚಿ ಸಂಬ್ರಮ;- ಐನಾಪುರ ಪಟ್ಟಣ ಪಂಚಾಯತಿಯಲ್ಲಿ ಆಯ್ಕೆಗೊಂಡ ಸಹೋದರ ಪ್ರವೀಣ ಗಾಣಿಗೇರ ಹಾಗೂ ಅರುಣ ಗಾಣಿಗೇರ ಅವರು ಆಯ್ಕೆಗೊಂಡಿದ್ದು ಒಬ್ಬರಿಗೊಬ್ಬರು ಬಾಯಿಗೆ ಸಿಹಿ ಹಾಕಿ ಸಂಬ್ರಮಿಸಿದರು. 


ಸುದ್ದಿ ಓದಿ