ಯರಗಟ್ಟಿ

ಸವದತ್ತಿ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಮತ ಪ್ರಮಾಣ ಜಾಸ್ತಿ: ಸತೀಶ್

ಸವದತ್ತಿ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಮತ ಪ್ರಮಾಣ ಜಾಸ್ತಿ: ಸತೀಶ್

ಲೋಕದರ್ಶನ ವರದಿ 

ಯರಗಟ್ಟಿ 18:  ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಸತೀಶ ಜಾರಕಿಹೊಳಿ ಅವರು ಸವದತ್ತಿ ಯಲ್ಲಮ್ಮ ಕ್ಷೇತ್ರದ ಯರಗಟ್ಟಿ ಪಟ್ಟಣದಲ್ಲಿ ಜನರ ಅಹವಾಲುಗಳನ್ನು ಸ್ವೀಕರಿಸಿ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು. 


ಪತ್ರಕರ್ತರೊಂದಿಗೆ ಸುದ್ದಿಗೋಷ್ಠಿ ನಡೆಸಿ ಸವದತ್ತಿ ಯಲ್ಲಮ್ಮ ಕ್ಷೇತ್ರದ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದೇನೆ. ಬರುವ ದಿನಗಳಲ್ಲಿ ಕ್ಷೇತ್ರದ ಸವಾಂರ್ಗೀಣ ಅಭಿವೃದ್ಧಿಗೆ ಪಣ ತೊಟ್ಟಿರುವುದಾಗಿ ತಿಳಿಸಿದ ಅವರು ತಳಮಟ್ಟದಿಂದ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಲು ಭೇಟಿ ಮೇಲೆ ಭೇಟಿ ನೀಡುತ್ತಿದ್ದೇನೆಂದು ಹೇಳಿದರು. 


ಕಾಂಗ್ರೆಸ್ ಮುಖಂಡರಾದ ಪಂಚನಗೌಡ ದ್ಯಾಮನಗೌಡ್ರ, ವಿಶ್ವಾಸ ವೈದ್ಯ, ಡಿ. ಡಿ. ಟೋಪೋಜಿ, ಮಾಜಿ ಜಿ. ಪಂ. ಸದಸ್ಯರಾದ ಫಕ್ಕೀರ​‍್ಪ ಹದ್ದನವರ, ಮಹಾದೇವ ಯಡ್ರಾಂವಿ, ರಫೀಕ ಡಿ ಕೆ, ಸಲಿಂ ಜಮಾದಾರ, ಬಾಳೇಶ ದಾಸನಟ್ಟಿ, ಶಂಕರ ಮೆಳಿಕೇರಿ, ಅಲ್ತಾಫ ಮುಲ್ಲಾ, ಫೀರೋಜ ಖಾದ್ರಿ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು. 


ಸುದ್ದಿ ಓದಿ