ಕಾಗವಾಡ

2023ಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ; ರಾಜು ಕಾಗೆ ವಿಶ್ವಾಸ

2023ಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ; ರಾಜು ಕಾಗೆ ವಿಶ್ವಾಸ

ಲೋಕದರ್ಶನ ವರದಿ 


ಕಾಗವಾಡ 19: ಪಂಚರಾಜ್ಯಗಳ ಚುನಾವಣೆಯ ಫಲಿತಾಂಶ ಏನೇ ಬಂದರು ಸಹ ಕರ್ನಾಟಕದಲ್ಲಿ 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಶತಸಿದ್ಧ ಎಂದು ಮಾಜಿ ಶಾಸಕ ರಾಜು ಕಾಗೆ ಹೇಳಿದರು. 

 ಅವರು ಗುರುವಾರ ದಿ. 17ರಂದು ಕಾಗವಾಡ ವಿಧಾನಸಭಾ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಡಿಜಿಟಲ್ ಅಭಿಯಾನವನ್ನುದ್ದೇಶಿಸಿ ಮಾತನಾಡುತ್ತಿದ್ದರು. ಕಾಗವಾಡ ಮತಕ್ಷೇತ್ರದಲ್ಲಿನ 231 ವಾರ್ಡುಗಳಲ್ಲಿ ಕಾಂಗ್ರೆಸ್ ಸದಸ್ಯತ್ವ ಅಭಿಯಾನ ಪ್ರಾರಂಭವಾಗಿದ್ದು ಪಕ್ಷದ ಕಾರ್ಯಕರ್ತರು ಹುರುಪಿನಿಂದ ಸದಸ್ಯತ್ವ ಅಭಿಯಾನದಲ್ಲಿ ಪಾಲ್ಗೊಂಡಿರುವುದು ಕಂಡರೆ ಖುಷಿ ಎನಿಸುತ್ತದೆ ಎಂದರೆ. 

ಬೂತ್ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸುವ ಗುರಿ ಹೊಂದಲಾಗಿದೆ ಎಂದರು. ರಾಜ್ಯದಲ್ಲಿ ಜಿಲ್ಲಾ ಪಂಚಾಯತ್ ಹಾಗೂ ತಾಲೂಕಾ ಪಂಚಾಯತ್ ಅವಧಿ ಮುಗಿದು 6 ತಿಂಗಳು ಗತಿಸಿದರು ಬಿಜೆಪಿ ಸೋಲಿನ ಭೀತಿಯಿಂದ  ಚುನಾವಣೆ ಮಾಡುತ್ತಿಲ್ಲ. ಅದಕ್ಕಾಗಿ ಯಾರು ಎದೆಗುಂದದೆ ಎಲ್ಲರು ರಾಜ್ಯ ಹಾಗೂ ಕೇಂದ್ರಸರಕಾರದ ವೈಫಲ್ಯಗಳನ್ನು ಜನರ ಮುಂದೆ ಇಟ್ಟು ಸದಶ್ಯತ್ವವನ್ನು ಮಾಡಬೇಕೆಂದರು. ಕಾಗವಾಡ ಮತಕ್ಷೇತ್ರದಲ್ಲಿ 1 ಲಕ್ಷ ಸದಸ್ಯರನ್ನು ಮಾಡುವ ಗುರಿ ಹೊಂದಿದ್ದೇವೆ ಎಂದು ರಾಜು ಕಾಗೆ ಹೇಳಿದರು. 

 ಕಳೆದ ವಿಧಾನ ಸಭೆಯ ಉಪಚುನಾವಣೆಯಲ್ಲಿ ರಾಜ್ಯ ಹಾಗೂ ದೇಶದಲ್ಲಿ ಬಿಜೆಪಿ ಅಧಿಕಾರದಲ್ಲಿರುವದರಿಂದ ಅಧಿಕಾರ ದುರುಪಯೋಗಪಡಿಸಿಕೊಂಡು ಹಣ ಹಾಗೂ ಹೆಂಡದ ಸುರಿಮಳೆ ಸುರಿಸಿ ಗೆಲುವು ಸಾಧಿಸಿದರೇ ಹೊರತು ನೈತಿಕ ಗೆಲುವು ಅಲ್ಲ ಎಂದರು. ಇಡೀ ರಾಜ್ಯ ದೇಶದ ನಾಯಕರು ಕಾಗವಾಡ ಕ್ಷೇತ್ರದಲ್ಲಿ ಪ್ರಚಾರಕ್ಕೆ ಬಂದರೂ ಸಹ ಕಾರ್ಯಕರ್ತರು ನನಗೆ 60 ಸಾವಿರ ಮತಗಳನ್ನು ಹಾಕಿದ್ದಾರೆ. ಅವರ ಕಷ್ಟ ಸುಖದಲ್ಲಿ ನಾನು ಯಾವತ್ತು ಭಾಗಿಯಾಗಿರುತ್ತೇನೆ ಎಂದು ರಾಜು ಕಾಗೆ ಹೇಳಿದರು. 

 ಕಾಗವಾಡ ಬ್ಲಾಕ ಅಧ್ಯಕ್ಷ ವಿಜಯಕುಮಾರ ಅಕಿವಾಟೆ, ಅನಂತಪುರ ಬ್ಲಾಕ ಅಧ್ಯಕ್ಷ ಓಂಪ್ರಕಾಶ ಪಾಟೀಲ, ಮುಖಂಡರಾದ ಗಜಾನನ ಯರಂಡೋಲಿ, ಅರುಣ ಗಾಣಿಗೇರ, ಸುರೇಶ ಗಾಣಿಗೇರ, ಜ್ಯೋತಿಕುಮಾರ ಪಾಟೀಲ, ರಾಜು ಕುಸನಾಳೆ, ರಾಜು ದುಗ್ಗೆ, ರಾಜು ಮದನೆ, ಸಿದ್ದು ಹವಳೆ, ಸತೀಶ ಯರಂಡೋಲಿ, ಉಮೇಶ ಪಾಟೀಲ, ಗುರುರಾಜ ಮಡಿವಾಳರ, ಸಂಜಯ ಕುಸನಾಳೆ, ಉಗಾರ ಪುರಸಭೆ ಸದಸ್ಯರಾದ ಗಂಗಾಧರ ಕಲಾಲ, ಮಹಾದೇವ ವಡಗಾಂವೆ, ಬಸವರಾಜ ಪಾಟೀಲ, ಸತೀಶ ಜಗತಾಪ, ಭರಮು ನಾಯಿಕ, ನೀತೀನ ನಾಯಿಕ ಸೇರಿದಂತೆ ಅನೇಕರು ಇದ್ದರು, 


ಸುದ್ದಿ ಓದಿ