ಇಂಡಿ

ಶಾಸಕರನ್ನು ಮಾನಸಿಕವಾಗಿ ಕುಗ್ಗಿಸಲು ಬಿಜೆಪಿ ಇಲ್ಲಸಲ್ಲದ ಆರೋಪ

ಶಾಸಕರನ್ನು ಮಾನಸಿಕವಾಗಿ ಕುಗ್ಗಿಸಲು ಬಿಜೆಪಿ ಇಲ್ಲಸಲ್ಲದ ಆರೋಪ

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರು ಜಂಟಿ ಹೇಳಿಕೆ 

ಇಂಡಿ: ಪುರಸಭೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತವಿರದ ಕಾರಣ ಶಾಸಕರು ಚುನಾವಣೆ ಎದುರಿಸುವುದು ಬೇಡ ವಿರೋಧ ಪಕ್ಷದಲ್ಲಿರೋಣ ಎಂದಿದ್ದರು. ಬಿಜೆಪಿಯ ಮೂವರು ಸದಸ್ಯರು ಬಂದು ಕೈಕಾಲು ಹಿಡಿದು ಚುನಾವಣೆಯಲ್ಲಿ ನಿಮ್ಮನ್ನು ಬೆಂಬಲಿಸುತ್ತೇವೆ ಎಂದು ಕೇಳಿಕೊಂಡ ಪ್ರಯುಕ್ತ ಚುನಾವಣೆ ಕಣಕ್ಕಿಳಿಸಲಾಗಿದೆ ಎಂದು ಕಾಂಗ್ರೆಸ್ ಮುಖಂಡರು ಜಂಟಿ ಹೇಳಿಕೆ ನೀಡಿದರು. 

ಅವರು ಶನಿವಾರ ಪಟ್ಟಣದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. 

ಶಾಸಕ ಯಶವಂತರಾಯಗೌಡ ಪಾಟೀಲರಿಗೆ ಆಸಕ್ತಿ ಇರಲಿಲ್ಲ.  ಕಾರಣ ಕಾಂಗ್ರೆಸ್‌ಗೆ ಪುರಸಭೆಯಲ್ಲಿ ಕೇವಲ ಎಂಟು ಸ್ಥಾನ ಹೊಂದಿದ್ದು ಬಹುಮತವಿರಲಿಲ್ಲ. ಮತ್ತು ಯಾರೂ 2 ಎ ಮಹಿಳೆ ಮಿಸಲಾತಿಗೆ ಆಯ್ಕೆಯಾಗಿರಲಿಲ್ಲ ಎಂದರು. 

ಬಿಜೆಪಿಯ ಸದಸ್ಯರಾದ ದೇವೆಂದ್ರ ಕುಂಬಾರ,ಪಿಂಟು ರಾಠೋಡ, ವಿಜಯಕುಮಾರ ಮೂರಮನ ಶಾಸಕರ ಮನೆಗೆ ಬಂದು ಜೆಡಿಎಸ್  ಶೈಲಜಾ ಪೂಜಾರಿ ಮತ್ತು ಬಿಜೆಪಿಯ ಭಾಗಿರಥಿ ಕುಂಬಾರ ಇವರಿಗೆ ಮೊದಲ ಅವಧಿಗೆ 15 ತಿಂಗಳು ನಂತರ ಅವಧಿಗೆ 15 ತಿಂತಳಂತೆ ಷರಿತ್ತಿಗೆ ಒಪ್ಪಿಸಿದರು. ಶೈಲಜಾ ಅಧ್ಯಕ್ಷೆ ಪಕ್ಷೇತರ ಇಸ್ಮಾಯಿಲ್ ಅರಬ ಇವರನ್ನು ಉಪಾಧ್ಯಕ್ಷರನ್ನಾಗಿ ಅವಿರೋಧ ಆಯ್ಕೆಯಾದರು. ನಂತರ ಅವಧಿಗೆ ಶೈಲಜಾ ಪೂಜಾರಿ ಕೊಟ್ಟ ಮಾತಿನಂತೆ ನಡೆದು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ನಂತರ ಬಿಜೆಪಿ ಬಾಗಿರಥಿ ಕುಂಬಾರ ಅವರಿಗೆ ಅಧ್ಯಕ್ಷ ಸ್ಥಾನ ನೀಡಿ ಅವರಿಗೆ ಗೆಲ್ಲಿಸುವ ಪ್ರಕ್ರಿಯೆ ಪ್ರಾರಂಭವಾದಾಗ ಯಾರು ಮಾತುಕತೆ ಮಾಡಿ ಹೋಗಿದ್ದರೋ ಅವರೇ ಕೈ ಕೊಡತೊಡಗಿದರು. ಮತ್ತು ಬಿಜೆಪಿಯ ಭೀಮನಗೌಡ ಪಾಟೀಲರು ಕೂಡ ಬೆಂಬಲ ಸೂಚಿಸುವದಾಗಿ ಅತೀ ನಿಷ್ಠೆಯಿಂದ ಹೇಳಿದ್ದರಿಂದ ಶಾಸಕರು ಅನಿವಾರ್ಯವಾಗಿ ಮುಂದಾದರು. 

ಮಾತುಕೊಟ್ಟರಂತೆ ಬಿಜೆಪಿ ಸದಸ್ಯರು ನಡೆದುಕೊಂಡಿಲ್ಲ. ಆದರೆ ಮಾತು ಉಳಿಸಿಕೊಳ್ಳಲು ಶಾಸಕರು ಶ್ರಮಿಸಿದ್ದಾರೆ ಎಂದರು. 

ಶಾಸಕರನ್ನು ಮಾನಸಿಕವಾಗಿ ಕುಗ್ಗಿಸಲು ಬಿಜೆಪಿಯವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಆದರೆ ಶಾಸಕರ ಹಿಂದೆ ಕ್ಷೇತ್ರದ ಜನರಿದ್ದಾರೆ. ಬಿಜೆಪಿಯವರ ಗೂಂಡಾವರ್ತನೆ ಜನರಿಗೆ ತಿಳಿಯುತ್ತಲಿದೆ. ಮುಂಬರುವ ದಿನಗಳಲ್ಲಿ ಕ್ಷೇತ್ರದಲ್ಲಿ ಬಿಜೆಪಿ ನೆಲಸಮವಾಗಲಿದೆ. ಸೋಲು ಗೆಲುವು ಎಲ್ಲರಿಗೂ ಇದ್ದದ್ದೆ, ಆದರೆ ಅದು ಪ್ರೀತಿ, ವಿಶ್ವಾಸ, ಪ್ರಾಮಾಣಿಕತೆಯಿಂದ ಕೂಡಿರಬೇಕು. 

ಪುರಸಭೆ ಮಾಜಿ ಅಧ್ಯಕ್ಷ ಶ್ರೀಕಾಂತ ಕುಡಿಗನೂರ, ಯಮನಾಜಿ ಸಾಳುಂಕೆ, ಭೀಮಣ್ಣ ಕವಲಗಿ, ಪ್ರಶಾಂತ ಕಾಳೆ, ಸದಾಶಿವ ಪ್ಯಾಟಿ, ನಿರ್ಮಲಾ ತಳಕೇರಿ, ಜಾವೀದ ಮೋಮಿನ,ಅಯೂಬ ನಾಟಿಕಾರ, ಸತೀಶ ಕುಂಬಾರ, ತಾ.ಪಂ. ಮಾಜಿ ಅಧ್ಯಕ್ಷ ಅಣ್ಣಪ್ಪ ಬಿದರಕೋಟೆ, ಮುತ್ತಪ್ಪ ಪೋತೆ, ಅಪ್ಪು ಕಲ್ಲೂರ, ಮಹಾದೇವ ಗಡ್ಡದ, ಶ್ರೀಶೈಲ ಪೂಜಾರಿ ಮತ್ತಿತರಿದ್ದರು. 


ಸುದ್ದಿ ಓದಿ