ಶಿಗ್ಗಾವಿಯಲ್ಲಿ ಬಿಜೆಪಿ ಸೋಲಿಸಿ ಕಾಂಗ್ರೆಸ್ ಗೆಲ್ಲಿಸುತ್ತೇವೆೆ
ಲೋಕದರ್ಶನ ವರದಿ
ಶಿಗ್ಗಾವಿ 28: ಈಗಾಗಲೇ 4 ಬಾರಿ ನೀನು ಸೋತಿರುವೆ ಹೀಗಾಗಿ ಪಕ್ಷಯಾರಿಗೆ ಟಿಕೇಟ ನೀಡುತ್ತದೆಯೋ ಅವರ ಪರ ಕೆಲಸ ಮಾಡು ಎಂದು ಹೈಕಮಾಂಡ ಸೂಚಿಸಿದೆ ಆ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಬಿಜೆಪಿ ಸೋಲಿಸುವದೇ ನಮ್ಮ ಮುಖ್ಯ ಅಜೆಂಡಾ ಆಗಿದ್ದು, ವಿನಯ ಕುಲಕರ್ಣಿ ಅಥವಾ ಸಲೀಮ ಅಹ್ಮದ ಅವರಿಗೆ ಟಿಕೆಟ ನೀಡಿದರೆ ಶಿರಸಾ ವಹಿಸಿ ಶಿಗ್ಗಾವಿಯಲ್ಲಿ ಬಿಜೆಪಿ ಸೋಲಿಸಿ ಕಾಂಗ್ರೇಸ್ ಗೆಲ್ಲಿಸುತ್ತೇವೆೆ ಎಂದು ಸೈಯದ್ ಅಜೀಮ್ಂಪೀರಖಾದ್ರಿ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ದಿಢೀರ ಭೇಟಿ ನೀಡಿದ ವಿನಯ ಕುಲಕರ್ಣಿ ಅವರಿಗೆ ಸನ್ಮಾನಿಸಿ ನಂತರ ಮಾತನಾಡಿದ ಅವರು ಶಿಗ್ಗಾವಿ ಕ್ಷೇತ್ರ ಇದೀಗ ಹೈ-ವೋಲ್ಟೇಜ ಕ್ಷೇತ್ರವಾಗಿದ್ದು ನಮ್ಮ ಕಾರ್ಯಕರ್ತರು ಕಾಂಗ್ರಸ್ ಗೆಲ್ಲಿಸಲು ಉತ್ಸುಕವಾಗಿದ್ದಾರೆ, ಯಾರಿಗೆಟಿಕೇಟ ನೀಡಿದರೆ ಹೈವೋಲ್ಟೇಜ ಸ್ಪರ್ಧೆ ಏರ್ಪಡುತ್ತದೆ ಎಂಬುವುದು ಹೈಕಮಾಂಡಗೆಗೊತ್ತಿದೆ, ಕ್ಷೇತ್ರದ ಜನರಿಗೂ ಬದಲಾವಣೆ ಬೇಕಿದೆ, ಈಗಾಗಲೇ ಸಮೀಕ್ಷೆಯು ಆಗಿದೆ ನಮ್ಮ ಅಜೆಂಡಾ ಒಂದೆ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಒಂದೆ ಆಗಿದೆ ಎಂದರು.
ಡಾ.ಎಫ್.ಜಿ ಪಾಟೀಲ, ನ್ಯಾಯವಾದಿ ಎಸ್ವಿ ಪಾಟೀಲ, ಸಲೀಮ ಪರೋಖಿ, ಗೌಸಖಾನ ಮುನಸಿ, ಮುಖಂಡರುಗಳಾದ ಅಣ್ಣಪ್ಪ ಲಮಾಣಿ, ಬಿ.ಸಿ ಪಾಟೀಲ, ಮುನ್ನಾ ಲಕ್ಷ್ಮೇಶ್ವರ, ಶಂಭು ನೇರ್ತಿ , ಮಂಜುನಾಥ ತಿಮ್ಮಾಪೂರ, ಸುಧೀರ ಲಮಾಣಿ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಇದ್ದರು .