ಹೂವಿನ ಹಡಗಲಿ

ಕಾಂಗ್ರೆಸ್ ಅಭ್ಯರ್ಥಿ ಪರಮೇಶ್ವರನಾಯ್ಕ ಶಕ್ತಿ ಪ್ರದರ್ಶನ

ಕಾಂಗ್ರೆಸ್ ಅಭ್ಯರ್ಥಿ ಪರಮೇಶ್ವರನಾಯ್ಕ ಶಕ್ತಿ ಪ್ರದರ್ಶನ

ಲೋಕದರ್ಶನ ವರದಿ 

ಹೂವಿನಹಡಗಲಿ.18-ಹೂವಿನಹಡಗಲಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪಿ.ಟಿ.ಪರಮೇಶ್ವರನಾಯ್ಕ ಅವರು ಮಂಗಳವಾರ ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ಸಾವಿರಾರು ಕಾರ್ಯಕರ್ತರು,ಬೆಂಬಲಿಗರೊಂದಿಗೆ ಪಟ್ಟಣದಲ್ಲಿ ಶಕ್ತಿ ಪ್ರದರ್ಶಿಸಿದರು. 

ನಾಮ ಪತ್ರಸಲ್ಲಿಸುವ ಮೊದಲು ಪಟ್ಟಣದ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿದರು. ಬಳಿಕ ದೇಗುಲದಿಂದ ತೆರೆದ ವಾಹನದಲ್ಲಿ ಸಾವಿರಾರು ಕಾರ್ಯಕರ್ತರೊಂದಿಗೆ ಪ್ರಮುಖ ಶಾಸ್ತ್ರಿ ವೃತ್ತ, ಅಂಬೇಡ್ಕರ ವೃತ್ತದ ಮಾರ್ಗದ ಮೂಲಕ ಮೆರವಣಿಗೆ ತಾಲೂಕು ಕಚೇರಿ ಕಡೆಗೆ ತೆರಳಿ ನಾಮ ಸಲ್ಲಿಸಿದರು. ಕೆಲಕಾಲ ಹೊಳಗುಂದಿ ರಸ್ತೆಗಳಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. 

ಕಾಂಗ್ರೆಸ್ ಅಭ್ಯರ್ಥಿ ಪಿ.ಟಿ.ಪರಮೇಶ್ವರನಾಯ್ಕ ಮಾತನಾಡಿ ಹಡಗಲಿ ಕ್ಷೇತ್ರದಲ್ಲಿ ನೀರಾವರಿ,ಆರೋಗ್ಯ,ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದ ಅವರು ನಮ್ಮ ಅಧಿಕಾರ ಅವಧಿಯಲ್ಲಿ ಕಳೆದ 10ವರ್ಷದಿಂದ ಕೆಲವರನ್ನು ಮಾತ್ರ ಬೆಳಿಸಿದ್ದು ನಾನು ತಪ್ಪು ಮಾಡಿದ್ದೇನೆ ಇನ್ನು ಮುಂದೆ ತಪ್ಪು ಮಾಡಲ್ಲ.ಬೂತ ಮಟ್ಟದ ಕಾರ್ಯಕರ್ತರು,ಬೆಂಬಲಿಗರು ನನಗೆ ಪ್ರೇರಣೆ,ಶಕ್ತಿ ಎಂದರು. 

ಕಾಂಗ್ರೆಸ್ ವಿಜಯನಗರ ಅಧ್ಯಕ್ಷ ಶಿರಾಜ್ ಶೇಖ್,ಗ್ರಾಮೀಣ ಜಿಲ್ಲಾಧ್ಯಕ್ಷ ಬಿ.ವಿ.ಶಿವಯೋಗಿ, ಬ್ಲಾಕ್ ಅಧ್ಯಕ್ಷ ಅಟವಾಳಗಿ ಕೊಟ್ರೇಶ,ಇಟಿಗಿ ಬ್ಲಾಕ್ ಅಧ್ಯಕ್ಷ ಬಿ.ಹನುಮಂತಪ್ಪ, ಪುರಸಭೆ ಅಧ್ಯಕ್ಷ ಜ್ಯೋತಿ ಮಲ್ಲಣ್ಣ,ಶಾಸಕರ ಪುತ್ರ ಭರತ್, ಪ್ರಚಾರ ಸಮಿತಿ ಅಧ್ಯಕ್ಷ ಸೋಗಿ ಹಾಲೇಶ,ಮುಖಂಡರಾದ ಅರವಳ್ಳಿ ವೀರಣ್ಣ,ಬಸವನಗೌಡ ಪಾಟೀಲ,ಕೆ.ಎಸ್‌.ಶಾಂತನಗೌಡ, ವಸಂತ,ಚಂದ್ರನಾಯ್ಕ,ಶಿವಕುಮಾರಗೌಡ,ಶಿವರಾಜ,ಬಿ.ಎಲ್‌.ಶ್ರೀಧರ ಸೇರಿದಂತೆ ಸಾವಿರಾರು ಜನ ಕಾರ್ಯಕರ್ತರು ಭಾಗವಹಿಸಿದ್ದರು. 


ಸುದ್ದಿ ಓದಿ