ಕಾಗವಾಡ

ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಗೆಲುವು: ವಿಜಯೋತ್ಸವ

ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಗೆಲುವು: ವಿಜಯೋತ್ಸವ

ಕಾಗವಾಡ 14: ರಾಜ್ಯದಲ್ಲಿಯೇ ಜಿದ್ದಾಜಿದ್ದಿಯ ಕಣವೆಂದು ಗುರುತಿಸಲ್ಪಟ್ಟಿದ್ದ ಬೆಳಗಾವಿ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿಯವರು ಹಲವಾರು ಘಟಾನುಘಟಿಗಳ ನಾಯಕರ ವಿರೋಧದ ಮಧ್ಯೆಯೂ ಪ್ರಥಮ ಪ್ರಾಸಶ್ತ್ಯದ ಮತಗಳನ್ನು ಪಡೆದು ಗೆದ್ದು ಬೀಗಿದರು. 

ಮಂಗಳವಾರರಂದು ಉಗಾರಖುರ್ದ ಪಟ್ಟಣದಲ್ಲಿ ಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಮಾಜಿ ಶಾಸಕ ರಾಜು ಕಾಗೆಯವರ ನಿವಾಸದ ಮುಂದೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಸೇರಿ ವಿಜಯೋತ್ಸವ ಆಚರಿಸಿದರು. 

 ಮಾಜಿ ಶಾಸಕ ರಾಜು ಕಾಗೆ ಮಾತನಾಡಿ ಇಡೀ ರಾಜ್ಯದ ಗಮನ ಸೆಳೆದಿರುವ ಬೆಳಗಾವಿ ವಿಧಾನ ಪರಿಷತ್ ಚುನಾವಣೆಯಲ್ಲಿ  ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರ ಸಹೋದರ ಚನ್ನರಾಜ ಹಟ್ಟಿಹೊಳಿಯವರಿಗೆ ಮತದಾರ ಪ್ರಭುಗಳು ಆಶೀರ್ವದಿಸುವ ಮೂಲಕ ಗೆಲ್ಲಿಸಿಕೊಟ್ಟಿದ್ದಾರೆ. ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ನಮ್ಮ ಮಾತಿಗೆ ಮನ್ನಣೆ ನೀಡಿ ಕಾಗವಾಡ ಹಾಗೂ ಅಥಣಿ ತಾಲೂಕಿನ ಗ್ರಾಮ ಪಂಚಾಯತ್ ಸದಸ್ಯರು ಕಾಂಗ್ರೆಸ ಪಕ್ಷದ ಅಭ್ಯರ್ಥಿಗೆ ಒಂದೇ ಮತವನ್ನು ನೀಡಿ ಆಯ್ಕೆಗೊಳಿಸಿದ್ದಕ್ಕೆ ಅಭಿನಂದನೆಗಳು ಎಂದರು. 

ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ. ಜಿಲ್ಲೆಯಲ್ಲಿ 13 ಜನ ಬಿಜೆಪಿ ಶಾಸಕರು ಮೂವರು ಲೋಕಸಭಾ ಸದಸ್ಯರಿದ್ದರೂ ಕೂಡ ಬಿಜೆಪಿ ಅಭ್ಯರ್ಥಿ ಸೋಲನ್ನು ಅನುಭವಿಸಬೇಕಾಯಿತು. ಅವರ ಸೋಲಿಗೆ ಗ್ರಾಮ ಪಂಚಾಯತ್ ಸದಸ್ಯರಲ್ಲ, ಮಹಾಂತೇಶ ಕವಟಗಿಮಠ ಅವರನ್ನು ಸೋಲಿಸಿದ್ದು ಬಿಜೆಪಿಯ ಮುಖಂಡರೇ ಎಂದ ಅವರು ಆ ಪಕ್ಷದಲ್ಲಿ ಯಾವುದು ಸರಿಯಿಲ್ಲ ಎಂದರು. 

ದಿಕ್ಸೂಚಿ 

ವಿಧಾನ ಪರಿಷತ್ ಚುನಾವಣೆಯ ಫಲಿತಾಂಶವನ್ನು ಗಮನಿಸಿದರೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಎಲ್ಲಾ ರಂಗಗಳಲ್ಲಿ ವಿಫಲವಾಗಿದೆ. ಈ ಫಲಿತಾಂಶ 2023 ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ನಿಚ್ಚಳ ಬಹುಮತದಿಂದ ಸರ್ಕಾರ ರಚಿಸುವ  ದಿಕ್ಸೂಚಿಯಾಗಲಿದೆ ಎಂದರು. 

 ಬ್ಲಾಕ್ ಅಧ್ಯಕ್ಷ ವಿಜಯಕುಮಾರ ಅಕಿವಾಟೆ, ಕೆಪಿಸಿಸಿ ಸದಸ್ಯರಾದ ದಿಗ್ವಿಜಯ ಪವಾರದೇಸಾಯಿ, ಚಂದ್ರಕಾಂತ ಇಮ್ಮಡಿ,  ಮುಖಂಡರಾದ ಗಜಾನನ ಯರಂಡೋಲಿ, ಉಮೇಶಗೌಡ ಪಾಟೀಲ ಕುಮಾರ ಪಾಟೀಲ, ಅಸ್ಪಾಕ್ ಘಟನಟ್ಟಿ, ಸಂಜಯ ಗಿರಿಕನ್ನೆ, ರಾಜು ಮದನೆ, ರಾಜು ಕಾಂಬಳೆ ರಾಜು ಕುಳ್ಳೋಳ್ಳಿ ಸೇರಿದಂತೆ ಅನೇಕರು ಇದ್ದರು. 


ಸುದ್ದಿ ಓದಿ