ಇಂಡಿ

ಈಶ್ವರಪ್ಪ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ

ಈಶ್ವರಪ್ಪ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ


ಇಂಡಿ21: ಕೆಂಪು ಕೋಟೆಯಲ್ಲಿ ಕೇಸರಿ ಧ್ವಜ ಹಾರಿಸುವದಾಗಿ ಹೇಳುವ ಮೂಲಕ ಈಶ್ವರ​‍್ಪ ರಾಷ್ಟ್ರಧ್ವಜವನ್ನು ಅವಮಾನಿಸಿದ್ದಾರೆ ಎಂದು ಅಪಾದಿಸಿರುವ ಕಾಂಗ್ರೆಸ್ ಕಾರ್ಯಕರ್ತರು ತಾಲೂಕಾ ಆಡಳಿತಸೌಧ ಎದುರು ಸೋಮವಾರ ಪ್ರತಿಭಟನೆ ನಡೆಸಿದರು. 

ಇಂಡಿ ಬ್ಲಾಕ್ ಕಾಂಗ್ರೇಸ್ ಸಮಿತಿ ಅಧ್ಯಕ್ಷ ಇಲಿಯಾಸ ಬೋರಾಮಣಿ, ಪ್ರಶಾಂತ ಕಾಳೆ, ಅಣ್ಣಪ್ಪ ಬಿದರಕೋಟಿ, ರವಿ ಹೊಸಮನಿ, ಜಟ್ಟೆಪ್ಪ ರವಳಿ, ಮೌಲಾಸಾಬ ಸೌದಾಗರ, ನಿರ್ಮಲಾ ತಳಕೇರಿ, ಮಾತನಾಡಿ ರಾಷ್ಟ್ರಧ್ವಜಕ್ಕೆ ಅವಮಾನ ನೀಡುವ ಹೇಳಿಕೆ ನೀಡಿದರೂ ಸಚಿವ ಈಶ್ವರ​‍್ಪ ಅವರನ್ನು  ಸ್ವಾಭಿಮಾನ ಬಿಟ್ಟು ಬಿಜೆಪಿ ನಾಯಕರು ಸಮರ್ಥಿಸುತ್ತಿರುವುದು ಅವರ ಮನಸ್ಥಿತಿ ತೋರಿಸುತ್ತದೆ ಎಂದರು. ಹೇಳಿಕೆ ನೀಡಿದ ಸಚಿವ ಈಶ್ವರ​‍್ಪನವರು ರಾಜಿನಾಮೆ ನೀಡಬೇಕು ಇಲ್ಲವೆ ಪ್ರತಿ ಗ್ರಾಮಗಳಲ್ಲೂ ಹೋರಾಟ ತೀರ್ವಗೊಳಿಸಲಾಗುವದು ಎಂದರು. ಸ್ವಾತಂತ್ರ್ಯ ಹೋರಾಟದ ತ್ಯಾಗ ಬಲಿದಾನಗಳನ್ನೂ ನಮ್ಮ ದೇಶದ ವೈವಿಧ್ಯತೆಯಲ್ಲಿ ಏಕತೆ ಮತ್ತು ಸಾಮರಸ್ಯದ ಸಹಬಾಳ್ವೆಯನ್ನೂ ಸೂಚಿಸುವ ಹಲವು ಮೌಲ್ಯಗಳನ್ನು ಈ ತ್ರಿವರ್ಣ ಧ್ವಜ ಸೂಚಿಸುತ್ತದೆ. ಕೆಂಪು ಕೋಟೆಯ ಮೇಲೆ ಅದನ್ನು ಹಾರಿಸುತ್ತೇವೆ. ಅಲ್ಲಿ ಬೇರೆ ಯಾವುದೇ ಧ್ವಜ ಹಾರುವಂತಿಲ್ಲ. ಆದರೆ ಸಚಿವರ ಹೇಳಿಕೆ ಖಂಡನೀಯ ಎಂದರು.  

ಸತ್ತಾರ ಬಾಗವಾನ, ಅಬ್ದುಲ್ ರಸೀದ ಅರಬ್, ಕೆಪಿಸಿಸಿ ಸದಸ್ಯ ಮಲ್ಲನಗೌಡ ಪಾಟೀಲ, ಜಹಾಂಗೀರ ಸೌದಾಗರ, ಜೀತಪ್ಪ ಕಲ್ಯಾಣಿ, ಪುರಸಭೆ ಸದಸ್ಯ ಅಯೂಬ ಬಾಗವಾನ, ಸುನಂದಾ ಪಾಟೀಲ, ಅಶ್ವಿನಿ ಪತ್ತಾರ, ರೇಖಾ ಕೋಳಿ, ಲಕ್ಷ್ಮೀ ಬಡಿಗೇರ, ಶೈಲಶ್ರೀ ಹಿರೇಮಣೂರ, ರಾಧಾ ಹಳ್ಳಿ, ಪವಿತ್ರಾ ದೊಡಮನಿ, ಸಿದ್ದು ಮಾವಿನಹಳ್ಳಿ, ಶಾಂತು ನಾಟೀಕಾರ, ಹುಚ್ಚಪ್ಪ ತಳವಾರ, ರೈಸ ಅಷ್ಟೇಕರ, ಸೇರಿದಂತೆ ಅನೇಕರು ಇದ್ದರು. 


ಸುದ್ದಿ ಓದಿ