ಶಿಗ್ಗಾವ್

ಕಾಂಗ್ರೆಸ್ ಪಕ್ಷ ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಡ ವಿತರಣೆ

ಕಾಂಗ್ರೆಸ್ ಪಕ್ಷ ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಡ ವಿತರಣೆ

ಲೋಕದರ್ಶನ ವರದಿ 

ಶಿಗ್ಗಾವಿ :ಸುಳ್ಳು ಭರವಸೆ ಹಾಗೂ ನಾಗರಿಕ ಸಂಪೂರ್ಣ ನಿರ್ಲಕ್ಷಧೋರಣೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನಸಾಮಾನ್ಯರಿಗೆ ಬೆಲೆ ಏರಿಕೆಯಿಂದ ಬಹಳ ಸಂಕಷ್ಟ ಎದುರಿಸುತ್ತಿದ್ದಾರೆ ಇದನ್ನು ಅರಿತ ಕಾಂಗ್ರೆಸ್ ಪಕ್ಷ ಕಾಂಗ್ರೆಸ್ ಗ್ಯಾರಂಟಿ ಕಾರ್ಯಕ್ರಮ ಹಮ್ಮಿಕೊಂಡಿದೆ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವ ಮೂಲಕ ಜನತೆ ಬದಲಾವಣೆಗೆ ಕೈ ಜೋಡಿಸುವಂತೆ ಶಿಗ್ಗಾವ್ ತಾಲೂಕ ಕಾಂಗ್ರೆಸ್ ಪಕ್ಷದ ವಕ್ತಾರ ಮಂಜುನಾಥ್ ಮಣ್ಣಣ್ಣವರ್ ಮನವಿ ಮಾಡಿದರು. 

ಪಟ್ಟಣದ ವಿವಿಧ ವಾರ್ಡಗಳಲ್ಲಿ ಕಾಂಗ್ರೆಸ್ ಪಕ್ಷ ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಡ ವಿತರಿಸಿ ಮಾತನಾಡಿದರು. ಕಳೆದ ಎರಡು ವರ್ಷಗಳಿಂದ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜನಸಾಮಾನ್ಯರಿಗೆ ಹೊರೆ ಹಾಗೂ ಬರಿಯಾಗಿ ಪರಿಣಮಿಸಿರುವ ದೈನಂದಿನ ಬಳಕೆಯ ಪದಾರ್ಥಗಳು ಗ್ಯಾಸ್ ಸಿಲೆಂಡರ್ ಹಾಲು ಮೊಸರು ಇತ್ಯಾದಿಗಳ ದರ ಕಡಿಮೆ ಮಾಡುವ ಬಗ್ಗೆ ಒಂದುಕ್ಷಣಯೋಚನೆ ಮಾಡಿಲ್ಲ ಜೊತೆಗೆ ರಾಜ್ಯದಲ್ಲಿ ಬೊಮ್ಮಾಯಿ ನೇತೃತ್ವದ ಸರ್ಕಾರ  ಘೋಷಣೆಗಳು ಹಾಗೂ ಶೋಷಣೆಗಳನ್ನು ಮಾಡುತ್ತಿದ್ದು ಜನತೆ ಅಕ್ಷರ ಸಹ ಕಂಗಾಲಾಗಿದ್ದಾರೆ ಹೀಗಾಗಿ ಮುಂಬರುವ ದಿನಗಳಲ್ಲಿ ಜನತೆಗೆ ಅನುಕೂಲವಾಗಲೆಂದು ಕಾಂಗ್ರೆಸ್ ಪಕ್ಷ ಮಹಿಳೆಯರಿಗೆ 2000 ಎರಡು ನೂರು ಯೂನಿಟ್ ಉಚಿತ ವಿದ್ಯುತ್,ಉಚಿತ ಹತ್ತು ಕೆಜಿ ಅಕ್ಕಿ ಕೊಡುವವರ ಜೊತೆಗೆ, ನಿರುದ್ಯೋಗಿ ಪದವೀಧರರಿಗೆ 3000, ಡಿಪ್ಲೋಮಾ ನಿರುದ್ಯೋಗಿಗಳಿಗೆ 1500 ಮಾಸಿಕ ಗ್ಯಾರಂಟಿಗಳನ್ನು ಕೊಡುತ್ತಿದ್ದು ಜನತೆ ಬದಲಾವಣೆಗಾಗಿ ಕಾಂಗ್ರೆಸ್ಸನ್ನು ಆಶೀರ್ವದಿಸುವಂತೆ ವಿನಂತಿಸಿದರು. 

ಕಾಂಗ್ರೆಸ್ ಗ್ಯಾರಂಟಿ ಕಾರ್ಡ್‌ ವಿತರಣೆಯ ನೇತೃತ್ವ ವಹಿಸಿ ಮಾತನಾಡಿದ ತಾಲೂಕ ಯುವಕಾಂಗ್ರೆಸ್ ಅಧ್ಯಕ್ಷ ನಿಸಾರ್ ತೂಕಲ್ಲಿ ಕಾಂಗ್ರೆಸ್ ಪಕ್ಷ ಬಡವರ ಪಕ್ಷ ಜನಸಾಮಾನ್ಯರ ಪಕ್ಷ ಭ್ರಷ್ಟ ಬಿಜೆಪಿ ಸರ್ಕಾರಗಳನ್ನು ತೊಲಗಿಸಿ ಕಾಂಗ್ರೆಸ್ ಆಶೀರ್ವದಿಸಿ ಎಂದು ಮನವಿ ಮಾಡಿದರು. 

ಜಿಲ್ಲಾ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ ಹನುಮಂತ್ ಬಂಡಿವಡ್ಡರ ಮಾತನಾಡಿ ಹೋರಾಟಗಾರ ಶೋಷಣೆಯ ಸರ್ಕಾರ ಬಡವರ ವಿರೋಧ ಸರ್ಕಾರ ಬಿಜೆಪಿ ಕಿತ್ತುಹಾಕಿ ಕಾಂಗ್ರೆಸ್ ಆಯ್ಕೆ ಮಾಡುವುದು ಒಂದೇ ಪರಿಹಾರ ಎಂದು ಭ್ರಷ್ಟ ಮುಖ್ಯಮಂತ್ರಿ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 

  ಎಐಸಿಸಿ ಯುವಕಾಂಗ್ರೆಸ್ ಶಿಗ್ಗಾವಿ ತಾಲೂಕಿನ ಉಸ್ತುವಾರಿ ಆಸಿಫ್ ಇಕ್ಬಾಲ್ ಮಾತನಾಡಿ ಕಾಂಗ್ರೆಸ್ ಪಕ್ಷ ಹಾಗೂ ರಾಹುಲ್‌ಗಾಂಧಿ  ಕನಸಿನ ಈ ಯೋಜನೆಗಳನ್ನು ಜನತೆಯ ಸಲುವಾಗಿ ಪಕ್ಷ ಮಾಡಿದ್ದು ರಾಜ್ಯದಲ್ಲಿ ಸರ್ಕಾರಕೇಂದ್ರದಲ್ಲಿ ಮೋದಿ ಸರ್ಕಾರ ಕಿತ್ತು ಹಾಕಿ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವದಿಸಿ ಎಂದು ಜನತೆಯಲ್ಲಿ ಒತ್ತಾಯಿಸಿದರು. 


ಸುದ್ದಿ ಓದಿ