ರಾಣೆಬೆನ್ನೂರ

ರಾಜ್ಯ ಸಮಿತಿ ಮುಖಂಡರ ಅಭಿನಂದನಾ ಸಮಾರಂಭ

ರಾಜ್ಯ ಸಮಿತಿ ಮುಖಂಡರ ಅಭಿನಂದನಾ ಸಮಾರಂಭ

ರಾಣೇಬೆನ್ನೂರು : ಅ 14 ಸಮಾಜ ನಮಗೇನು ಕೊಟ್ಟಿದೆ ಎನ್ನುವುದಕ್ಕಿಂತ  ಸಮಾಜಕ್ಕಾಗಿ ನಾವು ಏನು ಮಾಡಿದ್ದೇವೆ. ಏನು ಮಾಡಬೇಕಾಗಿದೆ ಎನ್ನುವ ಚಿಂತನೆ ಮೇದಾರ ಸಮುದಾಯವು ಮಾಡಬೇಕಾದ ಇಂದಿನ ಅಗತ್ಯವಿದೆ ಎಂದು ಚಿತ್ರದುರ್ಗ ಕೇತೇಶ್ವರ ಗುರುಪೀಠದ ಪೀಠಾಧ್ಯಕ್ಷರಾದ ಶ್ರೀ ಇಮ್ಮಡಿ ಬಸವ ಪ್ರಭು  ಕೇತೇಶ್ವರ ಮಹಾ ಸ್ವಾಮಿಗಳವರು ನುಡಿದರು. ಅವರು ಮಂಗಳವಾರ ಇಲ್ಲಿನ ಹಲಗೇರಿ ರಸ್ತೆಯ, ಮೇದಾರ ಓಣಿಯ, ಶ್ರೀ ಮಳಿಯಮ್ಮ ದೇವಿ ದೇವಸ್ಥಾನ ಆವರಣದಲ್ಲಿ ಶ್ರಾವಣ ಮಾಸದ ಮೇದಾರ ಜನಾಂಗದ ಜಾಗೃತಿ ಅಭಿಯಾನ - ರಾಜ್ಯ ಸಮಿತಿಯ ನೂತನ ಅಧ್ಯಕ್ಷ ಪದಾಧಿಕಾರಿಗಳ ಅಭಿನಂದನಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ಮೇದಾರ ಜನಾಂಗಕ್ಕೆ, ವೇದ ಇತಿಹಾಸ ಕಾಲಗಳಿಂದಲೂ, ತಮ್ಮದೇ ಆದ ಇತಿಹಾಸವಿದೆ, ಶರಣ ಪರಂಪರೆಯ , ಸಮಕಾಲಿನತೆಯಲ್ಲಿ, ತಮ್ಮ ಕಾಯಕದ ಮೂಲಕ, ಕೇತೇಶ್ವರ ಸ್ವಾಮಿಯು ಕಾಯಕಯೋಗಿಗಳಾಗಿ, ಶರಣರಲ್ಲಿ ಶರಣರಾಗಿದ್ದಾರೆ, ಅಂತಹ ಕುಲದಲ್ಲಿ ಜನ್ಮತಾಳಿದ ಈ ಸಮುದಾಯ, ಕಾಣಬೇಕಾದಸ್ಟು ಅಭಿವೃದ್ಧಿ ಇಲ್ಲಿಯವರೆಗೂ ಕಂಡಿಲ್ಲ. ಎಂದು ಶ್ರೀಗಳು ಹೇಳಿದರು.      

ಜಗದ್ಗುರು ಪೀಠವು, ಸದಾವ ಕಾಲವು, ಸಮುದಾಯದ ಅಭಿವೃದ್ಧಿಯನ್ನೇ ಬಯಸುತ್ತೇವೆ. ತಮ್ಮ ವೃತ್ತಿ ಕಾಯಕದ ಜೊತೆಗೆ, ಯಾವುದೇ ಜಾತಿ,ಮತ, ಭೇದ,ಭಾವವಿಲ್ಲದೆ, ಸೇವಾ ಕಾರ್ಯವನ್ನು ಮಾಡುವ, ಸಮಾಜದ ಜನತೆ, ಒಂದಾಗಿ,ಒಗ್ಗಟ್ಟಾಗಿ, ಯಾವುದೇ ಆಂತರಿಕ ಭಿನ್ನ ಭೇದಗಳನ್ನು ಇಟ್ಟುಕೊಳ್ಳದೆ  ಸಮಾಜದ ಸಮಗ್ರ ಅಭಿವೃದ್ಧಿಗಾಗಿ, ಕಂಕಣ ಬದ್ಧರಾಗಬೇಕು ಎಂದು ಶ್ರೀಗಳು ಕರೆ ನೀಡಿದರು.    

ದಿವ್ಯ ಸಮ್ಮುಖದಲ್ಲಿದ್ದ ವಿಜಯ  ಮಹಾಂತೇಶ್ವರ ಮಠದ, ಶ್ರೀ  ಬಸವರಾಜ ಸ್ವಾಮೀಜಿ ಅವರು, ತಮ್ಮ ಸಂದೇಶಾಮೃತ ನುಡಿ ಯಾಡಿದರು.       ರಾಣೇಬೆನ್ನೂರು ಸಮಾಜದ ಗೌರವ ಅಭಿನಂದನಾ,ಸನ್ಮಾನ ಸ್ವೀಕರಿಸಿ ಮಾತನಾಡಿದ, ಮೇದಾರ ಕೇತೇಶ್ವರ ಟ್ರಸ್ಟಿನ ಅಧ್ಯಕ್ಷ, ಸಿ.ಪಿ. ಪಾಟೀಲ್ ಅವರು, ಜನಾಂಗವು ತಮ್ಮ ಕಾಯಕದ ಮೂಲಕ, ತಮ್ಮನ್ನೇ ತಾವು ಗುರುತಿಸಿಕೊಂಡಿದೆ. ಇಂದು, ಸಾಮಾಜಿಕ, ಶೈಕ್ಷಣಿಕ,ರಾಜಕೀಯ, ಧಾರ್ಮಿಕ, ಹಾಗೂ ಸ್ವಾತಂತ್ರ್ಯ  ಸಮಾನತೆಗಾಗಿ, ಒಗ್ಗಟ್ಟಿನ ಬಲದ ಮೂಲಕ ಸಮಾನತೆಯನ್ನು ಸಾಧಿಸಬೇಕಾಗಿದೆ  ಎಂದರು. ಕಾರ್ಯಕ್ರಮದಲ್ಲಿ ಟ್ರಸ್ಟ್ಗಗಳಾದ ಉಪಾಧ್ಯಕ್ಷ ಬಸವರಾಜ ದಾವಣಗೆರಿ, ಶಿರಾದ ರಾಮಣ್ಣ, ಜಿಲ್ಲಾಧ್ಯಕ್ಷ  ನಾಗರಾಜ ಗುಡದಹಳ್ಳಿ, ಗೀರೀಶ್ ಹುಗ್ಗಿ, ಜಿಲ್ಲೆಯ ವಿವಿಧ ತಾಲೂಕುಗಳ ಅಧ್ಯಕ್ಷರಾದ ನಾಗರಾಜ ಹಾವೇರಿ, ಚಿದಾನಂದಪ್ಪ, ರಾಜು ಅಬ್ಬಿಗೇರಿ, ಪರಮೇಶ ಮೇದಾರ, ಚಂದ್ರ​‍್ಪ ಮೇದಾರ, ಪ್ರಕಾಶ ನೆಗಳೂರ, ದೇವೇಂದ್ರ​‍್ಪ ಮಂಜುನಾಥ ಗುಡಿಗೇರಿ, ಮತ್ತಿತರರು ಸಮಾಜ ಸಂಘಟನೆ ಕುರಿತು  ಮಾತನಾಡಿದರು. ಕೇತೇಶ್ವರ ಸಮಾಜದ ತಾಲೂಕ   ಅಧ್ಯಕ್ಷ ಎಂ. ಕೆ.ಭರಮಪ್ಪ ಅವರು, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.    

ವೇದಿಕೆಯಲ್ಲಿ ಮುಖಂಡರಾದ ಪ್ರಶಾಂತ್ ಕಿರಗೇರಿ, ಸಿದ್ದಪ್ಪ ಬಾದರಬಂಡಿ ಎ.ಲಕ್ಷ್ಮಣ್ ಎಂ. ಶಿವಲಿಂಗಪ್ಪ ವೈ.ಮಂಜುನಾಥ್, ಫಕ್ಕಿರೇಶ್ ಅಬ್ಬಿಗೇರಿ ಎನ್‌. ಕೆ. ರಮೇಶ, ಹನುಮಂತಪ್ಪ ಶಿರುಗುಂಪಿ, ಕೊಟ್ರೇಶ್ ಹೊಳಲ, ಟಿ.ಮಲ್ಲೇಶ, ಶ್ರೀಕಾಂತ್ ಗುಡಗೇರಿ, ಫಕ್ಕೀರೇಶ ಬಾದರ ಬಂಡಿ, ಮತ್ತಿತರರು ಉಪಸ್ಥಿತರಿದ್ದರು. ಕು: ಕೃತಿಕಾ ಸಂಗಡಿಗರು  ಪ್ರಾರ್ಥಿಸಿದರುಸ್ವಾಮಿ ಮೇದಾರ  ಸ್ವಾಗತಿಸಿ, ನಾಗರಾಜ ಗುಡದಹಳ್ಳಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕೊಟ್ರೇಶ ಹೊಳಲ, ನಿರೂಪಿಸಿ ವಂದಿಸಿದರು 


ಸುದ್ದಿ ಓದಿ