ಧಾರವಾಡ - ಹುಬ್ಬಳ್ಳಿ

ಪ್ರತಿಭೆ ಐಶ್ವರ್ಯ ರವಿಚಂದ್ರ ಬಾಲೆಹೊಸೂರ- ಮೇಘನಾ ಎಸ್‌. ತಲವಾಯಿಗೆ ಅಭಿನಂದನಾ ಸಮಾರಂಭ

ಪ್ರತಿಭೆ ಐಶ್ವರ್ಯ ರವಿಚಂದ್ರ ಬಾಲೆಹೊಸೂರ- ಮೇಘನಾ ಎಸ್‌. ತಲವಾಯಿಗೆ ಅಭಿನಂದನಾ ಸಮಾರಂಭ

ಹುಬ್ಬಳ್ಳಿ,08:  ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ  ಕೆಕೆ ಮಾರ್ಟನಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಶೂಟಿಂಗ್ ಕ್ಷೇತ್ರದಲ್ಲಿ ರಾಜ್ಯಮಟ್ಟದಲ್ಲಿ ಮಿಂಚುತ್ತಿರುವ ಯುವ ಪ್ರತಿಭೆ ಐಶ್ವರ್ಯ ರವಿಚಂದ್ರ ಬಾಲೆಹೊಸೂರ ಹಾಗೂ ರಾಷ್ಟ್ರಮಟ್ಟದಲ್ಲಿ ನಡೆಯುವ ಗೇಟ್, ಜಿಎಟಿಯಿ ಪರೀಕ್ಷೆಯಲ್ಲಿ ಅತ್ಯುತ್ತಮ ರಾ​‍್ಯಂಕ್ ಪಡೆದು ಪುಣೆಯ ಪ್ರತಿಷ್ಟಿತ ಮಿಲಟರಿ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸಡ್ ಟೆಕ್ನಾಲಜಿಯ ಎರೋಸ್ಪೇಸ್ ವಿಭಾಗದಲ್ಲಿ ಗೈಡೆಡ್ ಮಿಸೈಲ್ಸ ವಿಷಯದಲ್ಲಿ ಸ್ನಾತಕೋತ್ತರ, ಎಂಟೆಕ್ ಪದವಿಗೆ ಪ್ರವೇಶ ಪಡೆದ ಮೇಘನಾ ಎಸ್‌. ತಲವಾಯಿ ಅವರಿಗೆ ಶಾಲು, ಮಾಲಾರೆ​‍್ಣ ಮಾಡಿ,  ಗ್ರಂಥ ನೀಡಿ ಗೌರವಿಸಲಾಯಿತು. ಅಭಿನಂದನೆಗಳನ್ನು ಸಲ್ಲಿಸಿ ಶುಭ ಕೋರಿದರು. 

ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ‌್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ,  ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ಹುಬ್ಬಳ್ಳಿ ಶೂಟಿಂಗ್ ಅಕಾಡೆಮಿಯ ಕೋಚ್, ಐಶ್ವರ್ಯ ಅವರ ತಂದೆ ರವಿಚಂದ್ರ ಬಾಲೆಹೊಸೂರ, ಪಿಯು ಕಾಲೇಜಿನ ಉಪನ್ಯಾಸಕಿ, ಮೇಘನಾ ಅವರ ತಾಯಿ ಭಾರತಿ ರಣತುರ,  ರಾಣಿ ಚನ್ನಮ್ಮ ಪರಿಸರ ಸೇವಾ ಸಮಿತಿಯ ಅಧ್ಯಕ್ಷ, ನಿವೃತ್ ಪ್ರಾಚಾರ್ಯ ಪ್ರೊ ಎಸ್‌.ಎಂ.ಸಾತ್ಮಾರ, ಇಂಜಿನಿಯರ್ ಶಿವಯೋಗಿ ಮುಗಬಸ್ತ, ಇಂಜಿನಿಯರ್ ಸುನಂದಾ ಮುಗಭಸ್ತ, ಕಾವ್ಯ, ಕಾವೇರಿ, ಮುಂತಾದವರು ಇದ್ದರು. ಡಾ. ಸುರೇಶ ಡಿ. ಹೊರಕೇರಿ ಅವರು ಮಾತನಾಡಿ ಐಶ್ವರ್ಯ ಹಾಗೂ ಮೇಘನಾ ಅವರು ಮಾಡಿದ ಸಾದನೆಗೆ ಅಪಾರ ಮೆಚ್ಚುಗೆ ಹಾಗೂ ಸಂತಸ ವ್ಯಕ್ತಪಡಿಸಿದರು. ಇಬ್ಬರೂ ಆಯಾ ಕೇತ್ರದಲ್ಲಿ ಇನ್ನೂ ಹೆಚ್ಚು ಸಾಧನೆ ಮಾಡಿ ದೇಶಕ್ಕೆ ಅಪಾರ ಗೌರವ ತಂದು ಕೊಡಲಿ ಎಂದು ಹಾರೈಸಿ, ಶುಭ ಕೋರಿದರು. 


ಸುದ್ದಿ ಓದಿ