ಕಾಗವಾಡ

ತಾಲೂಕಾ ಮಟ್ಟದ ಇಲಾಖಾ ಕ್ರೀಡಾಕೂಟಕ್ಕೆ ಚಾಲನೆ

ತಾಲೂಕಾ ಮಟ್ಟದ ಇಲಾಖಾ ಕ್ರೀಡಾಕೂಟಕ್ಕೆ ಚಾಲನೆ

ಕಾಗವಾಡ 31:  ಶಿವಾನಂದ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ತಾಲೂಕಾ ಮಟ್ಟದ ಇಲಾಖಾ ಕ್ರೀಡಾಕೂಟಕ್ಕೆ ಶುಕ್ರವಾರ ದಿ. 30 ರಂದು ಚಾಲನೆ ನೀಡಲಾಯಿತು. 

ಎಸ್‌ಎಂಎಟಿ ಕಾಗವಾಡ ಇದರ ಏಕನ್ಯಾಸಧಾರಿಗಲಾದ ಪ.ಪೂ. ಶ್ರೀ ಯತೀಶ್ವರಾನಂದ ಸ್ವಾಮೀಜಿ, ಕ್ರೀಡಾ ಜ್ಯೋತಿಯನ್ನು ಸ್ವಿಕರಿಸುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ವ್ಹಿ.ಎಸ್‌.ತುಗಶೆಟ್ಟಿ ಧ್ವಜಾರೋಹಣ ನೇರೆವೆರಿಸಿದರು. ತಾಲೂಕಾ ಕ್ರೀಡಾ ನೋಡಲ್ ಅಧಿಕಾರಿ ಸತೀಶ ಸನದಿ ಪ್ರತಿಜ್ಞಾ ವಿಧಿ ಬೋಧಿಸಿದರು. 

ಮುಖ್ಯ ಅತಿಥಿಗಳಾದ ಬಿ.ಎ. ಪಾಟೀಲ ಕ್ರೀಡಾಕೂಟವನ್ನು ಉದ್ಧೇಶಿಸಿ ಮಾತನಾಡುತ್ತ, ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸಿರಬೇಕಾದರೇ ಪ್ರತಿಯೊಬ್ಬ ವಿದ್ಯಾರ್ಥಿಯು ಕ್ರೀಡೆಯಲ್ಲಿ ಭಾಗವಹಿಸಬೇಕೆಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ.ಎಸ್‌.ಎ. ಕರ್ಕಿ ಮಾತಾನಾಡಿ, ಕ್ರೀಡಾ ಪಟುಗಳು ಪ್ರಾಮಾಣಿಕತೆಯಿಂದ ವರ್ತಿಸಿಬೇಕೆಂದು ತಿಳಿಸಿದರು. 

ಈ ವೇಳೆ ಪ.ಪೂ. ಕಾಲೇಜಿನ ಪ್ರಾಚಾರ್ಯ ಪಿ.ಬಿ. ನಂದಾಳೆ, ವಿಜ್ಞಾನ ವಿಭಾಗದ ಮುಖ್ಯಸ್ಥ ಎಮ್‌.ವಿ. ಮಲ್ಲಕಣ್ಣವರ, ದೈಹಿಕ ನಿರ್ದೇಶಕರಾದ ಆರ್‌.ಎಸ್‌. ನಾಗರೆಡ್ಡಿ, ಅಮರ ಎಸ್‌. ಕೊರವಿ, ಕ್ರೀಡಾ ಕಾರ್ಯದರ್ಶಿಗಳಾದ ಎಂ.ವೈ. ಮಾಳಿ ಸೇರಿದಂತೆ ನಿರ್ಣಾಯಕರು, ವಿವಿಧ ಕಾಲೇಜಿನಿಂದ ಆಗಮಿಸಿದ್ದ ತಂಡದ ವ್ಯವಸ್ಥಾಪಕರು ಕಾಲೇಜಿನ ಸಿಬ್ಬಂದಿಯವರು ಹಾಗೂ ಕ್ರೀಡಾಪಟುಗಳು ಉಪಸ್ಥಿತರಿದ್ದರು. ಪ್ರೊ.ಎಂ.ವೈ. ಮಾಳಿ ಸ್ವಾಗತಿಸಿದರು. ಪ್ರೊ.ಎಮ್‌.ಎಸ್‌. ಮಾಂಜರಿ ನಿರೂಪಿಸಿ, ವಂದಿಸಿದರು. 


ಸುದ್ದಿ ಓದಿ