ಜಿಲ್ಲಾ ಮಟ್ಟದ ಸಾಂಸ್ಕೃತಿಕ- ಕ್ರೀಡಾ ಸ್ಪರ್ಧೆಗಳಿಗೆ ಚಾಲನೆ
ಧಾರವಾಡ 04: ಆಲ್ಬರ್ಟ್ ಐನ್‌ಸ್ಟೈನ್ ಹೇಳುವಂತೆ ಶಿಕ್ಷಣವು ಸತ್ಯಗಳ ಕಲಿಕೆಯಲ್ಲ, ಆದರೆ ಮನಸ್ಸನ್ನು ಯೋಚಿಸಲು ತರಬೇತಿ ನೀಡುತ್ತದೆ. ಇಂದು ಶಿಕ್ಷಣದ ಮಹತ್ವ ಎಲ್ಲರಿಗೂ ಅರಿವಾಗುತ್ದಿದೆ. ತೀವ್ರ ಗತಿಯಲ್ಲಿ ಶಿಕ್ಷಣದಲ್ಲಿ ಬದಲಾವಣೆಯಾಗುತ್ತಿದೆ. ಖಾಸಗಿ ಶಾಲೆಗಳು, ಸರ್ಕಾರಿ ಶಾಲೆಗಳು ಬೇಧ ಭಾವ ಇರಬಾರದು. ಶ್ರೀಮಂತರ ಮಕ್ಕಳಿಗೆ ಒಂದು ಶಾಲೆ, ಬಡವರ ಮಕ್ಕಳಿಗೆ ಬೇರೊಂದು ಶಾಲೆ ಎಂಬಂತೆ ವಾತಾವರಣ ನಿರ್ಮಾಣವಾಗಿದ್ದು ಒಳ್ಳೆಯ ಬೆಳವಣಿಗೆ ಅಲ್ಲ. ಎಲ್ಲ ವರ್ಗದ ಮಕ್ಕಳು ಒಂದೇ ತರವಾದ ಶಾಲೆಯಲ್ಲಿ ಕಲಿಯುವಂತಾಗಬೇಕು.
ದೇಶದಲ್ಲಿ ಸಮಾನ ಶಿಕ್ಷಣ ಜಾರಿಯಾಗಬೇಕು ಎಂದು ಹುಬ್ಬಳ್ಳಿಯ ಯಂಗ್ ಸ್ಟಾರ್ ಸ್ಪೋರ್ಟ್ ಕ್ಲಬ ಮೈದಾನದಲ್ಲಿ ಧಾರವಾಡ ಜಿಲ್ಲಾ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದವರು ಹಮ್ಮಿಕೊಂಡಿದ್ದ ಪ್ರೌಢಶಾಲಾ ಶಿಕ್ಷಕರಿಗೆ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳಿಗೆ ಚಾಲನೆ ನೀಡಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಪೂಜ್ಯ ಉಪ ಮಹಾಪೌರರಾದ ದುರ್ಗಮ್ಮ ಬಿಜವಾಡ ಮಾತನಾಡಿದರು. ಅವರು ವಿಜೇತರಿಗೆ ಬಹುಮಾನಗಳನ್ನು ವಿತರಿಸಿ ದೇಶದ ಬೆನ್ನಲಬು ಶಿಕ್ಷಕರಾಗಿದ್ದಾರೆ, ಅವರ ಆರೋಗ್ಯವು ಅಷ್ಟೆ ಮುಖ್ಯವಾಗಿದೆ
ಇಂತಹ ಕ್ರೀಡಾಕೂಟ ಸಾಂಸ್ಕೃತಿಕ ಸ್ಪರ್ಧೆಗಳ ಮೂಲಕ ಮಾನಸಿಕ ನೆಮ್ಮದಿ ಕಾಣಬಹುದು ಎಂದರು. ಸಂಘದ ರಾಜ್ಯ ಉಪಾಧ್ಯಕ್ಷರಾದ ಮಲ್ಲನಗೌಡ ಬಿರಾದಾರ ಕ್ರೀಡಾ ಜ್ಯೋತಿ ಸ್ವೀಕರಿಸಿದರು. ಸಮಾಜದ ಚಿಂತಕ ಹಾಗೂ ಭಾರತೀಯ ಜನತಾ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಶಶಿಕಾಂತ ಬಿಜವಾಡ ಓಲಂಪಿಕ್ ಕ್ರೀಡಾ ಧ್ವಜಾರೋಹಣ ಮಾಡಿದರು. ಜಿಲ್ಲಾ ಅಧ್ಯಕ್ಷ ನಾರಾಯಣ ಭಜಂತ್ರಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಕುಮಾರ ಸಂಕಣ್ಣವರ, ವ್ಗಿ ಜಿ ಗಲಬಿ, ಭೀಮರಾವ್ ಬಸೆಟ್ಟಿ, ಸಿ ಪಿ ಪಾಟೀಲ, ಎಸ್ ಎಸ್ ರೂಗಿ, ರಮೇಶ ತಳವಾರ, ಪಿ ಕೆ ಹಿರೆಗೌಡರ, ಯಲ್ಲಪ್ಪ ಬೆಣ್ಣಿ, ಬಿರಾದಾರ ಪಾಟೀಲ, ಪರತ್ ಜಲಗೇರಿ, ಪ್ರಮೋದ ವಾದಿರಾಜ ನಿರೂಪಿಸಿದರು, ನಾಗರಾಜ ಬಾಗೂನವರ ಸ್ವಾಗತಿಸಿದರು, ಇಂದಿರಾ ಬಿ ವಂದಿಸಿದರು. ಮುಂತಾದವರಿದ್ದರು.