ವಿವಿಧ ಆರೋಗ್ಯ ಶಿಬಿರದ ಸಮಾರೋಪ ಸಮಾರಂಭ
ಶಿಗ್ಗಾವಿ 27: ಪ್ರಧಾನಿ ಮೋದಿಯವರ ಜನಪರ ಯೋಜನೆಗಳೆ ನಮಗೆ ಪ್ರೇರಣೆಯಾಗಿದ್ದು, ಅವರ ಹುಟ್ಟು ಹಬ್ಬದ ಅಂಗವಾಗಿ ಅಂಗನವಾಡಿ ಮಕ್ಕಳಿಗೆ ಆರೋಗ್ಯ ತಪಾಸಣೆ ಮತ್ತು ಗರ್ಭಿಣಿ ಮಹಿಳೆಯರಿಗೆ ಪೌಷ್ಠಿಕಾಂಶದ ಅರಿವು ಕುರಿತು ತಿಳಿಸಲಾಗುತ್ತದೆ ಎಂದು ಬಿಜೆಪಿ ಮಹಿಳಾ ಮೋರ್ಚಾದ ಉಷಾ ಬಿಳಿ ಕುದುರಿ ಹೇಳಿದರು.
ಪಟ್ಟಣದ ಜಯನಗರದಲ್ಲಿಯ ಅಂಗನವಾಡಿ ನಂ. 2ರಲ್ಲಿ ಮಹಿಳಾ ಮೋರ್ಚಾ ವತಿಯಿಂದ ಪ್ರಧಾನಿ ಮೋದಿಯವರ ಹುಟ್ಟು ಹಬ್ಬದ ಅಂಗವಾಗಿ ಸತತ ಒಂದು ತಿಂಗಳಿಂದ ಹಮ್ಮಿಕೊಂಡ ವಿವಿಧ ಆರೋಗ್ಯ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅಂಗನವಾಡಿ ಮಕ್ಕಳ ಆರೋಗ್ಯ ತಪಾಸಣೆ ಶಿಭಿರದಲ್ಲಿ ಮಕ್ಕಳಿಗೆ ಸಿಹಿ ನೀಡಿ ಮಾತನಾಡಿದ ಅವರು, ಸತತ 1 ತಿಂಗಳಿನಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಸಮಾರೋಪ ಕಾರ್ಯಕ್ರಮದ ಪ್ರಯುಕ್ತ ಮಕ್ಕಳಿಗೆ ಸಿಹಿ ವಿತರಿಸಿ ಅಂಗನವಾಡಿ ಶಿಕ್ಷಕಿಯರನ್ನ ಮತ್ತು ಸಹಾಯಕರಿಯನ್ನು ಸನ್ಮಾನಿಸಲಾಗಿದೆ ಎಂದರು.
ಮಹಿಳಾ ಮೋರ್ಚಾದ ಲಕ್ಷ್ಮೀ ತೋಟದ ಮಾತನಾಡಿ ಮೋದಿಯವರ ಪ್ರತಿಯೊಂದು ಯೋಜನಗಳು ಅಂಗನವಾಡಿಯವರೆಗೂ ಮುಟ್ಟಿರುವುದನ್ನ ಖಚಿತಪಡಿಸಿಕೊಂಡಿದ್ದು ಯೋಜನೆಗಳಾದ ಬೇಟಿ ಪಡಾವೋ, ಬೇಟಿ ಬಚಾವೊ, ಸುಕನ್ಯಾ ಸಮೃದ್ದಿ ಇನ್ನು ಹತ್ತು ಹಲವಾರು ಯೋಜನೆಗಳು ಪೂರಕವಾಗಿ ಪ್ರತಿಯೊಬ್ಬರಿಗೂ ಅವರ ಜನಪರ ಯೋಜನೆಗಳನ್ನ ಮುಟ್ಟಿಸುವ ಕಾರ್ಯ ಮಾಡಲಾಗುತ್ತದೆ ಎಂದರು.
ಕಾರ್ಯದಮದಲ್ಲಿ ಪುರಸಭೆ ಅಧ್ಯಕ್ಷ ರೂಪಾ ಬನ್ನಿಕೊಪ್ಪ, ವಾರ್ಡಿನ ಸದಸ್ಯೆ ಮೈಮುನ್ನಿಸಾ ಲಕ್ಷ್ಮೇಶ್ವರ, ಆರೋಗ್ಯ ಇಲಾಖೆಯ ಸರೋಜಾ ಹರಿಜನ್, ಯಶೋಧಾ ಪಾಟೀಲ, ಮಂಜುಳಾ ಭದ್ರಶೆಟ್ಟಿ, ಶಿಕ್ಷಕಿ ಅಮ್ಮಾಜಾನ, ಅಂಗನವಾಡಿ ಸಹಾಯಕಿಯರು, ಮಕ್ಕಳು ಮಹಿಳಾ ಮೋರ್ಚಾದ ಸದಸ್ಯರು ಉಪಸ್ಥಿತರಿದ್ದರು.