ರಾಣೆಬೆನ್ನೂರ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ರೀಡಾಕೂಟಗಳ ಸ್ಪರ್ಧೆ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ರೀಡಾಕೂಟಗಳ ಸ್ಪರ್ಧೆ

ರಾಣಿಬೆನ್ನೂರ 25: ಐರಣಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 6  ವಿದ್ಯಾರ್ಥಿಗಳು ಇತ್ತೀಚೆಗೆ ಹಾವೇರಿಯಲ್ಲಿ ಜರುಗಿದ ಜಿಲ್ಲಾ ಮಟ್ಟದ ಸ.ಹಿ.ಪ್ರಾ ಶಾಲಾ ಕ್ರೀಡಾಕೂಟದ ಸ್ಪರ್ಧೆಯ ಕುಸ್ತಿಯಲ್ಲಿ ಕು. ಲಕ್ಷ್ಮಿ ನೀಲಪ್ಪ ಅಣ್ಣೇರ, ಹಾಗೂ ಕು.ಗೌರಮ್ಮ ಮಾಲತೇಶ ಪೂಜಾರ  ಮತ್ತು ಈಜು ಸ್ಪರ್ಧೆಯಲ್ಲಿ  ಕು. ರಿಂದು ಮಂಜಪ್ಪ ಬಳ್ಳಾರಿ, ಕು. ಸುಗುಣ ಸದಾನಂದಚಾರಿ ಬಡಿಗೇರ, ಕು. ಭಾಗ್ಯಲಕ್ಷ್ಮಿ ಚಂದ್ರ​‍್ಪ ನಡುವಿನಮನಿ, ಹಾಗೂ ಕು. ಕಾವೇರಿ ಸುರೇಶ ನಡುವಿನಮನಿ ಇವರು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ  ಎಂದು ಶಾಲಾ ಪ್ರಭಾರಿ ಮುಖ್ಯೋಪಾಧ್ಯಾಯರು ಹಾಗೂ ದೈಹಿಕ ಶಿಕ್ಷಕಿ  ಅನ್ನಪೂರ್ಣ ಬಣಕಾರ ತಿಳಿಸಿದ್ದಾರೆ.  

ಶಾಲೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ  ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಕರಿಯಪ್ಪ ಕಂಬಳಿ, ಶಿಕ್ಷಕರಾದ  ಅನ್ನಪೂರ್ಣ ಬಣಕಾರ, ಆರ್ ಸುರೇಖಾ, ಎಂಎನ್ ಬಲ್ಲೂರ,   ಅಶೋಕ್ ಗೋವಿಂದೇಗೌಡ,  ಅನ್ನಪೂರ್ಣ ಜಿಕೆ,  ಡಿ ರೇಣುಕಮ್ಮ, ಉಷಾ ಎಚ್, ನಾಗಮಣಿ ಕೆವಿ,  ಕವಿತಾ ಕಟಗಿ, ವಿಜಯಲಕ್ಷ್ಮಿ ಸೇರಿದಂತೆ ಎಸ್‌ಡಿಎಂಸಿ ಪದಾಧಿಕಾರಿಗಳು  ಹಾಗೂ  ಸಿಬ್ಬಂದಿ ವರ್ಗ, ಗ್ರಾಮಸ್ಥರು ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಿ ಅಭಿನಂದಿಸಿದರು. 


ಸುದ್ದಿ ಓದಿ