ಜನಸಾಮಾನ್ಯರು ಸಂಘ ಸಂಸ್ಥೆಗಳು ನೀಡುವ ಸೇವೆಯ ಸದುಪಯೋಗ ಪಡೆಯಬೇಕು: ಅರಕೇರಿ
ಡಾ: ಪುನೀತ್ ರಾಜ್ ಹುಟ್ಟುಹಬ್ಬ : ಕಣ್ಣಿನ ತಪಾಸಣೆ, ಶಸ್ತ್ರಚಿಕಿತ್ಸಾ ಶಿಬಿರ
ರಾಣೇಬೆನ್ನೂರು : ಮಾ 18- ಮಾನವನ ಜನ್ಮ ಸಾರ್ಥಕತೆ ಹೊಂದಬೇಕಾದರೆ ಧಾನ,ಧರ್ಮ ಪರೋಪಕಾರದ ಗುಣಗಳನ್ನು ಹೊಂದಿರಬೇಕು ಅಂದಾಗ ಮಾತ್ರ ಸಮಾಜದಲ್ಲಿ ಪ್ರತಿಯೊಬ್ಬರು ಸಮಾನತೆ ಸಾಧಿಸಲು ಸಾಧ್ಯವಾಗುವುದು ಎಂದು ಲಯನ್ಸ್ ಎಂ.ಜಿ. ಇ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಲ್ಲೇಶಪ್ಪ ಅರಕೇರಿ ಹೇಳಿದರು.
ಅವರು, ಇಲ್ಲಿನ ಮೇಡ್ಲೇರಿ ರಸ್ತೆಯ ಲಯನ್ ಶಾಲಾ ಸಭಾ ಭವನದಲ್ಲಿ, ಸ್ವಾಭಿಮಾನಿ.ಕ.ರ. ವೇದಿಕೆ, ಲಯನ್ಸ್ ಸೇವಾ ಸಂಸ್ಥೆ, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾಅಂದತ್ವ ನಿವಾರಣ ಸಮಿತಿ ಆಯೋಜಿಸಿದ್ದ, ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಇಂದಿನ ದಿನಮಾನಗಳಲ್ಲಿ, ತಪಾಸಣೆಗೋಳಪಡಬೇಕಾದರೂ ಸಹ, ಜನಸಾಮಾನ್ಯರಿಗೆ ಅದರ ವೆಚ್ಚವನ್ನು ಬರಿಸಲು ಸಾಧ್ಯವಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ಅಂದತ್ವ ನಿವಾರಣೆಗಾಗಿ, ಮತ್ತು ಚಿಕಿತ್ಸೆಗಾಗಿ ಲಯನ್ಸ್ ಸಂಸ್ಥೆ ಸ್ವಾಕರವೇ ಸೇರಿದಂತೆ ಇಂತಹ ಅನೇಕ ಸಾರ್ವಜನಿಕ.ಸೇವಾ ಸಂಸ್ಥೆಗಳು ತಮ್ಮ ಪಾಲಿನ ಕರ್ತವ್ಯ ಮೆರೆಯುತ್ತಿದ್ದಾರೆ. ಅವುಗಳ ಪ್ರಯೋಜನವನ್ನು ಪ್ರತಿಯೊಬ್ಬರು ಪಡೆಯಬೇಕು, ಮತ್ತು ಸಮಾನತೆಯ ಬದುಕು ಸಾಗಿಸಬೇಕು ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಭುಲಿಂಗಪ್ಪ ಹಲಗೇರಿ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ನೇತ್ರ ಸಂಚಾರಿ ಘಟಕದ ಆರೋಗ್ಯ ಶಿಕ್ಷಣಾಧಿಕಾರಿ ಜೆ.ಎಂ. ರಾಜಶೇಖರ್, ಕಣ್ಣಿನ ರಕ್ಷಣೆ ಮತ್ತು ಅನುಸರಿಸಬೇಕಾದ ಮುಂಜಾಗ್ರತಾ ಕ್ರಮ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ, ಮಾಜಿ ಅಧ್ಯಕ್ಷರಾದ ಬಸವರಾಜ ಬಡಿಗೇರ್, ಎಲ್. ಜಿ. ಶೆಟ್ಟರ್, ಟಿ ಸಿ. ಪಾಟೀಲ್, ಮಹೇಶ್ ಅಡಿವೆಪ್ಪನವರ್, ಮತ್ತು ನಿತ್ಯಾನಂದ ಕುಂದಾಪುರ,ಅಮೋಘ ಬಾದಾಮಿ, ಗುತ್ಯಪ್ಪ ಹಳೇಮನಿ, ಪತ್ರಕರ್ತ ಎಂ ಚಿರಂಜೀವಿ, ಸಿದ್ಧಾರೂಢ ಗುರಂ, ಶಿವಕುಮಾರ ಜಾದವ್. ಸೇರಿದಂತೆ ಮತ್ತಿತರ ಗಣ್ಯರು ಪದಾಧಿಕಾರಿಗಳು, ಶಾಲಾ ಶಿಕ್ಷಕರು ವೈದ್ಯಕೀಯ ತಂಡ ಉಪಸ್ಥಿತರಿದ್ದರು. ಡಾ: ಪುನೀತ್ ರಾಜಕುಮಾರ್ ಅವರ ಹುಟ್ಟು ಹಬ್ಬದ ನಿಮಿತ್ತ ಆಯೋಜಿಸಲಾಗಿದ್ದ,, ಶಿಬಿರವನ್ನು ಪಾಲ್ಗೊಂಡ ಗಣ್ಯರು ಸಾಮೂಹಿಕವಾಗಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಶಂಕರ್ ಕಣ್ಣಿನ ಆಸ್ಪತ್ರೆಯ, ವೈದ್ಯರಾದ ಶಂಕರ್, ಸ್ಥಳೀಯ ವ್ಯವಸ್ಥಾಪಕ ಪ್ರಕಾಶ್, ರವಿ ಮತ್ತಿತರ ಸಿಬ್ಬಂದಿಗಳು, ತಮ್ಮ ವೈದ್ಯಕೀಯ ಸೇವಾ ಕರ್ತವ್ಯ ಮೆರೆದರು.
ಶಿಬಿರದಲ್ಲಿ 150ಕ್ಕೂ ಹೆಚ್ಚು ನಾಗರಿಕರು ತಪಾಸಣೆಗೊಳಪಟ್ಟು, ಅದರಲ್ಲಿ 50ಕ್ಕೆ ಹೆಚ್ಚು ಫಲಾನುಭವಿಗಳು ಶಸ್ತ್ರ ಚಿಕಿತ್ಸಾ ಶಿಬಿರಕ್ಕೆ ಆಯ್ಕೆಯಾದರು, ಫಲಾನುಭವಿಗಳಿಗೆ ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುವುದು ಎಂದು ಕಾರ್ಯಕ್ರಮ ಸಂಘಟಿಕರು ತಿಳಿಸಿದರು.ಊ18-ಖಓಖ02-ನ್ಯೂಸ್. ಅಂಡ್. ಫೋಟೋ.