ಸಿರುಗುಪ್ಪ

ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ಪುಣ್ಯಸ್ಮರಣೆ

ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ಪುಣ್ಯಸ್ಮರಣೆ

ಸಿರುಗುಪ್ಪ03: ದೇಶ ಕಂಡ ಅಪ್ರತಿಮ ಧೀಮಂತ ಧೈರ್ಯವಂತ ಮಹಿಳೆ ಭಾರತದ ಪ್ರಥಮ ಮಹಿಳಾ ಪ್ರಧಾನಿ ಇಂದಿರಾಗಾಂಧಿ ಯವರ ನಾಯಕತ್ವ ಗುಣಗಳು ಇಂದಿನ ಯುವ ರಾಜಕಾರಣಿಗಳು ಮಾದರಿಯಾಗಿಸಿಕೊಳ್ಳಬೇಕು ಬಡತನ ನಿವಾರಣೆಗೆ ದೇಶದ ಅಭಿವೃದ್ಧಿಗೆ ಹಲವಾರು ಯೋಜನೆ ಗಳನ್ನು ಜಾರಿಗೊಳಿಸುವ ಮೂಲಕ ಎಲ್ಲಾ ಸಮಾಜ ದವರ ಹಿತ ಕಾಪಾಡಿದ  ಇಂದಿರಾ ಗಾಂಧೀಜಿ ಯವರು ಎಂದು ರಾಷ್ಟ್ರೀಯ ವಯಸ್ಕರ ಶಿಕ್ಷಣ ಸೆಂಟ್ರಲ್ ಕೌನ್ಸಿಲ್ ಮೈಸೂರು ಜಿಲ್ಲಾ ಸಾಕ್ಷರತಾ ಸದಸ್ಯ ಅಬ್ದುಲ್ ನಬಿ ಅಭಿಪ್ರಾಯಪಟ್ಟರು.

ನಗರದ ಇಬ್ರಾಹಿಂ ಮಂಜಿಲ್ ನಲ್ಲಿ ಅವರು ಜನಪ್ರಿಯ ಭಾರತದ   ಮಾಜಿ ಪ್ರಧಾನಿ ಇಂದಿರಾಗಾಂಧಿಜಿ ಯವರ 39ನೇ   ಪುಣ್ಯಸ್ಮರಣೆಯನ್ನು  ಅವರು ನೆನಪಿಸಿ ಸ್ಮರಿಸಿ ಗೌರವಿಸಿ ಮಾತನಾಡುತ್ತಾ ಇಂದಿರಾ ಗಾಂಧಿಯವರು ಭಾರತ ದೇಶದ ಪ್ರಧಾನಿಯಾಗಿದ್ದಾಗ ಜಾರಿಗೆ ತಂದಿರುವ ಯೋಜನೆಗಳಾದ ಗರೀಬಿ ಹಠಾವೋ ವೃದ್ಯಾಪ ವೇತನ ಬಡವರಿಗೆ ಸೂರು ಜೀತ ವಿಮುಕ್ತಿ ಕಾನೂನು ಜಾರಿ 20 ಅಂಶಗಳ ಕಾರ್ಯಕ್ರಮ ಇಂದಿಗೂ ಜನರ ಮನದಲ್ಲಿ ಉಳಿದಿವೆ ಇಂದಿರಾ ಗಾಂಧಿಯವರು ಹಾಗೂ ಅವರ ಮನೆತನವೇ ಇಡೀ ದೇಶದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿ ತಮ್ಮನ್ನು ತಾವೇ ರಾಷ್ಟ್ರಕ್ಕೆ ಅರ್ಪಿಸಿಕೊಂಡ ಮಹಾನ್  ವ್ಯಕ್ತಿಗಳಾಗಿದ್ದಾರೆ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಇಡೀ ದೇಶಾದ್ಯಂತ ಸವರ್ಾಂಗೀಣ ಅಭಿವೃದ್ಧಿಗೆ ಬೇರೂರಲು ರಾಷ್ಟ್ರಕ್ಕಾಗಿ ಸಲ್ಲಿಸಿದ ಕಾರ್ಯಗಳು ಅಪಾರ ಎಂದು ಅಬ್ದುಲ್ ನಬಿ ಅವರು ಶ್ಲಾಘಿಸಿದರು.

ಸರ್ ಖಾಜಿ ಸೈಯದ್ ಅಬ್ದುಲ್ ರಜಾಕ್ ಖಾದ್ರಿ ಅಶ್ರಫಿ ಅವರು ಮಾತನಾಡುತ್ತಾ ದೇಶಕ್ಕೆ ಇಂದಿರಾಗಾಂಧಿ ಯವರ ಕೊಡುಗೆ ಅಪಾರ ಅವರು  ಭಾರತದ ಪ್ರಧಾನಮಂತ್ರಿಯಾದ  ಈ ಸಂದರ್ಭದಲ್ಲಿ ದೇಶದ ಅಭಿವೃದ್ಧಿಗೆ ಕೈಗೊಂಡ ಯೋಜನೆಗಳು ಜನರ ಮನಸ್ಸಿನಲ್ಲಿ ಇನ್ನೂ ಹಚ್ಚ ಹಸಿರಾಗಿವೆ ಎಂದು ಖಾಜಿ ಸೈಯದ್ ಅಬ್ದುಲ್ ರಜಾಕ್ ಖಾದ್ರಿ ಆಶ್ರಫಿ ಹೇಳಿದರು .ತಾಲ್ಲೂಕು ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹಾಜಿ ಹಂಡಿ ಹುಸೇನ್ ಬಾಷಾ, ತಾಲ್ಲೂಕು ಯುವ ಕಾಂಗ್ರೆಸ್ ಉಪಾಧ್ಯಕ್ಷ ಆರ್ಕಟ್ ಎಸ್ ಅಮೀರ್ ಭಾಷ ,ನಗರಸಭಾ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಹಂಡಿ ಹಾಶಿಮ್, ಖತೀಬ್ ಜಹೀರುದ್ದೀನ್ ಬಾಬು, ಸಾಮಾಜಿಕ ಕಾರ್ಯಕರ್ತರಾದ ಹಾಜಿ ಮೊಹಮ್ಮದ್ ಇಬ್ರಾಹಿಂ, ಹಾಜಿ ಟಿ  ಜಿ ಅಬ್ದುಲ್ ಗನಿ, ಹಾಜಿ ಅಬ್ದುಲ್ ಹಮೀದ್ ಫಾರುಕಿ, ಹಾಜಿ ಖಾಲಿ ಚೀಲ ಹುಸೇನ್ ಸಾಬ್, ಮೊಹಮ್ಮದ್ ರಫೀಕ್ ,ಮೊಹಮ್ಮದ್ ನೌಶಾದ್ ಅಲಿ,ಡಾ  ಮೊಹಮ್ಮದ್ ಅಲಿ,ಅಲ್ಪಸಂಖ್ಯಾತರ ಕ್ಷೇಮಾಭಿವೃದ್ಧಿ ಸಂಘದ ತಾಲ್ಲೂಕು ಅಧ್ಯಕ್ಷ ಬಿ ಕೆ ಅಲ್ಲಾಭಕ್ಷಿ ಮತ್ತಿತರರು ಇದ್ದರು  

ಸುದ್ದಿ ಓದಿ