ಕಾಗವಾಡ

ದಿ. 13ರಂದು ಈರಗೌಡಾ ಬಸಗೌಡಾ ಪಾಟೀಲ ಪುಣ್ಯಸ್ಮರಣೆ

ದಿ. 13ರಂದು ಈರಗೌಡಾ ಬಸಗೌಡಾ ಪಾಟೀಲ ಪುಣ್ಯಸ್ಮರಣೆ

ಕಾಗವಾಡ 22: ಪರೋಪಕಾರಾಥಂರ್ ಇದಂ ಶರೀರಂ ಎನ್ನುವಂತೆ ದಿ. ಈರಗೌಡಾ ಬಸಗೌಡಾ ಪಾಟೀಲ ಅವರು ಕಳೆದ 50 ವರ್ಷಗಳಿಂದ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಂಸ್ಥೆಗಳಲ್ಲಿ ಸಕ್ರೀಯವಾಗಿ ಭಾಗವಹಿಸಿ, ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು, ಈ ಭಾಗದಲ್ಲಿ ಜನರ ಪ್ರೀತಿಗೆ ಪಾತ್ರರಾಗಿದ್ದರು ಎಂದರೆ ತಪ್ಪಾಗಲಿಕ್ಕಿಲ್ಲ. 

ಕಾಗವಾಡ ತಾಲೂಕಿನ ಜುಗೂಳ ಗ್ರಾಮದಲ್ಲಿ ದಿ. 13-7-1936 ರಂದು ಜನ್ಮತಾಳಿದ ಇವರು 23-8-2020 ರಂದು ಅಕಾಲಿಕವಾಗಿ ತಮ್ಮ 84 ನೇ ವಯಸ್ಸಿನಲ್ಲಿ ನಿಧನ ಹೊಂದಿದರು. ಲಿಂ.ಮಲ್ಲಿಕಾರ್ಜುನ ಮಹಾಸ್ವಾಮಿಗಳ ಹಾಗೂ ಲಿಂ. ಸಿದ್ಧೇಶ್ವರ ಶ್ರೀಗಳ ಅನುಯಾಯಿಗಳು, ಅಲ್ಲದೇ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆಯವರ ನಿಕಟವರ್ತಿಗಳಾಗಿದ್ದರು. 

ತಮ್ಮ 50 ವರ್ಷಗಳ ರಾಜಕೀಯ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಆರ್ಥಿಕ ಕ್ಷೇತ್ರಗಳಲ್ಲಿ ಸಕ್ರೀಯವಾಗಿ ಭಾಗವಹಿಸಿದ ಇವರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಹಾಗೂ ಕರ್ನಾಟಕ ಶಿಕ್ಷಣ ಸಮಿತಿಯಂತಹ ಹಲವಾರು ಸಂಘ ಸಂಸ್ಥೆಗಳ ಬೆಳವಣಿಗೆಗೆ ಅಡಿಪಾಯ ಹಾಕಿದ್ದರು. ಆ ಸಂಘ ಸಂಸ್ಥೆಗಳು ಇಂದು ಹೆಮ್ಮರವಾಗಿ ಬೆಳೆದು, ಅವರು ಮಾಡಿದ ಸಾಧನೆಯನ್ನು ಸಾರುತ್ತಿವೆ. 

ತಮ್ಮ ಜೀವಿತಾವಧಿಯಲ್ಲಿ ಜುಗೂಳ ಗ್ರಾಮದ ಗ್ರಾಮ ಸೇವಾ ಸಹಕಾರಿ ಸಂಘ ಈಗಿನ ಪಿಕೆಪಿಎಸ್ ಸಂಘದಲ್ಲಿ ಸತತ 12 ವರ್ಷಗಳ ಕಾಲ ಅಧ್ಯಕ್ಷರಾಗಿ ಹಾಗೂ 20 ವರ್ಷಗಳ ಕಾಲ ನಿರ್ದೇಶಕರಾಗಿ ನಿಸ್ವಾರ್ಥ ಸೇವೆ ಸಲ್ಲಿಸಿರುವುದನ್ನು ಇಲ್ಲಿ ಸ್ಮರಿಸಬಹುದು. ಅದರಂತೆ ಅಥಣಿಯ ಎಪಿಎಂಸಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದ ಅನುಭವ ಇವರದ್ದಾಗಿತ್ತು. 1984 ರಿಂದ 2005 ರ ವರೆಗೆ ಚಿಕ್ಕೋಡಿಯ ದೂಧಗಂಗಾ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ ನಿರ್ದೇಶಕರಾಗಿ ಹಾಗೂ ಒಂದು ಅವಧಿಗೆ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಇದಲ್ಲದೇ ಶೇಡಬಾಳ ಅರ್ಬನ್ ಬ್ಯಾಂಕಿನ ನಿರ್ದೇಶಕರಾಗಿ ಸುಮಾರು 25 ವರ್ಷ ಸೇವೆ ಸಲ್ಲಿಸಿದ್ದು, ಅವರ ಸಾಮಾಜಿಕ ಕಳಕಳಿಯನ್ನು ಬಿಂಬಿಸುತ್ತದೆ. 

ಗ್ರಾಮದ ಕರ್ನಾಟಕ ಶಿಕ್ಷಣ ಸಮಿತಿಯ ನಿರ್ದೇಶಕರಾಗಿ, ಶಿರಗುಪ್ಪಿಯ ಕೆಎಲ್‌ಇ ಸಂಸ್ಥೆಯ ಸ್ಥಳೀಯ ಆಡಳಿತ ಮಂಡಳಿಯ ನಿರ್ದೇಶಕರಾಗಿ, ವಿಜಯಪೂರ ಜ್ಞಾನಯೋಗಾಶ್ರಮದ ನಿರ್ದೇಶಕರಾಗಿ, ಸರ್ವ ರಂಗಗಳಲ್ಲಿಯೂ ಸೇವೆ ಸಲ್ಲಿಸಿ, ಸೈ ಎನಿಸಿಕೊಂಡಿದ್ದರು. 

ಜಾತಿ, ಮತ, ಪಂಥ ಎಂಬ ಭೇದ ಭಾವ ಎಸಗದೇ ಸರ್ವರನ್ನು ಸಮಾನ ದೃಷ್ಟಿಯಿಂದ ಕಾಣುತ್ತಾ ಜೀವನದುದ್ದಕ್ಕೂ ಪರೋಪಕಾರ, ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು, ಸುತ್ತಮುತ್ತಲಿನ ಗ್ರಾಮಗಳಲ್ಲಿ ಪ್ರಸಿದ್ಧಿಯನ್ನು ಪಡೆದುಕೊಂಡಿದ್ದರು. ಸಮಾಜ ಸೇವೆಯೇ ದೇವರ ಸೇವೆ ಎಂಬ ತತ್ವವನ್ನು ತಮ್ಮ ಜೀವನದಲ್ಲಿ ಅಳವಡಿಕೊಂಡು ದಿ. ಈರಗೌಡ ಬಸಗೌಡ ಪಾಟೀಲರು ನಿಧನರಾಗಿ ಇಂದಿಗೆ 4 ವರ್ಷಗಳು ಗತಿಸಿವೆ. ಅವರ ಸ್ಮರಣೆಯಲ್ಲಿ ಅವರ ಧರ್ಮಪತ್ನಿ ವಿಮಲಾ ಈರಗೌಡಾ ಪಾಟೀಲ, ಪುತ್ರರಾದ ಅಣ್ಣಾಸಾಬ ಈರಗೌಡಾ ಪಾಟೀಲ, ಬಾಳಾಸಾಹೇಬ ಈರಗೌಡಾ ಪಾಟೀಲ ಹಾಗೂ ಗ್ರಾಮಸ್ಥರು ಮತ್ತು ಅನೇಕ ಸಂಘ ಸಂಸ್ಥೆಗಳು ಶುಕ್ರವಾರ ದಿ. 23 ರಂದು ನಾಲ್ಕನೇ ಪುಣ್ಯಸ್ಮರಣೆ ನಿಮಿತ್ಯ ಆತ್ಮಕ್ಕೆ ಚಿರಶಾಂತಿ ಕೋರಿವೆ. 


ಸುದ್ದಿ ಓದಿ