ಡಾ. ಫ. ಗು. ಹಳಕಟ್ಟಿ ಅವರ ಪುಣ್ಯ ಸ್ಮರಣೋತ್ಸವ
ಹುಬ್ಬಳ್ಳಿ 11: ಖ್ಯಾತ ಸಂಶೋಧಕರು, ಸಾಹಿತಿ, ವಕೀಲರು, ವಚನ ಸಾಹಿತ್ಯದ ಪಿತಾಮಹ ಡಾ. ಫಕೀರಪ್ಪ ಗುರುಬಸಪ್ಪ ಹಳಕಟ್ಟಿ, (ಡಾ. ಫ. ಗು. ಹಳಕಟ್ಟಿ) ಅವರ ಪುಣ್ಯ ಸ್ಮರಣೋತ್ಸವ ಹಾಗೂ ಜಯಂತಿ ಉತ್ಸವ ನಿಮಿತ್ತ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಡಾ. ಫ. ಗು. ಹಳಕಟ್ಟಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಭಕ್ತಿಯಿಂದ ಗೌರವ ನಮನಗಳನ್ನು ಸಲ್ಲಿಸಲಾಯಿತು.
ಡಾ. ಫ. ಗು.ಹಳಕಟ್ಟಿ ಅವರು ವಚನ ಸಾಹಿತ್ಯ ಸಂರಕ್ಷಣೆ, ಸಂಶೋಧನೆ, ಲಿಂಗಾಯತ ಧರ್ಮ, ಮುಂತಾದ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಸ್ಮರಿಸಲಾಯಿತು. ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ, ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ಹೈಕೊರ್ಟ ವಕೀಲರಾದ ಕೆ.ಎಸ್. ಕೋರಿಶೆಟ್ಟರ, ಪುಣೆಯ ಶರಣ ಸಾಹಿತಿ ಡಾ. ಶಶಿಕಾಂತ ಪಟ್ಟಣ, ಮಾಜಿ ಸಭಾಪತಿಗಳು, ಹಿರಿಯರಾದ ವೀರಣ್ಣ ಮತ್ತಿಕಟ್ಟಿ, ಬಸವೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಶರಣಪ್ಪ ಕೊಟಗಿ, ಸಿದ್ದರಾಮಣ್ಣ ನಡಕಟ್ಟಿ, ಶಂಕರ ಕುಂಬಿ, ಡಾ. ವೀಣಾ ಬಿರಾದಾರ, ಪ್ರೊ ಎಸ್.ವಿ.ಪಟ್ಟಣಶೆಟ್ಟಿ, ಎಸ್.ವಿ.ಕೊಟಗಿ, ಬಿ.ಎಲ್.ಲಿಂಗಶೆಟ್ಟರ, ಆರ್.ಸಿ.ಹಲಗತ್ತಿ, ಎಂ.ಬಿ.ಕಟ್ಟಿ, ಶಿವನಗೌಡ ಪಾಟೀಲ, ಸುಧಾ, ಅಶೋಕ, ಬಸವರಾಜ ಸಾಲಿ, ಮುಂತಾದವರು ಇದ್ದರು.