ಮನರಂಜನೆ

ಕ್ಲೀನ್ ಕಾಮಿಡಿ “ಗೋವಿಂದ ಗೋವಿಂದ” ತೆರೆಗೆ ಬರಲು ಸಿದ್ಧ

ಕ್ಲೀನ್ ಕಾಮಿಡಿ “ಗೋವಿಂದ ಗೋವಿಂದ” ತೆರೆಗೆ ಬರಲು ಸಿದ್ಧ

ಬೆಂಗಳೂರು, ಸೆಪ್ಟೆಂಬರ್ 02: ಹಾಸ್ಯ ಲೇಪಿತ, ರೋಚಕ ಭರಿತ “ಗೋವಿಂದ ಗೋವಿಂದ” ಸೆನ್ಸಾರ್ ಆಗಿದ್ದು, ತೆರೆಗೆ ಬರಲು ಸಿದ್ಧವಾಗಿದೆ. 

ಶ್ರೀ ಶೈಲೇಂದ್ರ ಪ್ರೊಡಕ್ಷನ್ಸ್ ಹಾಗೂ ಎಲ್.ಜಿ. ಕ್ರಿಯೇಶನ್ಸ್ ಮತ್ತು ರವಿ ಗರಣಿ ಪ್ರೊಡಕ್ಷನ್ಸ್ ಸಹಯೋಗದೊಂದಿಗೆ ನಿರ್ಮಿಸಿರುವ ಗೋವಿಂದ  ಗೋವಿಂದ ಸದಭಿರುಚಿಯ ಕೌಟುಂಬಿಕ ಹಾಸ್ಯ ಭರಿತ ರೋಚಕ ಚಿತ್ರಎಂದು ಸೆನ್ಸಾರ್ ಮಂಡಳಿ ಸದಸ್ಯರು ಶ್ಲಾಘಿಸಿದ್ದಾರಂತೆ.

ಹಾಸ್ಯಚಿತ್ರ ಮಾಡುವುದು ಬಹಳ ಕಷ್ಟ, ಅದರಲ್ಲೂ ಕ್ಲೀನ್ ಕಾಮಿಡಿ ಮಾಡೋದು ಇನ್ನೂ ಕಷ್ಟ, ಸೆನ್ಸಾರ್ ನವರು ನಮ್ಮಚಿತ್ರಕ್ಕೆಯಾವುದೇ ಬದಲಾವಣೆ ಇಲ್ಲದೇ ಯು ಸರ್ಟಿಫಿಕೇಟ್ ನೀಡಿದೆ. ಎಂದು ನಿರ್ಮಾಪಕರಲ್ಲಿ ಒಬ್ಬರಾದ ರವಿ.ಆರ್.ಗರಣಿ ಹೇಳಿದ್ದಾರೆ.             

“ಇದು ನನ್ನ ಮೊದಲ ಚಿತ್ರ. ನನ್ನ ಬ್ಯಾನರ್ ಹೆಸರು ಹಾಗೂ ನಿರ್ಮಾಪಕರ ಹೆಸರಲ್ಲಿ ದಿಗ್ಗಜರ ಜೊತೆ ನನ್ನ ಹೆಸರು ನೋಡಿ ನನಗೆ ಬಹಳ ಸಂತೋಷ ಆಯಿತು. ಒಂದು ಒಳ್ಳೆಯ ಸಿನಿಮಾದಿಂದ ನನ್ನ ಸಿನಿ ಪಯಣ ಪ್ರಾರಂಭವಾಯಿತು” ಎಂದು ನಿರ್ಮಾಪಕ ಕಿಶೋರ್ ಹೇಳಿದ್ದಾರೆ. 

ಗೋವಿಂದ ಗೋವಿಂದ ಚಿತ್ರದಲ್ಲಿ ಸುಮಂತ್ ಶೈಲೇಂದ್ರ, ಭಾವನ, ಕವಿತಾಗೌಡ, ರೂಪೇಶ್ ಶೆಟ್ಟಿ, ಅಚ್ಯುತ್‌ಕುಮಾರ್, ಶೋಭರಾಜ್, ವಿ. ಮನೋಹರ್, ಪವನ್, ವಿಜಯ್‌ಚೆಂಡೂರ್ ಹಾಗೂ ಇನ್ನಿತರ ನುರಿತ ಕಲಾವಿದರ ದಂಡೇಇದೆ. ನಿರ್ದೇಶಕತಿಲಕ್ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದು, ಕೆ.ಎಸ್. ಚಂದ್ರಶೇಖರ್‌ಛಾಯಾಗ್ರಹಣ, ಸಿ.ರವಿಚಂದ್ರನ್ ಸಂಕಲನ, ಹಿತನ್ ಹಾಸನ್ ಸಂಗೀತ, ದೇವ್‌ರಂಗಭೂಮಿ ಸಂಭಾಷಣೆ, ಥ್ರಿಲ್ಲರ್ ಮಂಜು ಸಾಹಸ ಹಾಗೂ ಜನಾರ್ಧನ್‌ರಾಮ್‌ರವರು ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.        

ಸುದ್ದಿ ಓದಿ