ಧಾರವಾಡ - ಹುಬ್ಬಳ್ಳಿ

ಯುವ ರೆಡ್ ಕ್ರಾಸ್ ಉದ್ದೇಶಗಳನ್ನು ಮಹಾವಿದ್ಯಾಲಯಗಳು ಅನುಷ್ಠಾನಗೊಳಿಸಲಿ: ಸಂಕನೂರ

ಯುವ ರೆಡ್ ಕ್ರಾಸ್ ಉದ್ದೇಶಗಳನ್ನು ಮಹಾವಿದ್ಯಾಲಯಗಳು ಅನುಷ್ಠಾನಗೊಳಿಸಲಿ: ಸಂಕನೂರ

ಧಾರವಾಡ 20: ಶಾಂತಿ ಸಮಯದ ಚಟುವಟಿಕೆಗಳಾದ ಮಾನವೀಯ ತತ್ವ ಮತ್ತು ಮೌಲ್ಯಗಳನ್ನು ಬೆಳೆಸುವುದು, ಜನರ ಆರೋಗ್ಯ ವೃದ್ಧಿಸುವ ಕಾರ್ಯ ನಿರ್ವಹಿಸುವುದ, ಪ್ರಾಕೃತಿಕ ವಿಕೋಪಗಳ ಸಮಯದಲ್ಲಿ ಮಾನವೀಯ ನೆರವು ನೀಡುವುದು, ಆರೋಗ್ಯ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವುದು ಮತ್ತು ಸಮಾಜದ ಸ್ಥಾನವನ್ನು ಹೆಚ್ಚಿಸುವ ಕಾರ್ಯ ಚಟುವಟಿಕೆಗಳಿಗೆ ಒತ್ತು ನೀಡುವುದು ಯುವ ರಡ್ ಕ್ರಾಸ ಘಟಕದ ಮುಖ್ಯ ಉದ್ದೇಶವಾಗಿದೆ. ಇದನ್ನು ಎಲ್ಲ ಮಹಾವಿದ್ಯಾಲಯದಲ್ಲಿ ಅನುಷ್ಠಾನ ಮಾಡಬೇಕು ಎಂದು ವಿಧಾನ ಪರಿಷತ್ತಿನ ಸದಸ್ಯರಾದ ಎಸ್ ವ್ಹಿ ಸಂಕನೂರ ಹೇಳಿದರು. 

ಅವರು ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕರ್ನಾಟಕ ರಾಜ್ಯ ಶಾಖೆ, ಬೆಂಗಳೂರು ಮತ್ತು ಕವಿವಿಯ ಯುವ ರೆಡ್ ಕ್ರಾಸ್ ಘಟಕದ ವತಿಯಿಂದ ವಿಶ್ವವಿದ್ಯಾಲಯ ಮಟ್ಟದ ಮಹಾವಿದ್ಯಾಲಯಗಳ ಯುವ ರೆಡ್ ಕ್ರಾಸ್ ಕಾರ್ಯಕ್ರಮ ಅಧಿಕಾರಿಗಳಿಗೆ  ಕವಿವಿಯ ಡಾ. ಬಿ.ಆರ್‌. ಅಂಬೇಡ್ಕರ್ ಅಧ್ಯಯನ ಪೀಠ, ಪುಲೆ ಸಭಾ ಭವನದಲ್ಲಿ ಹಮ್ಮಿಕೊಂಡ ಒಂದು ದಿನದ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಯುವ ಸಮುದಾಯವನ್ನು ಯುವ ರೆಡ್‌ಕ್ರಾಸ್ ಸಂಸ್ಥೆಯ ಮೂಲ ಧ್ಯೇಯಗಳೆಂದರೆ ಮಾನವೀಯತೆ, ನಿಷ್ಪಕ್ಷಪಾತ, ತಟಸ್ಥೆ, ಸ್ವಾತಂತ್ರ್ಯ, ಏಕತೆಯ ಕಡೆಗೆ ಗಮನ ಹರಿಸಲು ಜಾಗೃತಿ ಮಾಡಿ ಶಿಕ್ಷಣ ನೀಡಬೇಕು ಎಂದು ಹೇಳಿದರು.  

ಅಧ್ಯಕ್ಷತೆಯನ್ನು ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವ ಡಾ. ಎ ಚನ್ನಪ್ಪ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ರಾಜ್ಯದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಉಪ ಸಭಾಪತಿ ಆನಂದ ಎಸ್ ಜಿಗಜಿನ್ನಿ, ಧಾರವಾಡ ಕೆ.ಎಂ.ಎಫ್ ಅಧ್ಯಕ್ಷರು ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ರಾಜ್ಯ ಪ್ರತಿನಿಧಿ ಶಂಕರ ಮುಗದ್ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಜಿಲ್ಲಾ ಘಟಕ ಧಾರವಾಡ ಇದರ ಚೇರ್ಮನ್ ಮಹಾಂತೇಶ ವೀರಾಪೂರ ಮಾತನಾಡಿದರು.ಸ್ವಯಂ ಸೇವಕ ಸಂಜನಾ ಎಸ್ ಎಮ್ ಕಾರ್ಯಕ್ರಮ ನಿರೂಪಿಸಿದರು. ಸಮನ್ವಯಾಧಿಕಾರಿ ಡಾ ಎಸ್ ಜಿ ಚಲವಾದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕವಿವಿಯ ಯುವ ರೆಡ್ ಕ್ರಾಸ್ ಘಟಕದ ಸಲಹಾ ಸಮಿತಿ ಸದಸ್ಯ ಮಾರ್ತಾಂಡಪ್ಪ ಕತ್ತಿ ಗಣ್ಯರನ್ನು ಸ್ವಾಗತಿಸಿದರು. ಗದಗದ ಜಿ.ಟಿ ಕಾಲೇಜಿನ ಪ್ರಾಚಾರ್ಯಪಿ ಜಿ ಪಾಟೀಲ ವಂದಿಸಿದರು.ಹುಬ್ಬಳ್ಳಿಯ ಹಿರಿಯ ವೈದ್ಯ ಡಾ. ವಿ.ಬಿ. ನಿಟಾಲಿ ಅವರು ಪರಿಸರ ಮತ್ತು ಆರೋಗ್ಯದ ಮಹತ್ವ ಕುರಿತು, ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಧಾರವಾಡದ ಪ್ರಧಾನ ಕಾರ್ಯದರ್ಶಿ ಡಾ.ಉಮೇಶ್ ಹಳ್ಳಿಕೇರಿ ಮತ್ತು ಡಾ. ಮೋಹನಕುಮಾರ ಅವರು ನಿತ್ಯ ಜೀವನದಲ್ಲಿ ಮಾರಕವಾದ ಕ್ಯಾನ್ಸರ್ ಬಗ್ಗೆ ಹಾಗೂ ಸಂಪನ್ಮೂಲ ವ್ಯಕ್ತಿ ಪ್ರವೀಣ ಹಿರೇಮಠ ಅವರು ಪ್ರಥಮ ಚಿಕಿತ್ಸೆಯ ಪ್ರಯೋಜನಗಳ ಬಗ್ಗೆ ಉಪನ್ಯಾಸ ನೀಡಿದರು.  

ಗದಗ, ಕಾರವಾರ ಮತ್ತು ಧಾರವಾಡದ ಸುಮಾರು 85ಕ್ಕೂ ಹೆಚ್ಚು ಮಹಾವಿದ್ಯಾಲಯದ ಯುವ ರೆಡ್ ಕ್ರಾಸ್‌ನ ಕಾರ್ಯಕ್ರಮ ಅಧಿಕಾರಿಗಳು ಭಾಗವಹಿಸಿದ್ದರು. 


ಸುದ್ದಿ ಓದಿ