ರಾಜ್ಯದಲ್ಲಿ ಸಹಕಾರಿ ಸಂಘಗಳು ನಿರ್ಭಯದಿಂದ ಕಾರ್ಯನಿರ್ವಹಿಸುತ್ತಿವೆ: ಸವದಿ
ಕಾಗವಾಡ 04: ಸಹಕಾರ ಕ್ಷೇತ್ರಗಳಲ್ಲಿ ಸರ್ಕಾರದ ಹಸ್ತಕ್ಷೇಪ ಆಗುತ್ತಿದ್ದರಿಂದ ಆಗ ಸಹಕಾರ ಕ್ಷೇತ್ರದವರು, ತೊಂದರೆ ಅನುಭವಿಸುತ್ತಿದ್ದರು. ಸನ್ 2008ರಲ್ಲಿ ಸಹಕಾರ ಸಚಿವ ಅಧಿಕಾರ ಸ್ವೀಕರಿಸಿದ ಬಳಿಕ ವೈದ್ಯನಾಥ ವರದಿ ಆಯೋಗ ಜಾರಿಗೆ ತಂದಿದ್ದರಿಂದ ಕ್ಷೇತ್ರದಲ್ಲಿ ಹಸ್ತಕ್ಷೇಪ ನಿಂತುಹೋಗಿದೆ. ಇದರಿಂದ ರಾಜ್ಯದಲ್ಲಿ ಸಹಕಾರಿ ಸಂಘಗಳು ನಿರ್ಭಯದಿಂದ ಕಾರ್ಯನಿರ್ವಹಿಸುತ್ತಿವೆ ಎಂದು ರಾಜ್ಯದ ಮಾಜಿ ಡಿಸಿಎಂ ಮಾಜಿ ಸಹಕಾರ ಸಚಿವರಾದ ಲಕ್ಷ್ಮಣ ಸವದಿ ಶೇಡಬಾಳದಲ್ಲಿ ಹೇಳಿದರು.
ಶೇಡಬಾಳದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ 75ವರ್ಷ ಪೂರ್ಣಗೊಂಡಿದರಿಂದ ವಜ್ರ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾಜಿ ಸಚಿವ ಲಕ್ಷ್ಮಣ ಸವದಿ ಮಾತನಾಡುತ್ತಿದ್ದರು.
ರಾಜ್ಯದ ಸಹಕಾರಿ ಸಂಘಗಳ ಸಪ್ತಾಹ “ಕೂಡಲಸಂಗಮದಲ್ಲಿ” ಹಮ್ಮಿಕೊಳ್ಳಲಾಗಿತ್ತು ಆಲ್ಲಿಯ ಸಮಾರಂಭದಲ್ಲಿ ರಾಜ್ಯದ ಎಲ್ಲ ಸರ್ಕಾರಿ ಸಂಸ್ಥೆಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವು ಘೋಷಣೆ ಮಾಡಲಾಗಿತ್ತು. ಅದೇ ಮುಂದುವರೆದು ಶೂನ್ಯ ಬಡ್ಡಿದರದಿಂದ ಸಾಲ ನೀಡಲಾಯಿತು. ಅನೇಕ ರೈತರುಗಳಿಗೆ ಇದರ ಲಾಭವಾಯಿತು. ಅಷ್ಟೇ ಅಲ್ಲದೆ ಅನೇಕ ಸಂಘ-ಸಂಸ್ಥೆಗಳು ಆರ್ಥಿಕ ಹಾನೆಯಲ್ಲಿದ್ದವು, ಇಂಥಾಹ ಸಂಘಗಳ ಸಾಲಗಳು ಸರಕಾರ ಹಣ ಬರಿಸಿದ್ದು. ಇದರಿಂದ ನೂರಾರು ಸಂಘಗಳು ಪುನರ್ಜೀವನ ಗೊಂಡಿವೆ.
ಶೇಡಬಾಳದ ಪ್ರಾಥಮಿಕ ಸಹಕಾರಿ ಸಂಘ ತನ 75ವರ್ಷ ಪೂರ್ಣಗೊಳಿಸಿದು, ಎಲ್ಲಾ ಸದಸ್ಯರಿಗೆ ಸಹಾಯ ಹಸ್ತ ನೀಡಿದೆ. ಈ ಸಂಘದ ಬೆನ್ನೆಲುವಾಗಿ ನಿಲ್ಲುತ್ತೇನೆ. ಯಾವುದೇ ಕುಂದುಕೊರತೆ ಬಂದರು ನಾನು ಸಹಕಾರ ನೀಡಲು ಸಿದ್ಧ ಎಂದು ಲಕ್ಷ್ಮಣ ಸವದಿ ಹೇಳಿದರು.
ಸಮಾರಂಭದ ಅಧ್ಯಕ್ಷರು ಹಾಗೂ ಶಾಸಕ ಶ್ರೀಮಂತ ಪಾಟೀಲರು ಮಾತುನಾಡಿ ಸಹಕಾರ ಸಂಸ್ಥೆಗಳಿಂದ ಗ್ರಾಮದ ಹಾಗೂ ರೈತರ ಅಭಿವೃದ್ಧಿ ಸಾಧ್ಯವಿದೆ. ಎಂದು ಹೇಳಿ ಶೇಡಬಾಳ ಜನರು ನನ್ನ ಮೇಲೆ ಇಟ್ಟ ಪ್ರೀತಿ, ವಿಶ್ವಾಸ ಅಪಾರವಿದೆ ಹಾಗೂ ಗ್ರಾಮದ ಯಾವದೆ ಸಮಸ್ಯೆಗಳಿಗೆ ನಾನು ಸ್ಪಂದಿಸುತ್ತೇನೆ ಎಂದರು.
ಮಾಜಿ ಶಾಸಕರಾದ ಮೋಹನರಾವ್ ಶಹಾ, ಕೆ.ಪಿ. ಮಗೆಣ್ಣವರ, ಅಥಣಿ ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಶೀತಲ್ ಪಾಟೀಲ್ ಸಂಸ್ಥೆಗೆ ಶುಭ ಹಾರೈಸಿದರು.
75 ವರ್ಷದ ನಡೆದ ಬಂದ ದಾರಿ ಬಗ್ಗೆ ಸದಸ್ಯ ಶೀತಲ ಮಾಲಗಾಂವೆ ಇವರು ಸಂಗ್ರಹಿಸಿದ ಸ್ಮರಣಿಕೆ (ಸಂಚಿಕೆ) ಬಿಡುಗಡೆ ಶೀತಲ್ ಪಾಟೀಲ್ ನೆರವೇರಿಸಿದರು.
75 ವರ್ಷ ಪೂರ್ಣಗೊಳಿಸಿದ 55 ಸದಸ್ಯರಿಗೆ ನೆನಪಿನ ಕಾಣಿಕೆ ನೀಡಿ ಅತಿಥಿಗಳಿಂದ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ರಾಯಬಾಗ ಉದ್ದಿಮೆಗಳಾದ ಕೈಲಾಶ ಪುರಮವಾರ, ಮಾಜಿ ಜಿಪಂ ಸದಸ್ಯ ಅಜೀತ್ ಚೌಗಲಾ, ವಿಜಯ್ ಅಕಿವಾಟೆ, ವಿನಾಯಕ ಬಾಗಡಿ, ಬಿಡಿಸಿಸಿ ಬ್ಯಾಂಕಿನ ಕಾಗವಾಡ ವಿಭಾಗದ ನೀರೀಕ್ಷಕ ಹನುಮಂತ್ ಸಂಕ್ರಟ್ಟಿ ಸೇರಿದಂತೆ ಅನೇಕರಿದ್ದರು.
ಸಂಘದ ಅಧ್ಯಕ್ಷ ಅಜೀತ್ ಸವದತ್ತಿ, ಸಂಚಾಲಕರಾದ ವಿನೋದ್ ಬರಗಾಲೆ, ಕುಮಾರ ಬರಗಾಲೆ, ಸುನಿಲ್ ಪಾಟೀಲ್, ಶ್ರೀಕಾಂತ್ ಮಾಲಗಾಂವೆ, ಅಶೋಕ್ ಮಾಕಣ್ಣವರ, ದೇವೇಂದ್ರ ಚೌಗಲಾ, ಅಣ್ಣಾಸಾಬ್ ಖಾಂಡೆ, ದೀಲೀಪ್ ಮಾಳಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅದೃಶಪ್ಪ ಕುಂಬಾರ, ಅಣ್ಣಾಸಾಬ ಸಾಬನ್ನವರ ಮತ್ತು ಇತರರು ವಿಶೇಷವಾಗಿ ಸಹಕಾರ ನೀಡಿದರು.