ಇಂಡಿ

ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮ ....

ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮ ....

ಇಂಡಿ: ಮಗುವಿನ ಕಲಿಕೆಯು ಸಂಪೂರ್ಣವಾಗಿ ಅನುಭವ ಜನ್ಯವಾಗಿರುವುದರ ಜೊತೆಗೆ ಮಗು ತನ್ನನ್ನು ತಾನು ಸ್ವತಃ ತೊಡಗಿಸಿಕೊಳ್ಳವ ಸ್ವ ಕಲಿಕೆಯ ಕಾರ್ಯಕ್ರಮ ಇದಾಗಿದ್ದು, ರಾಜ್ಯದ ಸರಕಾರಿ ಶಾಲೆಯ 4ರಿಂದ 9ನೇ ತರಗತಿಯ ಮಕ್ಕಳು ಈ ಹಬ್ಬದ ಸಂಭ್ರಮದಲ್ಲಿ ತಮ್ಮನ್ನು ತಾವು ಮೈಮರೆತು ನಲಿಯುತ್ತಾ ಕಲಿಯುವ ವಾತಾವರಣ ಸೃಷ್ಟಿಯಾಗಲಿದೆ ಎಂದು ಕಲಿಕಾ ಹಬ್ಬ ಕಾರ್ಯಕ್ರಮದ ತಾಲೂಕಾ ನೋಡಲ್ ಅಧಿಕಾರಿ ಅಲ್ಲಾಭಕ್ಷ ಜಿ. ಚೌಧರಿ ಹೇಳಿದರು. 

ಶನಿವಾರ ತಾಲೂಕಿನ ಹಳಗುಣಕಿ ಗ್ರಾಮದ ಕೆಪಿಎಸ್ ಶಾಲೆಯಲ್ಲಿ ಹಮ್ಮಿಕೊಂಡ ಚಿಕ್ಕಬೆವನೂರ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಪರಸ್ಪರ ಚರ್ಚೆಗಳು, ಮುಕ್ತ ಸಂವಾದಗಳು, ಹಾಡು, ನೃತ್ಯ, ನಾಟಕಗಳಂತಹ ಸುಮನೋಹರ ವಿಧಾನಗಳಿಂದ ಶಿಕ್ಷಕರ ನೆರವಿನಿಂದ ಮಗುವೇ ಸ್ವತಃ ವಿಮರ್ಶಾತ್ಮಕ ಚಿಂತನೆಗಳನ್ನು ಬೆಳೆಸಿಕೊಂಡು, ಪ್ರಶ್ನೆ ಮಾಡುವುದನ್ನು ಕಲಿಕೆಯ ಆಸ್ಥೆಯ ಭಾಗವನ್ನಾಗಿಸಿಕೊಳ್ಳುವ ಮೂಲಕ ವೈಜ್ಞಾನಿಕ ಮನೋಧರ್ಮವನ್ನು ಬೆಳೆಸಿಕೊಳ್ಳ್ಳಲಿದ್ದಾರೆ ಎಂದು ಹೇಳಿದರು. 

ಬಿ.ಆರ್‌.ಪಿ ಬಸವರಾಜ ಗೊರನಾಳ ಮಾತನಾಡಿ, ಕಲಿಕಾ ಹಬ್ಬ ಎಂಬುದು ಸಂಪೂರ್ಣವಾಗಿ ಮಗುವಿನ ಒಂದು ಸ್ವಕಲಿಕೆಯ ಕಲಿಕಾ ವಿಧಾನವಾಗಿದೆ. ಮಕ್ಕಳು ಸಂಭ್ರಮದಿಂದ, ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ಒಡನಾಟದ ಕಲಿಕೆಯ ಮೂಲಕ ಪ್ರಶ್ನೆಗಳು, ಪ್ರಯೋಗಗಳು, ವೀಕ್ಷಣೆಗಳು ಹೀಗೆ ಅನುಭಾವಾತ್ಮಕವಾಗಿ ಕಲಿಯಲಿದ್ದಾರೆ ಎಂದು ಹೇಳಿದರು. 

ಸಿ.ಆರ್‌.ಪಿ ದಾದಾ ಶ್ಯಾಮಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಬಲಾದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುನಂದಾ ಬಿರಾದಾರ ಉದ್ಘಾಟಿಸಿದರು. ಪ್ರಾಚಾರ್ಯ ಬಿ.ಬಿ. ಚವ್ಹಾಣ ಅಧ್ಯಕ್ಷತೆ ವಹಿಸಿದ್ದರು. ಎಸ್‌.ಬಿ. ಮಕಾನದಾರ ಮಾತನಾಡಿದರು. ಎಸ್‌.ಡಿ.ಎಂ.ಸಿ ಅಧ್ಯಕ್ಷ ಸಿದ್ದನಗೌಡ ಪಾಟೀಲ, ಸುನೀಲ ಬಿರಾದಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 

ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳಾದ ಸುನೀತಾ ದೊಡಮನಿ, ಸತ್ಯಪ್ಪ ಕಪನಿಂಬರಗಿ, ಮಹೇಶ್ವರಿ ಜವಳಗಿ ಭಾಗವಹಿಸಿದ್ದರು. 

ಶಿಕ್ಷಕ ಶ್ರೀಶೈಲ ಕರ್ಜಗಿ ಸ್ವಾಗತಿಸಿದರು. ಗುರು ಬೋಸಗಿ ನಿರೂಪಿಸಿದರು. ಸಂಗಮೇಶ ಬಂಡೆ ವಂದಿಸಿದರು. 


ಸುದ್ದಿ ಓದಿ