ಮನುಷ್ಯ ಸ್ವಾರ್ಥದಿಂದಲೇ ಹವಾಮಾನ ವೈಪರಿತ್ಯ: ಡಾ.ಮಲ್ಲಿಕಾರ್ಜುನಶ್ರೀ
ಶಿಗ್ಗಾವಿ 19: ಮನುಷ್ಯ ಭೂ ತಾಯಿಯ ವಡಲನ್ನು ಕೊರೆದು, ಪ್ರಕೃರ್ತಿ ಸಂಪತ್ತನ್ನು ನಾಶಪಡಿಸಿಕೊಂಡು, ಕಾಯಕವನ್ನು ಮರೆತು ಬಾಳುತ್ತಿರುವುದರಿಂದಲೇ ಹವಾಮಾನ ವೈಪರಿತ್ಯ ಕಾಣುವಂತಾಗಿದೆ ಎಂದು ಶಿವಮೊಗ್ಗ ಮುರುಘರಾಜೇಂದ್ರ ಸಂಸ್ಥಾನಮಠದ ಡಾ.ಮಲ್ಲಿಕಾರ್ಜುನ ಸ್ವಾಮಿಗಳು ಹೇಳಿದರು.
ತಾಲೂಕಿನ ಸದಾಶಿವಪೇಟೆಯ ವಿರಕ್ತಮಠದ ಲಿಂ. ಗದಿಗೇಶ್ವರರ 494 ನೇ ಹಾಗೂ ಲಿಂ. ಬಸವರಾಜೇಂದ್ರ ಶಿವಯೋಗಿಗಳ 419 ನೇ ಪುಣ್ಯ ಸ್ಮರಣೋತ್ಸವದ ಅಂಗವಾಗಿ ನಡೆದ ಶರಣ ತತ್ವ ಚಿಂತನಾಗೋಷ್ಠಿ ಕಾರ್ಯಕ್ರಮವನ್ನುದ್ದೇಶಿಸಿ ಆಶೀರ್ವಚನ ನೀಡಿದ ಶ್ರೀಗಳು, ಭೂ ತಾಯಿಗೆ 20 ಕೆಜಿ ಬೀಜ ಬೀತ್ತಿದರೆ, 20 ಕ್ವಿಂಟಲ್ ಫಸಲು ನೀಡುವಳು. ಆದರೆ ಮನುಷ್ಯ ಪರಿಸರವನ್ನು ನಾಶ ಮಾಡುವ ಮೂಲಕ ಸ್ವಾರ್ಥತೆ ಮೆರೆಯುತ್ತಿರುವುದು ಖೇದಕರ ಸಂಗತಿಯಾಗಿದೆ ಎಂದು ವಿಷಾದ ವ್ಯಕ್ತ ಪಡಿಸಿದರು.
ಮಠ ಮಾನ್ಯಗಳ ಮಠಾಧೀಶರು ಸನಾತನ ಹಿಂದು ಸಂಸ್ಕೃತಿ, ಸಂಸ್ಕಾರ, ಪರಂಪರೆಯನ್ನು ಮುಂದುವರೆಸಿಕೋಂಡು ಬರುವಮೂಲಕ ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡಿಕೋಂಡು ಬರುತ್ತಿದ್ದಾರೆ. ಆದರೆ ಭಕ್ತಸಮೂಹ ಮಠ ಮಾನ್ಯಗಳಿಂದ ವಿಮೂಖರಾಗುತ್ತಾ ಬರುತ್ತಿರುವುದು ವಿಷಾದದ ಸಂಗತಿಯಾಗಿದೆ. ಲಿಂ.ಗದಿಗೇಶ್ವರ ಶ್ರೀಗಳು ಕೈಲಾಸಕ್ಕೆ ಹೋಗುವಾಗ ಏನನ್ನು ತೆಗೆದುಕೋಂಡು ಹೋಗಿಲ್ಲ. ಆದರೆ ಮಠದ ಪರಂಪರೆಯನ್ನು ಸಮಾಜದಲ್ಲಿ ಬಿತ್ತಿ ಹೋಗಿದ್ದಾರೆ. ಅದರ ಫಸಲನ್ನು ಉಳಿಸಿಕೋಂಡು ಬರಬೇಕಾದ ಜವಾಬ್ದಾರಿ ಸಮಸ್ತ ಭಕ್ತ ಸಮೂಹದ ಮೇಲಿದೆ ಎಂದು ಹೇಳಿದರು.
ಹತ್ತಿಮತ್ತೂರ ವಿರಕ್ತಮಠದ ನಿಜಗುಣ ಶಿವಯೋಗಿಗಳು ಮಾತನಾಡಿ, ಶಿವಯೋಗವನ್ನು ಸಂಪಾದಿಸಿ ಸಮಾಜದ ಹಿತಚಿಂತನೆಗೆ ಬಾಳಿ ಬದುಕಿದವರು, ಜ್ಞಾನ ದಾಸೋಹ, ಅನ್ನ ದಾಸೋಹ ಮುಂದುವರೆಸಿಕೋಂಡು ಬರುವಮೂಲಕ ಸಮಾಜವನ್ನು ಸರಿದಾರಿಗೆ ಕೋಂಡೋಯ್ಯುವ ಕೇಲಸವನ್ನು ಶಿವ, ಶರಣ, ಸಂತ, ಮಠಾಧೀಶರು ಮಾಡಿಕೋಂಡು ಬರುತ್ತಿದ್ದಾರೆ. ಹುಟ್ಟು ಸಾವುಗಳ ಮಧ್ಯ ಬದುಕನ್ನು ಸಾರ್ಥಕ ಪಡೆಸಿಕೋಂಡವರು ಲಿಂ. ಕತೃ ಗದಿಗೇಶ್ವರ ಶ್ರೀಗಳಾದರೆ, ಪ್ರಸ್ತುತ ಪೀಠಾಧಿಪತಿಗಳು ಕಠೋರ ಹೃದಯದವರಾದರೂ ಹೃದಯ ವೈಶಾಲ್ಯತೆಯನ್ನು ಹೋಂದಿದವರಾಗಿದ್ದಾರೆ ಎಂದು ಹೇಳಿದರು.
ದೇಸಾಯಿಮಠದ ಮಹಾಂತಸ್ವಾಮಿಗಳು ಮಾತನಾಡಿದರು. ಚನಬಸಯ್ಯ ಪ್ರಭಯ್ಯನವರಮಠ ಪ್ರಾಸ್ತಾವಿಕ ನುಡಿನಮನ ಸಲ್ಲಿಸಿದರು. ಸಭೆಯಲ್ಲಿ ಪಿಯು ನಲ್ಲಿ ಹೆಚ್ಚುಅಂಕ ಪಡೆದು ಪಾಸಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ಸುರೇಶ ಗವಾಯಿ ಹಾಗು ಶಿವಯ್ಯ ಇಟಗಿಮಠ ರವರಿಂದ ಸಂಗೀತ ಸೇವೆ ನಡೆಯಿತು.
ಶ್ರೀಮಠದ ಪೀಠಾಧಿಪತಿ ಗದಿಗೇಶ್ವರ ಸ್ವಾಮಿಜಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸವಣೂರ ಅಡವಿಸ್ವಾಮಿಮಠದ ಕುಮಾರ ಮಹಾಸ್ವಾಮಿಜಿ, ಶಿಗ್ಗಾವಿ ಸಂಗನಬಸವ ಸ್ವಾಮಿಜಿ ಮುಖಂಡರಾದ ಸಂಗಪ್ಪ ವಡವಿ, ಚಂದ್ರಶೇಖರ ಛಬ್ಬಿಮಠ, ಶಿವಕುಮಾರ ಅಡವಿಸ್ವಾಮಿಮಠ, ಗದಿಗೇಪ್ಪ ಗಂಗೂರ, ಎ.ಸಿ.ಪಾಟೀಲ, ವೀರಣ್ಣ ನೇಕಾರ ಗಿರಿರಾಜ್ ದೇಸಾಯಿ ಸೇರಿದಂತೆ ಇತರರು ಇದ್ದರು. ದುಂಡಪ್ಪ ಮಾಸನಕಟ್ಟಿ ನಿರೂಪಿಸಿದರು.