ಪತಂಜಲಿ ಯೋಗ ಸಮಿತಿಯಿಂದ ಸ್ವಚ್ಛತಾ ಕಾರ್ಯ
ರಾಣೇಬೆನ್ನೂರು೦೪: ಸಮಾಜದಲ್ಲಿ ಸ್ವಾಸ್ಥ ಮತ್ತು ಸುಂದರ ಪರಿಸರ ನಿರ್ಮಾಣವಾದಾಗ ಮಾತ್ರ ಸದಾಕಾಲವು ಆರೋಗ್ಯವೇತ ಬದುಕನ್ನು ಸಾಗಿಸಲು ಸಾಧ್ಯವಾಗುವುದು ಎಂದು ಜಿಲ್ಲಾ ಪತಂಜಲಿ ಯೋಗ ಸಮಿತಿಯ ಅಧ್ಯಕ್ಷ ರವೀಂದ್ರ ಬಿಜಾಪುರ ಹೇಳಿದರು. ಅವರು ಅ. 2ರಂದು ಇಲ್ಲಿನ ಚೋಳಮರಡೇಶ್ವರ ನಗರದ ಶ್ರೀ ಮಾರುತಿ ದೇವಸ್ಥಾನ ಆವರಣದಲ್ಲಿ ಪತಂಜಲಿ ಯೋಗ ಸಮಿತಿ, ಭಾರತ್ ಸ್ವಾಭಿಮಾನ ಟ್ರಸ್ಟ್ ಆಯೋಜಿಸಿದ್ದ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಿ ಅವರ ಜನ್ಮದಿನೋತ್ಸವದ ನಿಮಿತ್ತ ಆಯೋಜಿಸಿದ್ದ ಪರಿಸರ ಸ್ವಚ್ಛತಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಮ್ಮ ಪರಿಸರ,ಸುತ್ತಮುತ್ತಲ ವಾತಾವರಣ ಸ್ವಚ್ಛವಾಗಿದ್ದರೆ ಯಾವುದೇ ರೋಗಾದಿಗಳು ಬರುವುದಿಲ್ಲ, ಸಮಾಜದಲ್ಲಿ ಬದುಕುವ ಪ್ರತಿಯೊಬ್ಬ ಮನುಷ್ಯನು ಇಂತಹ ಸೇವಾ ಕಾರ್ಯದ ಮೂಲಕ ಯೋಗ ಧ್ಯಾನ ಪ್ರಾಣಾಯಾಮ ಅಳವಡಿಸಿಕೊಳ್ಳಬೇಕಾದ ಇಂದಿನ ಅಗತ್ಯವಿದೆ ಎಂದರು. ಪತಂಜಲಿ ಸಮಿತಿಯ ಮುಖಂಡರಾದ ಎಂ.ಬಿ. ಮೋಟಳ್ಳಿ, ಕೆ.ಜಿ.ದಿವಾಕರ ಮೂರ್ತಿ, ಗಿರೀಶ್ ಬೀರಾಳ್, ಮಹೇಶ್ವರಪ್ಪ ಜಾಡರ್, ಸುವರ್ಣಮ್ಮ ಭಾನುವಳ್ಳಿ ಕಮಲಾ ಬಣಕಾರ್, ವೀರೇಂದ್ರ ಬಾಸೂರ, ಪ್ರಕಾಶ್ ಪೂಜಾರ್, ಗೌರಮ್ಮ ಮಾಳಗಿ, ಹೇಮಮ್ಮ ಹೊಟ್ಟಿಗೌಡರ, ಸುಧಾ ಭರಮ ಗೌಡರ, ಆರ್ ಬಸಮ್ಮ, ಎಸ್ ಬಿ.ಹರಿಹರ, ಅನ್ನಪೂರ್ಣಮ್ಮ ಬಣಕಾರ್ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಯೋಗ ಗುರುಗಳು ಯೋಗ ಸಾಧಕರು ಪಾಲ್ಗೊಂಡಿದ್ದರು