ಸ್ವಚ್ಛತೆ ಹಾಗೂ ಸಾರ್ವಜನಿಕರಿಗೆ ಕಾನೂನು ಅರಿವು ನೆರವು ಕಾರ್ಯಕ್ರಮ
ಹೂವಿನಹಡಗಲಿ 28; ಇಲ್ಲಿನ ತಾಲೂಕು ಕಾನೂನು ಸೇವೆ ಸಮಿತಿ, ವಕೀಲರ ಸಂಘ ತಾಲೂಕ ಆಡಳಿತ ಪುರಸಭೆ ಹಡಗಲಿ ಆಶ್ರಯದಲ್ಲಿ ಸ್ವಚ್ಛತೆ ಕಾರ್ಯಕ್ರಮ ಹಾಗೂ ಸಾರ್ವಜನಿಕರಿಗೆ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ನ್ಯಾಯಾಲಯದ ಆವರಣದಲ್ಲಿ ಜರುಗಿತು.
ನ್ಯಾಯಾಧೀಶರಾದ ಅಕ್ಷತಾ ಟಿ. ಕಾರ್ಯಕ್ರಮ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಜಿ ವಸಂತ್ ಕುಮಾರ್ ವಕೀಲರ ಸಂಘದ ಅದ್ಯಕ್ಷ ಜಿ.ವಸಂತ ಅದ್ಯಕ್ಷತೆ ವಹಿಸಿದ್ದರು. ಪುರಸಭೆ ಕಾರ್ಮಿಕರು ಸ್ವಚ್ಛತೆಯನ್ನು ಮಾಡಲಾಯಿತು. ಜ್ಯೋತಿ ಮಲ್ಲಣ್ಣ. ಡಿ ಸಿದ್ದನಗೌಡ. ಅಂಜನಪ್ಪ .ಹೊಸಮನಿ.ಎ. ಕೊಟ್ರೇಶ್. ಪುರಸಭೆ ಮುಖ್ಯಾಧಿಕಾರಿ ಇಮಾಮ್ ಸಾಬ್, ಡಾ. ಶಿವಕುಮಾರ್. ಡಾ.ದರ್ಶನ. ವಿಕಾಸ್ ಅಂಗಡಿ ವೈದ್ಯಾಧಿಕಾರಿಗಳು. ಗುಡೆಕೋಟೆ ರಾಜೇಂದ್ರ ಹಿರಿಯ ಆರೋಗ್ಯ ನೀರೀಕ್ಷಕರು ಹಾಗೂ ಆ ಆಶಾ ಕಾರ್ಯಕರ್ತೆಯರು. ಸಲೀಂ ತಾಸಿಲ್ದಾರ್ ಅವರು ನಾಗರಾಜ್ ಎಚ್ ಹಿರಿಯ ಆಡಳಿತ ಅಧಿಕಾರಿ ಹಾಗೂ ನ್ಯಾಯಾಲಯದ ಸಿಬ್ಬಂದಿ ವರ್ಗ ಹಾಗೂ ವಕೀಲರ ಸಂಘದ ಪದಾಧಿಕಾರಿಗಳು ಸರ್ವ ಸದಸ್ಯರು ಮತ್ತು ಪೊಲೀಸ್ ಇಲಾಖೆಯ ಸಿಬ್ಬಂದಿ ಹಾಗೂ ಪುರಸಭೆ ಕಾರ್ಮಿಕರು ಹಾಜರಿದ್ದರು. ಬೀರಬ್ಬಿ ಮಹೇಶ್ ನಿರೂಪಣೆ ಮಾಡಿದರು.