ಪಟ್ಟಣ ಪಂಚಾಯತ ಗಟಾರುಗಳ ಸ್ವಚ್ಛತೆ ಕಾರ್ಯ
ಕಾಗವಾಡ 31: ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಡೆಂಗ್ಯೂ ಮುನ್ನಚ್ಚರಿಕೆ ಹರಡದಂತೆ ಪಟ್ಟಣದ ಗಟಾರುಗಳನ್ನು ಜೊತೆಗೆ ಪಟ್ಟಣದ ಸ್ವಚ್ಛತೆಗಾಗಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಾಧಿಕಾರಿ ಕೆ.ಕೆ. ಗಾವಡೆ ತಿಳಿಸಿದ್ದಾರೆ.
ಅವರು, ಶನಿವಾರ ದಿ. 31 ರಂದು ಪಟ್ಟಣದಲ್ಲಿ ತಾವೇ ಖುದ್ದಾಗಿ ಮುಂದೆ ನಿಂತು ಗಟಾರುಗಳನ್ನು ಸ್ವಚ್ಛಗೊಳಿಸುತ್ತಿರುವ ಕಾರ್ಯವನ್ನು ವಿಕ್ಷಿಸಿ, ಮಾತನಾಡುತ್ತಿದ್ದರು. ತಾಲೂಕಿನಲ್ಲಿ ಡೆಂಗ್ಯೂ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಮುಂಜಾಗ್ರತೆ ಅವಶ್ಯಕವಾಗಿದೆ.
ಪಟ್ಟಣದ ನಿವಾಸಿಗಳು ತಮ್ಮ ಮನೆ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿಟ್ಟುಕೊಂಡು, ಅಕ್ಕಪಕ್ಕದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ನೀರನ್ನು ಕಾಯಿಸಿ ಕುಡಿಯಬೇಕು. ಮತ್ತು ಪಟ್ಟಣದ ಸ್ವಚ್ಛತೆಗಾಗಿ ನಾಗರೀಕರು ಪಟ್ಟಣ ಪಂಚಾಯತಿಯೊಂದಿಗೆ ಸಹಕರಿಸಬೇಕೆಂದು ವಿನಂತಿಸಿದ್ದಾರೆ.