ಪೌರ ಕಾರ್ಮಿಕರ ಮುಷ್ಕರ, ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ
ರಾಣೆಬೆನ್ನೂರು 30: ಕರ್ನಾಟಕ ರಾಜ್ಯ ಪೌರ ನೌಕರರ ಸಂಘವು ನೀಡಿದ ಕರೆಯ ಮೇರೆಗೆ, ವಾಣಿಜ್ಯ ನಗರದ ನಗರಸಭೆಯ ಪೌರಕಾರ್ಮಿಕರು, ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಳೆದ 28ರಿಂದ ನಗರಸಭೆ ಎದುರುಗಡೆ ಕಪ್ಪು ಬಟ್ಟೆ ಧರಿಸಿ ಮುಷ್ಕರ ಆರಂಭಿಸಿದ್ದಾರೆ. ಈ ಕುರಿತು ಪೌರಾಯುಕ್ತರಾದ ಉದಯಕುಮಾರ್ ಬಿ.ಟಿ. ಅವರಿಗೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಉಲ್ಲೇಖಿಸಲಾದ ಮನವಿ ಪತ್ರವನ್ನು ಸಲ್ಲಿಸಿದ ಪೌರಸೇವಾ ನೌಕರರ ಸಂಘದ ತಾಲೂಕು ಅಧ್ಯಕ್ಷ ಏಳುಕೋಟೆಪ್ಪ ಸಿ. ಗೋಣಿ ಬಸಮ್ಮನವರ್ ಅವರು, ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರನ್ನು ಖಾಯಂಗೊಳಿಸಲು ಕ್ರಮ ಕೈಗೊಳ್ಳಬೇಕು,ರಾಜ್ಯದಲ್ಲಿರುವ ಎಲ್ಲಾ ನಗರಪಾಲಿಕೆ, ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಪೌರಕಾರ್ಮಿಕರಾಗಿ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲರಿಗೂ, ಸರಕಾರಿ ನೌಕರರಿಗೆ ಅನ್ವಯವಾಗುವಂತೆ, ತಮ್ಮನ್ನು ಸಹ ಕಾಯಂಗೊಳಿಸಲು, ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಸಲ್ಲಿಸಿರುವ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಎಂದಿನಿಂದಲೂ ನೀರು ಸರಬರಾಜು ಸಹಾಯಕರು,ದಿನಗೂಲಿ, ಕ್ಷೇಮಾಭಿವೃದ್ಧಿ, ಕನಿಷ್ಠ ವೇತನ,ಸಮಾನ ಕೆಲಸಕ್ಕೆ ಸಮಾನ ವೇತನ, ಗುತ್ತಿಗೆ ಹೊರಗುತ್ತಿಗೆ ಅಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರನ್ನು ವೀಲೀನಗೊಳಿಸುವಂತೆ ಒತ್ತಾಯಿಸಿದ್ದಾರೆ. ಎಲ್ಲ ವಿಭಾಗಗಳ ಲ್ಲಿ ಸೇವೆ ಸಲ್ಲಿಸುವ ಎಲ್ಲ ನೌಕರರಿಗೆ ನೇರಪಾವತಿಯಡಿ, ತಂದು ವಿಶೇಷ ನಿಯಮಗಳನ್ವಯ ಖಾಯಂ ಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.11338 ಹುದ್ದೆಗಳು ಹೊರತುಪಡಿಸಿ, ಉಳಿದ ಎಲ್ಲಾ ಪೌರಕಾರ್ಮಿಕರನ್ನು ಕಾಯಂಗೊಳಿಸಬೇಕು. ಪೌರ ನೌಕರರಿಗೂ ಕೆಜಿಐಡಿ ಯೋಜನೆಯನ್ನು ಜಾರಿಗೊಳಿಸಬೇಕು. ಅತ್ಯಂತ ಕನಿಷ್ಠ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ,ನಗದು ರಹಿತಾ ಚಿಕಿತ್ಸೆ, ಜ್ಯೋತಿ ಸಂಜೀವಿನಿ ಯೋಜನೆ ಪೌರ ನೌಕರರಿಗೂ ವಿಸ್ತರಿಸಬೇಕು. ದೇಶದ ಎಲ್ಲಾ ರಾಜ್ಯಗಳಲ್ಲಿ ಎನ್. ಪಿ. ಎಸ್ರದ್ದು.ಮಾಡಿ, ಓ ಪಿ.ಎಸ್ ಜಾರಿ ಮಾಡಿದ್ದು,ರಾಜ್ಯದಲ್ಲಿ ವಿಶೇಷವಾಗಿ ಪೌರ ಸೇವಾ ನೌಕರರುಗಳನ್ನು ಎನ್ ಪಿ ಎಸ್ ರದ್ದುಮಾಡಿ, ಒ ಪಿಎಸ್ ಜಾರಿಗೊಳಿಸಬೇಕು ಎಂದು ಸಲ್ಲಿಸಿ ರುವ ಮನವಿಯಲ್ಲಿ ಒತ್ತಾಯಿಸಿದ್ದಾರೆ. ತಮ್ಮ ಬೇಡಿಕೆಗಳು ಈಡೇರುವವರೆಗೂ, ಕಪ್ಪು ಬಟ್ಟೆ ಧರಿಸಿ, ಕರ್ತವ್ಯ ದೊಂದಿಗೆ ತಾವು ಅನಿರ್ದಿಷ್ಟಾವಧಿ ವರೆಗೆ ಮುಷ್ಕರ ಆರಂಭಿಸಿರುವುದಾಗಿ ತಿಳಿಸಿದ ಪೌರಕಾರ್ಮಿಕರು, ಇದರಿಂದ ಸಾರ್ವಜನಿಕರಿಗೆ, ಯಾವುದೇ ರೀತಿಯಲ್ಲಿ ಪೌರ ಸೇವೆಗಳಿಂದ ತೊಂದರೆಯಾಗಲಾರದು ಕೈಗೆ ಕಪ್ಪು ಬಟ್ಟೆ ಧರಿಸಿ ಕರ್ತವ್ಯ ನಿರ್ವಹಿಸುತ್ತೇವೆ ಎಂದು ಸ್ಪಷ್ಟಪಡಿಸಿದರು. ಮನವಿ ಸ್ವೀಕರಿಸಿದ ಪೌರಾಯುಕ್ತ ಉದಯಕುಮಾರ್ ಬಿ.ಟಿ. ಅವರು, ಸ್ವೀಕರಿಸಿರುವ ಮನವಿಯ ಪ್ರತಿಯನ್ನು ಯಥಾವತ್ತಾಗಿ ರಾಜ್ಯ ಪೌರಾಡಳಿತ ನಿರ್ದೇಶನಾಲಯ,ಜಿಲ್ಲಾಧಿಕಾರಿಗಳಿಗೆ, ಸಂಬಂಧಿಸಿದ ಅಧಿಕಾರಿಗಳಿಗೆ ರವಾನಿಸುವುದಾಗಿ ಹೇಳಿದರು. ಮನವಿ ಸಲ್ಲಿಕೆ ಮುಂಚೂಣಿಯಲ್ಲಿ ಸಂಘಟನೆಯ ಮುಖಂಡರಾದ, ಉಪಾಧ್ಯಕ್ಷೆ ಮಾಳಮ್ಮ ಬಿರಾಳ, ಕಾರ್ಯದರ್ಶಿ ಮಧು ಸಾತೇನಹಳ್ಳಿ, ವ್ಯವಸ್ಥಾಪಕ.ಎಲ್. ಶಂಕರಿ್ಡ.ಡಿ. ಕಾಟಿ, ಸುರೇಶ ಚಲವಾದಿ, ನಾಗರತ್ನ ಕೋರಿ, ರಾಜೇಶ್ವರಿ ಹರಪನಹಳ್ಳಿ, ಪ್ರಭು ಬಾಲೆಹೊಸೂರು, ಗಣೇಶ ಫಾಸಿಗಾರ್, ಜಿ.ಎಂ.ವಾಣಿಶ್ರೀ, ಮಂಜುಳಾದೇವಿ ಮುಂಡಾಸದ, ಮಧು ಕಂಬಳಿ, ರಾಘವೇಂದ್ರ ಗಾವಡೆ, ನಿಂಗಪ್ಪ ಮುದಿ ಕರಿಯಪ್ಪನವರ, ನಾಗರಾಜ ಪೂಜಾರ್, ಎಲ್ಲಪ್ಪ ಮರಿಯಮ್ಮನವರ, ಲಲಿತವ್ವ ಜಲ್ಲಾವರ, ದುರ್ಗವ್ವ ಶಿವಪ್ಪನವರ ನಾಗರಾಜ ನಂದಿಹಳ್ಳಿ, ದಿಳ್ಳೆಪ್ಪಾ, ಕುಬೇರ, ರಾಜೇಂದ್ರ, ಪರಮೇಶ್,ನೀಲಪ್ಪ,ನಾಗರಾಜ್,ಕವಿತಾ, ರಮೇಶ್ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.