ಹೊಸಪೇಟೆ

ಪೌರ ಕಾರ್ಮಿಕ ದಿನಾಚರಣೆ

ಪೌರ ಕಾರ್ಮಿಕ ದಿನಾಚರಣೆ

ಹೊಸಪೇಟೆ  23: ನಗರ ಸಭೆ ಹೊಸಪೇಟೆ ವಿಜಯನಗರ ಜಿಲ್ಲಾ ಹಾಗೂ ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘ ಹೊಸಪೇಟೆ ವಿಜಯನಗರ ಜಿಲ್ಲಾ ಇವರ ಸಂಯುಕ್ತಾಶ್ರಯದಲ್ಲಿ  ಪೌರ ಕಾರ್ಮಿಕ ದಿನಾಚರಣೆಯನ್ನು ಹಮ್ಮಿಕೊಳ್ಳಲಾಯಿತು. 

ಪೌರ ಕಾರ್ಮಿಕರ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹೆಚ್ ಏನ್ ಮೊಹಮ್ಮದ್ ಇಮಾಮ್ ನಿಯಯಾಜಿರವರು ಎಷ್ಟೇ ಅತ್ಯಾಧುನಿಕ ತಂತ್ರಜ್ಞಾನದ ಕಾಲಮಾನದಲ್ಲಿ ಜೀವಿಸುತ್ತಿದ್ದರು ಮನುಷ್ಯನ ಜೀವಿತವಧಿ ನಿರ್ಧಾರವಾಗುವುದು ಅವರವರ ಅರೋಗ್ಯದ ಮೇಲೆ ನಿಂತಿರುತ್ತದೆ. ಆದರೆ ಅರೋಗ್ಯ ಸುತ್ತ ಮುತ್ತಲಿನ ಸ್ವಚ್ಛತೆ ಮೇಲೆ ಅವಲಂಬಿತವಾಗಿರುತ್ತದೆ. ಸ್ವಚ್ಛತೆ ಕಾಪಾಡುವವರು ನಮ್ಮ ಪೌರ ಕಾರ್ಮಿಕರಾಗಿರುತ್ತಾರೆ.  ನಗರದಲ್ಲಿ ಹಲವಾರು ಕಾಯಿಲೆಗಳಿಂದ ಅನಾರೋಗ್ಯ ಉಂಟಾದ ಮೇಲೆ ಚಿಕಿತ್ಸೆ ನೀಡುವ ಬದಲು ಪ್ರಾರಂಭದಲಿಯೇ ಸ್ವಚ್ಛತೆ ಕಾಪಾಡಿ ಕೊಳ್ಳುವಲ್ಲಿ ನಗರ ಸಭೆಯ ಪೌರ ಕಾರ್ಮಿಕರು ಪ್ರಮುಖ ಪತ್ರವನ್ನು ವಹಿಸುತ್ತಾರೆ ಆದ್ದರಿಂದ ವಿಜಯ ನಗರ ಕ್ಷೆಜತ್ರದ ಪರವಾಗಿ ಹಾಗೂ ವೇದಿಕೆಯ ಪರವಾಗಿ ಅಭಿನಂದನೆಗಳನ್ನು ತಿಳಿಸುತ್ತೇನೆ. 

ಈ ನಿಟ್ಟಿನಲ್ಲಿ  ಪ್ರತಿಯೊಬ್ಬ ಪೌರ ಕಾರ್ಮಿಕರು ಕೇವಲ ಕರ್ತವ್ಯದ್ಲಲಿ ನಿರತರಾಗದೆ ವೈಯಕ್ತಿಕ ರಕ್ಷಣೆಯ ಜವಾಬ್ದಾರಿಯನ್ನು ಸ್ವತಃ ತೆಗೆದುಕೊಳ್ಳಬೇಕಾಗುತ್ತದೆ. ಕಾರಣ ಇಡೀ ಕುಟುಂಬದ ಜವಾಬ್ದಾರಿ ನಿಮ್ಮ ಹೆಗಲಮೇಲಿರುತ್ತದೆ. ಹಾಗೂ ಯಾವುದೇ ಕಾರಣಕ್ಕೂ ದುಶ್ಚಟ ಗಳಿಗೆ ಬಲಿಯಾಗಬಾರದು.  ಮಕ್ಕಳ ರಕ್ಷಣೆ ಅವರ ವಿದ್ಯಾಭ್ಯಾಸದ ಕಡೆಗೂ ಗಮನ ಹರಿಸಬೇಕು ಹಾಗೂ ಅವರ ಉನ್ನತ ಶಿಕ್ಷಣ ವನ್ನು ನೀಡಿ ಉತ್ತಮ ಪ್ರಜೆಗಳನ್ನಾಗಿ ನಿರ್ಮಾಣ ಮಾಡಬೇಕೆಂದರು. ಹಾಗೂ ಪೌರ ಕಾರ್ಮಿಕರು ಸರಕಾರದಿಂದ ನೀಡುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು.. ಈ ನಿಟ್ಟಿನಲ್ಲಿ ನಿಮ್ಮ ಬೇಡಿಕೆಗಳ ಹೋರಾಟಗಳ ಪರವಾಗಿ ಸದಾ ನನ್ನ ಬೆಂಬಲ ಇರುತ್ತದೆ. ಹಾಗೂ ಈ ಹಿಂದೆ ಮನೆಗಳ ಪರವಾಗಿ  ಅರ್ಜಿಗಳನ್ನು ಸಲ್ಲಿಸಿದ್ದೀರಿ. ಅವುಗಳನ್ನು ಶಾಸಕರ ಗಮನಕ್ಕೆ ಹಾಗೂ ಸಚಿವರ ಗಮನಕ್ಕೆ ತಂದು ಬೇಗ  ಮನೆಗಳು ಫಲಾನುಭವಿಗಳಿಗೆ ತಲುಪುವಂತೆ ಸಚಿವರಿಗೆ ಮನವಿ ಮಾಡುತ್ತೇನೆಂದರು. 

ನಂತರ ಕಾರ್ಯಕ್ರಮದಲ್ಲಿ ಪೌರಾಯುಕ್ತರದ  ಬಿ. ಟಿ. ಬಂಡಿ ವಡ್ಡರ ರವರು ಮಾತನಾಡಿ ನಾವೆಲ್ಲರೂ ಒಂದೇ ಕುಟುಂಬದಂತೆ ಜೀವಿಸೋಣ. ನಿಮ್ಮ ಎಲ್ಲ ಬೇಡಿಕೆಗಳನ್ನು ಶೀಘ್ರ ದ್ಲಲಿಯೇ ಕಾರ್ಯ ರೂಪಕ್ಕೆ ಬರುವಂತೆ ಮಾಡುತ್ತೇನೆ. ಹಾಗೂ ನಿಮ್ಮ ಕಾರ್ಯ ಒಂದು ಶಿಸ್ತಿನ ಕಾರ್ಯಕ್ಕೆ ಹೊಸಪೇಟೆ ನಗರದ ಪರವಾಗಿ ಅಭಿನಂದನೆಗಳನ್ನು ತಿಳಿಸಿದರು.  

ಕೊನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವಿಜೇತರಾದವರೆಲ್ಲರಿಗೆ ಬಹುಮಾನಗಳನ್ನು ವಿತರಿಸಿದರು. ಈ  ಒಂದು ಕಾರ್ಯಕ್ರಮದ್ಲಲಿ ರೂಪೆಶ್ ಕುಮಾರ ಮಾನ್ಯ ಪೌರಾಯುಕ್ತರಾದ ಬಿ. ಟಿ ಬಂಡಿ  ವಡ್ಡರ, ಜಿ ನೀಲಕಂಠ, ಸುಂಕಪ್ಪ, ಬಿ. ಸತೀಶ್, ಬಿ ಕೃಷ್ಣ ಮೂರ್ತಿ, ಖಾಜಾ ಹುಸೇನ್, ಬಿ ಮರೆಣ್ಣ, ಜಗನ್ನಾಥ್ ಹೆಚ್, ವಿಜಯ ಕುಮಾರ್, ಸಲ್ಮಾನ್, ಬಿ ಎಮ್ ನಾಗೇಂದ್ರ, ನೂರಾರು ಪೌರ ಕಾರ್ಮಿಕರು ಉಪಸ್ಥಿತರಿದ್ದರು. 


ಸುದ್ದಿ ಓದಿ