ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ ""ಬಿಲ್ಡ್ ಎಕ್ಸ್ಪೋ ಪ್ರದರ್ಶನ
ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ ""ಬಿಲ್ಡ್ ಎಕ್ಸ್ಪೋ ಪ್ರದರ್ಶನ
ರಾಣೇಬೆನ್ನೂರು 24: ಭೂಮಿ ಮೇಲೆ ಜನ್ಮ ತಾಳಿದ ಪ್ರತಿಯೊಬ್ಬ ಮಾನವ ಜೀವಿಗೆ ತಮ್ಮ ಜನ್ಮವನ್ನು ಸಾರ್ಥಕತೆಗೊಳಿಸಿಕೊಳ್ಳಲು ತಮ್ಮದೇ ಆದ ಸ್ವಂತ ಮನೆಯ ಅವಶ್ಯಕತೆ ಇದ್ದೆ ಇರುತ್ತದೆ. ಇದು ಪ್ರತಿಯೊಬ್ಬರ ಕನಸು ಅದರ ಪರಿಪೂರ್ಣತೆಯ ನನಸಿಗಾಗಿ, ಫಾರ್ಮ್ ಆಫ್ ರಾಣೇಬೆನ್ನೂರು ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ "",ಬಿಲ್ಡ್ ಎಕ್ಸ್ಪೋ -2024."" ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ವೀರೇಶ್ ಮಕರಿ ಹೇಳಿದರು.
ಅವರು ಇಲ್ಲಿನ ರಾಜೇಶ್ವರಿ ನಗರದ ಸಂಘದ ಕಚೇರಿಯಲ್ಲಿ ಕರೆಯಲಾಗಿದ್ದ, ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು. ಇದೆ ತಿಂಗಳು ಅಕ್ಟೋಬರ್ 25 ರಿಂದ 27 ರವರೆಗೆ 3 ದಿವಸಗಳ ಕಾಲ ಇಲ್ಲಿನ ಮೃತ್ಯುಂಜಯ ಕಲ್ಯಾಣ ಮಂಟಪದಲ್ಲಿ ಬಿಲ್ಡ್ ಎಕ್ಸ್ ಪ್ರೊ ವಿಶೇಷ ಕಟ್ಟಡ ಸಾಮಗ್ರಿಗಳ ಪ್ರದರ್ಶನ ನಡೆಯಲಿದೆ. ವಾಣಿಜ್ಯ ನಗರದ ಮತ್ತು ಜಿಲ್ಲೆಯ ರಾಣೇಬೆನ್ನೂರಲ್ಲಿ, ಸಂಘವು ತನ್ನ ಪ್ರಾಯೂಜಕತ್ವದಲ್ಲಿ ಮೂರನೇ ಬಾರಿ, ಪ್ರದರ್ಶನ ಆಯೋಜಿಸಿದೆ.
ಸಾರ್ವಜನಿಕರು, ನೂತನ ಮನೆಗಳ ನಿರ್ಮಾಣ ಮಾಡುವವರು ಈ ಪ್ರದರ್ಶನದಲ್ಲಿ ಪಾಲ್ಗೊಂಡು, ಮುಂಜಾನೆ 10 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ತೆರೆದಿರುತ್ತದೆ. ಆಕರ್ಷಕ ಮತ್ತು ಅತ್ಯಾಧುನಿಕ ಕಟ್ಟಡ ಸಾಮಗ್ರಿಗಳ ಕುರಿತಂತೆ ರಾಜ್ಯದ 60ಕ್ಕೂ ಹೆಚ್ಚು ತಮ್ಮ ಆಕರ್ಷಕ ಮತ್ತು ಅತ್ಯಾಧುನಿಕ ಉತ್ಪನ್ನಗಳ ಕಟ್ಟಡ ವಸ್ತುಗಳನ್ನು ವೀಕ್ಷಿಸಬೇಕು.
ಎಂದು ಅವರು ಸಾರ್ವಜನಿಕರಲ್ಲಿ ಕೋರಿದರು. 25ರಂದು ಶುಕ್ರವಾರ ಮುಂಜಾನೆ ಪ್ರದರ್ಶನದ ಉದ್ಘಾಟನೆಯನ್ನು ಶಾಸಕ ಪ್ರಕಾಶ್ ಕೋಳಿವಾಡ ನೆರವೇರಿಸುವರು. ನಗರಸಭೆ ಪೌರಾಯುಕ್ತ ಎಫ್.ಐ. ಇಂಗಳಗಿ, ನಗರ ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಬಿ.ಆರ್ ರವಿಕಿರಣ್ ಸೇರಿದಂತೆ ಮತ್ತಿತರ ಗಣ್ಯರು, ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಸಂಘದ ಅಧ್ಯಕ್ಷ ವೀರೇಶ್ ಮಕರಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಮಾಧ್ಯಮಗೋಷ್ಠಿಯಲ್ಲಿ ಸಂಘಟನೆಯ ಮುಖಂಡರಾದ ಅಶೋಕ್ ಎಸ್ ಯೋಗಿ, ಆನಂದ್ ಮೇಡಾ, ಜಗನ್ನಾಥ ಮಲ್ಲೂರ, ಕೆ. ಎನ್.ಷಣ್ಮುಖ, ವಿ.ವಿ. ಮರಬಸಣ್ಣನವರ, ಮುರುಗೇಶ್ ಇಚ್ಚಂಗಿ ದೇವರಾಜ ಹುಲ್ಮನಿ, ಶುಭಾಸ್ ಜನ್ನು, ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು